ಬಿಸಿ ಬಿಸಿ ಸುದ್ದಿ

ಛಾಯಾ ಚಿತ್ರಗ್ರಾಹಕರ ಬೇಡಿಕೆ ಶಾಸಕರಿಗೆ ತಿಳಿಸುವೆವು; ತಾತಾ

ಸುರಪುರ: ನಗರದ ಮಹೇಶ್ವರಿ ಮಂಗಲ ಭವನದಲ್ಲಿ ಸುರಪುರ ತಾಲೂಕು ಛಾಯಾ ಚಿತ್ರಗ್ರಾಹಕರ ಸಂಘದ ವತಿಯಿಂದ 183ನೇ ವಿಶ್ವ ಛಾಯಾ ಚಿತ್ರಗ್ರಾಹಕರ ದಿನಾಚರಣೆಯನ್ನು ಆಯೋಜಿಸಲಾಗಿತ್ತು.ದೇವಾಪುರ ಜಡಿಶಾಂತಲಿಂಗೇಶ್ವರ ಹಿರೇಮಠದ ಶೀವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು ಸುರಪುರ ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕ ಅವರು ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜಾ ಹನುಮಪ್ಪ ನಾಯಕ (ತಾತಾ) ಮಾತನಾಡಿ,ಇಂದು ಮೊಬೈಲ್‍ಗಳ ಭರಾಟೆಯಿಂದಾಗಿ ಛಾಯಾ ಚಿತ್ರಗ್ರಾಹಕ ರಂಗ ಸಮಕಷ್ಟದಲ್ಲಿದೆ,ಅಲ್ಲದೆ ಕೈಯಲ್ಲಿ ಮೊಬೈಲ್ ಇರುವ ಎಲ್ಲರು ಛಾಯಾ ಚಿತ್ರಗ್ರಾಹಕರು ಎನ್ನುವಂತಾಗಿದೆ.ಆದರೆ ನುರಾರು ವರ್ಷಗಳಿಂದ ಈ ವೃತ್ತಿಯನ್ನು ಮಾಡಿಕೊಂಡು ಬರುತ್ತಿರುವ ತಮ್ಮೆಲ್ಲರ ಸೇವೆ ಅಮೋಘವಾಗಿದೆ ಎಂದರು.ಅಲ್ಲದೆ ತಾವುಗಳು ಮನವಿ ಮಾಡಿಕೊಂಡಂತೆ ನಗರದಲ್ಲಿ ಛಾಯಾ ಚಿತ್ರಗ್ರಾಹಕರ ಭವನ ನಿರ್ಮಾಣದ ಮನವಿಯನ್ನು ಶಾಸಕರಿಗೆ ತಿಳಿಸಲಾಗುವುದು ಎಂದರು.ಅಲ್ಲದೆ ಇಲ್ಲಿ ಶಾಸಕರು ಭವನ ನಿರ್ಮಿಸಿಕೊಡುವ ಭರವಸೆ ಇದೆ,ಆದರೆ ಅದಕ್ಕಿಂತ ಮೊದಲು ಜಿಲ್ಲೆಯಲ್ಲಿ ಮೊದಲು ಭವನ ಆಗಬೇಕು ಎಂದರು.

ಮುಖ್ಯ ಅತಿಥಿಗಳಾಗಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ. ರಾಜಾ ವೆಂಕಪ್ಪ ನಾಯಕ ಮಾತನಾಡಿ, ನೂರಾರು ವರ್ಷಗಳ ಕಾಲ ನೆನಪಿಡುವಂತ ಚಿತ್ರಗಳನ್ನು ತೆಗೆಯುವ ಛಾಯಾಗ್ರಾಹಕರ ಕಾರ್ಯ ಶ್ರೇಷ್ಠವಾದದು. ಅವರು ತೆಗೆಯುವಂತ ಚಿತ್ರಗಳನ್ನು ಸಾಮಾನ್ಯರಿಂದ ಕ್ಲಿಕ್ಕಿಸಲು ಸಾಧ್ಯವಿಲ್ಲ. ಛಾಯಾಗ್ರಾಹಕರು ತಮ್ಮ ಹಕ್ಕುಗಳನ್ನು ಕಾನೂನಾತ್ಮಕವಾಗಿ ಪಡೆಯಲು ಅರ್ಹರು. ಅದರಂತೆ ಛಾಯಾಗ್ರಾಹಕರಿಗೆ ಭವನದ ಅವಶ್ಯಕತೆಯಿದೆ ಎಂಬುದಾಗಿ ಹೇಳುತ್ತಿದ್ದಾರೆ. ಅದನ್ನು ಒದಗಿಸಿಕೊಡುವಂತ ಕೆಲಸ ಜನಪ್ರತಿನಿಧಿಗಳು ಮಾಡಬೇಕು ಎಂದರು.ನಂತರ ಜಿಲ್ಲಾಉಪಾಧ್ಯಕ್ಷ ತಾಯಪ್ಪ ಬೊಮ್ಮನ ಮಾತನಾಡಿ ನಗರದಲ್ಲು ಛಾಯಾ ಚಿತ್ರಗ್ರಾಹಕರ ಭವನ ನಿರ್ಮಾಣಕ್ಕೆ ಮನವಿ ಮಾಡಿದರು.

ಸಹಾಯ: ಖಾಸ್ಗತೇಶ್ವರ ನಾಟ್ಯ ಸಂಘದ ವಿದ್ಯಾರ್ಥಿಗಳು ಭರತ ನಾಟ್ಯ ಪ್ರದರ್ಶಿಸಿದರು. ಮಕ್ಕಳ ನೃತ್ಯ ಮೆಚ್ಚಿ ಸಂಸ್ಥಾನದ ಅರಸ ರಾಜಾ ಕೃಷ್ಣಪ್ಪ ನಾಯಕ ಹಾಗೂ ರಾಜಾ ಹನುಮಪ್ಪ ನಾಯಕ (ತಾತಾ) ಧನ ಸಹಾಯ ಮಾಡಿದರು.ಅಲ್ಲದೆ ಇದೇ ಸಂದರ್ಭದಲ್ಲಿ ರಾಜ್ಯ ಸರಕಾರದಿಂದ ತಾಲೂಕುಮಟ್ಟದ ಉತ್ತಮ ತಾಲೂಕು ವೈದ್ಯಾಧಿಕಾರಿ ಪ್ರಶಸ್ತಿ ಪಡೆದ ಡಾ. ರಾಜಾ ವೆಂಕಪ್ಪ ನಾಯಕ ಅವರನ್ನು ಸನ್ಮಾನಿಸಲಾಯಿತು.

ಮುಖಂಡ ಶಂಕರ ನಾಯಕ, ಪಿಎಸ್‍ಐ ಕೃಷ್ಣಾ ಸುಬೇದಾರ, ಛಾಯಾಚಿತ್ರ ಗ್ರಾಹಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜಯ್ಯ ಸ್ವಾಮಿ,ತಾಲೂಕು ಅಧ್ಯಕ್ಷ ನಾಗರಾಜ ಅಲದರ್ತಿ, ಸೋಮನಾಥ ಪಾಲೇಪುರೆ, ರಾಹುಲ್ ಗಣಪೂರಕರ್, ಚಂದ್ರಶೇಖರ ಸಿ, ಶ್ರೀನಿವಾಸ ದುರ್ಗಮ, ವೀರೇಶ ಹೂಗಾರ, ಅಮರೇಶ ಕುಂಬಾರ, ಮುರಳಿ ಅಂಬುರೆ, ವಿಜಯಕುಮಾರ ದೇವಾಪುರ,ಆನಂದ ಕುಂಬಾರ ಸೇರಿದಂತೆ ಸುರಪುರ,ಹುಣಸಗಿ,ಶಹಾಪುರ,ಯಾದಗಿರಿ ಹಾಗೂ ಗುರುಮಠಕಲ್ ತಾಲೂಕಿನ ಅನೇಕ ಜನ ಛಾಯಾ ಚಿತ್ರಗ್ರಾಹಕರು ಸೇರಿ ಅನೇಕರಿದ್ದರು.ಪ್ರಕಾಶ ಅಲಬನೂರ ನಿರೂಪಿಸಿದರು,ಘನ ಶಾಮ ಪಾಣಿಭಾತೆ ಸ್ವಾಗತಿಸಿ ವಂದಿಸಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

10 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

10 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago