ಬಿಸಿ ಬಿಸಿ ಸುದ್ದಿ

ಸುಂದರ ಸಮಾಜ ನಿರ್ಮಾಣಕ್ಕೆ ಹಿರಿಯರ ಮಾರ್ಗದರ್ಶನ ಅಗತ್ಯ

ಕಲಬುರಗಿ: ಸಮಾಜಕ್ಕೆ ಹಿರಿಯರುಅನುಪಯುಕ್ತ ಮತ್ತು ಭಾರ ಎಂಬ ಮನೋಭಾವನೆ ಬೇಡ. ಅವರು ಸಮಾಜ, ದೇಶದ ಅವಿಭಾಜ್ಯ ಅಂಗ.ಕಿರಿಯರು, ಹಿರಿಯರಲ್ಲಿರುವಜ್ಞಾನ, ಬುದ್ಧಿ, ಅನುಭವವನ್ನು ಪಡೆದು ಮುನ್ನಡೆಯಬೇಕು.ಇದರಿಂದ ಬುದ್ಧಿವಂತ, ಹೃದಯವಂತ, ಸುಂದರ ಸಮಾಜ ನಿರ್ಮಾಣವಾಗಲು ಸಾಧ್ಯವಿದೆಎಂದುಉಪನ್ಯಾಸಕ, ಚಿಂತಕಎಚ್.ಬಿ.ಪಾಟೀಲ ಹೇಳಿದರು.

ನಗರದಜಗತ್ ಬಡಾವಣೆಯಅಗಸ್ಥ್ಯತೀರ್ಥ ಅವಿಭಕ್ತ ಪರಿವಾರದ ಮನೆಯ ಪ್ರಾಂಗಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ‘ವಿಶ್ವಅಜ್ಜ-ಅಜ್ಜಿಯಂದಿರ ದಿನಾಚರಣೆ’ ಪ್ರಯುಕ್ತಅಜ್ಜ-ಅಜ್ಜಿಯಂದಿರಗೆ ಗೌರವಿಸಿ ಅವರು ಮಾತನಾಡುತ್ತಿದ್ದರು.
ಎಂತಹ ಸಂದರ್ಭದಲ್ಲಿಯೂ ವಯೋವೃದ್ಧರನ್ನು ವೃದ್ಧಾಶ್ರಮಕ್ಕೆ ನೂಕದೆ, ಅವರಜೊತೆಗಿದ್ದುಆರೈಕೆ ಮಾಡಬೇಕು.

ಹಿಂದಿನ ಕಾಲದಲ್ಲಿ ಮನೆಯಲ್ಲಿರುವಅಜ್ಜ-ಅಜ್ಜಿತಮ್ಮ ಮೊಮ್ಮಕ್ಕಳಿಗೆ ಕಥೆಗಳು, ಹಾಡುಗಳು, ಒಗಟುಗಳ ಮೂಲಕ ಮಾನವೀಯ ಮೌಲ್ಯಗಳನ್ನು ಬಾಲ್ಯದಿಂದಲೇ ಬಿತ್ತುವಕಾರ್ಯ ಮಾಡುತ್ತಿದ್ದರು.ಅದನ್ನು ಆಲಿಸಿ ಬೆಳೆದವರು ಮುಂದೆತಮ್ಮಜೀವನದಲ್ಲಿಉತ್ತಮ ಸಂಸ್ಕಾರವಂತ ವ್ಯಕ್ತಿಗಳಾಗಿ ಹೊರಹೊಮ್ಮಿದ್ದಾರೆ.ಆದರೆ ಈಗಿನ ಮಕ್ಕಳು, ಯುವಕರು ಹಿರಿಯರ ಮಾತು ಕೇಳದೆ, ಮೋಬೈಲ್, ಟಿ.ವಿ ವೀಕ್ಷಣೆಯಲ್ಲಿ ಮುಳುಗುತ್ತಿರುವ, ವಿದೇಶಿ ಸಂಸ್ಕøತಿ ಅನುಸರಿಸಿ, ತಮ್ಮ ಪಾಲಕ-ಪೋಷಕರನ್ನು ವೃದ್ಧಾಶ್ರಮಕ್ಕೆ ನೂಕುತ್ತಿರುವುದು, ನಾಗರಿಕ ಸಮಾಜತಲೆತಗ್ಗಿಸುವಂತಾಗಿದೆಎಂದು ವಿಷಾದ ವ್ಯಕ್ತಪಡಿಸಿದರು.

ನ್ಯಾಯವಾದಿ ಡಾ.ಸುನಿಲಕುಮಾರಎಚ್.ವಂಟಿ ಮಾತನಾಡಿ, ತಂದೆ-ತಾಯಿಯೇದೇವರು.ಯಾರುತಮ್ಮ ಪಾಲಕ-ಪೋಷಕರನ್ನುಚೆನ್ನಾಗಿಆರೈಕೆ ಮಾಡುವುದು, ಪ್ರೇಮದಿಂದಕಾಣುತ್ತಾರೋ, ಅವರುದೇವರನ್ನು ಹುಡುಕಿಕೊಂಡು ಬೇರೆಎಲ್ಲಿಯೂಕೂಡಾ ಹೋಗಬೇಕಾದದ್ದುಅಗತ್ಯವಿಲ್ಲ. ಒಂದು ವೇಳೆ ತಂದೆ-ತಾಯಿಗೆ ನೋವು ನೀಡಿ, ಜಗತ್ತಿನಲ್ಲಿ ನೀವು ಎಲ್ಲಿಗೇ ಹೋದರೂ, ಖಂಡಿತವಾಗಿಯೂ ನಿಮಗೆ ಒಳ್ಳೆಯದಾಗಲು ಸಾಧ್ಯವಿಲ್ಲೆಕಟುಸತ್ಯವನ್ನು ಪ್ರಸ್ತುತಯುವಜನತೆ ಮರೆಯಬಾರದುಎಂದು ಮಾರ್ಮಿಕವಾಗಿ ನುಡಿದರು.

ಅಜ್ಜ-ಅಜ್ಜಿಯಂದಿರು, ಅವರ ಮಕ್ಕಳು, ಮೊಮ್ಮಕ್ಕಳು, ಮರಿ-ಮೊಮ್ಮಕ್ಕಳು ಇವರೆಲ್ಲರೂಒಂದೆಡೆಜೊತೆಗೂಡಿ ಸಂತೋಷಪಡುತ್ತಿದ್ದ ಸಂದರ್ಭಕಣ್ಣಿಗೆದೊಡ್ಡ ಹಬ್ಬವಾಗಿತ್ತು.ಇಂತಹಅಪರೂಪದ ಸಂದರ್ಭಕ್ಕೆ ಸಾಕ್ಷಿಯಾದವರುಧನ್ಯತಾಭಾವ ವ್ಯಕ್ತಪಡಿಸಿದರು.ಹಿರಿಯರುತಮ್ಮಅನುಭವವನ್ನು ಹಂಚಿಕೊಂಡರು.ಒಟ್ಟಾರೆಯಾಗಿಇದೊಂದುತುಂಬಾ ವಿರಳವಾದ ಕಾರ್ಯಕ್ರಮಎಂದು ಆಗಮಿಸಿದ್ದ ಎಲ್ಲರೂತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು.

ಶಾಂತಾಬಾಯಿಅಗಸ್ಥ್ಯತೀರ್ಥ, ಶಿವಲೀಲಾ ಅಗಸ್ಥ್ಯತೀರ್ಥ, ಮಹಾದೇವಿ ಅಗಸ್ಥ್ಯತೀರ್ಥ, ಮಲ್ಲಿಕಾರ್ಜುನಅಗಸ್ಥ್ಯತೀರ್ಥ, ನಾಗಭೂಷಣಅಗಸ್ಥ್ಯತೀರ್ಥ, ಶರಣಅಗಸ್ಥ್ಯತೀರ್ಥ, ಸಂಗಮೇಶ ಅಗಸ್ಥ್ಯತೀರ್ಥ, ಜಗದೇವಿ ಪಾಟೀಲ, ಜಗದೇವಿ ತೋಳನೂರ್, ಅನ್ನಪೂರ್ಣ ಪಾಟೀಲ, ಶ್ಲೋಕ್ ಪಾಟೀಲ, ಲಕ್ಷ್ಮೀ ಗೊಳೇದ್, ಶರಣದುಧನಿ ಸೇರಿದಂತೆಅಗಸ್ಥ್ಯತೀರ್ಥ ಪರಿವಾರದವರು, ಬಡಾವಣೆಯ ನಾಗರಿಕರು, ಮಹಿಳೆಯರು, ಮಕ್ಕಳು ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

17 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago