ಶಹಾಬಾದ: ರಾಷ್ಟ್ರೀಯ ಹೆದ್ದಾರಿ ೧೫೦ ದೇವನತೆಗನೂರ ಸಮೀಪದಲ್ಲಿ ರಸ್ತೆಯ ಮೇಲೆ ದೊಡ್ಡದಾದ ಗುಂಡಿಯಲ್ಲಿ ಸಾಗುತ್ತಿರುವ ವಾಹನಗಳ ಅಪಘಾತಗಳಾಗುವ ಸಾಧ್ಯತೆಯಿರುವುದನ್ನು ಕಂಡು ಶಹಾಬಾದ ಉಪವಿಭಾಗದ ಹೈವೆ ಪೆಟ್ರೋಲಿಂಗ್ ಎಎಸ್‌ಐ ಅಶೋಕ ಕಟ್ಟಿ ಹಾಗೂಸಿಬ್ಬಂದಿ ವಿಠ್ಠಲ್ ಅವರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ತಿಳಿಸಿ ರಸ್ತೆ ದುರಸ್ತಿ ಮಾಡಿಸಿ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಕಳೆದ ಎರಡು ತಿಂಗಳಿನಿಂದ ದೇವನತೆಗನೂರಿನ ಹಳ್ಳದ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ದೊಡ್ಡದಾದ ಗುಂಡಿ ಬಿದ್ದಿದೆ.ಇದರಿಂದ ಈಗಾಗಲೇ ಈ ಹಿಂದೆ ಕೆಲವು ಅಪಘಾತಗಳಾಗಿ ನಾಲ್ಕಾರು ಜನ ಸಾವನಪ್ಪಿದ್ದಾರೆ.ಆಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ರಸ್ತೆ ದುರಸ್ತಿ ಮಾಡಿದ್ದರು. ಆದರೆ ಮತ್ತೆ ಮೇಲಿನ ಎಲ್ಲ ಪದರು ಕಿತ್ತಿ ಕಂಕರ್‌ಗಳು ಮೇಲೆದ್ದು ದೊಡ್ಡದಾದ ಗುಂಡಿ ಬಿದ್ದಿದೆ.ಈ ಬಗ್ಗೆ ಅನೇಕ ಬಾರಿ ತಿಳಿಸಿದರೂ ಯಾರು ಈ ಕಡೆ ಗಮನಹರಿಸಿರುವುದಿಲ್ಲ.ಆದರೆ ರವಿವಾರ ಪೆಟ್ರೋಲಿಂಗ್ ಎಎಸ್‌ಐ ಅಶೋಕ ಕಟ್ಟಿ ಹಾಗೂಸಿಬ್ಬಂದಿ ವಿಠ್ಠಲ್ ಹೋಗುವಾಗ ಲಾರಿ, ಕಾರು ಹಾಗೂ ಬೈಕ್ ಸವಾರರಿಗೆ ರಸ್ತೆಯಲ್ಲಿ ನೀರು ನಿಂತುಕೊಂಡಿರಬಹುದೆಂದು ಹಾಗೇ ವಾಹನ ಚಲಾಯಿಸಿದ್ದರಿಂದ ಗುಂಡಿಯಲ್ಲಿ ಟೈರ್ ಸಿಗಿಬಿದ್ದು ಆಯಾ ತಪ್ಪಿ ಅಪಘಾತವಾಗುವುದು ಅದೃಷ್ಟವಶ ತಪ್ಪಿದನ್ನು ಕಂಡಿದ್ದಾರೆ.ಕೂಡಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ಗುರುರಾಜ ಜೋಷಿ ಅವರನ್ನು ಸಂಪರ್ಕಿಸಿದ್ದಾರೆ.
ದೊಡ್ಡದಾದ ಗುಂಡಿ ಬಿದ್ದಿದೆ.ಗುಂಡಿಯಲ್ಲಿ ನೀರು ತುಂಬಿಕೊಂಡಿದ್ದರಿಂದ ಗುಂಡಿ ಕಾಣದೇ ಅಪಘಾತಕ್ಕೊಳಗಾಗುತ್ತಾರೆ.ಕೂಡಲೇ ದುರಸ್ತಿಗೊಳಿಸಿ ಎಂದು ಮನವಿ ಮಾಡಿದ್ದಾರೆ. ತಕ್ಷಣವೇ ಸ್ಪಂದಿಸಿದ ಎಇಇ ಗುರುರಾಜ ಜೋಷಿ ಅರ್ಧ ಗಂಟೆಯಲ್ಲಿಯೇ ಸಿಬ್ಬಂದಿಗಳಿಗೆ ಕಳಿಸಿ ದುರಸಿಗೊಳಿಸಿ ಗುಂಡಿಯನ್ನು ಮುಚ್ಚುವಂತ ಕೆಲಸ ಮಾಡಿದ್ದಾರೆ.ಇದರಿಂದ ಸಾರ್ವಜನಿಕರ ಅಪಘಾತಗಳನ್ನು ತಡೆಗಟ್ಟುವಲ್ಲಿ ಹೈವೆ ಪೆಟ್ರೋಲಿಂಗ್‌ನ ಸಿಬ್ಬಂದಿಯವರು ಉತ್ತಮ ಕೆಲಸ ಮಾಡಿರುವುದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…