ಬಿಸಿ ಬಿಸಿ ಸುದ್ದಿ

ಕುಸ್ತಿ, ಚೆಸ್ ಸ್ಪರ್ಧೆಯಲ್ಲಿ ಎಸ್‌ಆರ್‌ಜಿ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಆಳಂದ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಕಲಬುರಗಿಯ ಎಸ್‌ಆರ್‌ಎನ್ ಮೆಹ್ತಾ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಶೈಕ್ಷಣಿಕ ವರ್ಷದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಆಳಂದ ಪಟ್ಟಣದ ಎಸ್‌ಆರ್‌ಜಿ ಆಂಗ್ಲ್ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಕುಸ್ತಿ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರಾಥಮಿಕ ವಿಭಾಗದ ಬಾಲಕರ ೪೮-೫೧ ಕೆಜಿ ಕುಸ್ತಿ ಸ್ಪರ್ಧೆಯಲ್ಲಿ ಆದಿತ್ಯ ಸತೀಶಕುಮಾರ ಪ್ರಥಮ ಸ್ಥಾನ, ೪೪-೪೮ ಕೆಜಿ ಕುಸ್ತಿ ಸ್ಪರ್ಧೆಯಲ್ಲಿ ಚೇತನ ಪ್ರಕಾಶ ಪ್ರಥಮ ಸ್ಥಾನ, ಪ್ರೌಢಶಾಲೆ ಬಾಲಕರ ವಿಭಾಗದ  ೬೫-೭೧ ಕೆಜಿ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ  ಇಮ್ರಾನ್ ರಜಾಕ್ ಪ್ರಥಮ ಸ್ಥಾನ ಹಾಗೂ ಪ್ರೌಢಶಾಲಾ ವಿಭಾಗದ ಚೆಸ್ ಸ್ಪರ್ಧೆಯಲ್ಲಿ ಮಹೇಶ್ವರಿ ಆಲೂರೆ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರೂ ಹಾಗೂ ಶಾಸಕರಾದ ಸುಭಾಷ್ ಆರ್ ಗುತ್ತೇದಾರ, ಸಂಸ್ಥೆಯ ಕಾರ್ಯದರ್ಶಿಗಳಾದ ಹರ್ಷಾನಂದ ಗುತ್ತೇದಾರ, ಆಡಳಿತಾಧಿಕಾರಿ ಡಾ. ರಾಘವೇಂದ್ರ ಚಿಂಚನಸೂರ, ಪ್ರಾಚಾರ್ಯೆ ಜ್ಯೋತಿ ವಿಶಾಕ್, ದೈಹಿಕ ಶಿಕ್ಷಕ ಅನೀಲಕುಮಾರ ಸಾಳುಂಕೆ ಸೇರಿದಂತೆ ಶಾಲೆಯ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

emedialine

Recent Posts

ಮಕ್ಕಳ ಸೃಜನಶೀಲತೆ ಅನಾವರಣಗೊಳಿಸಿದ ಮಣ್ಣೆತ್ತಿನ ಸ್ಪರ್ಧೆ

ರಾವೂರ: ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಮಣ್ಣೆತ್ತಿನ ಸ್ಪರ್ಧೆಯ ಅಂಗವಾಗಿ ಹಮ್ಮಿಕೊಂಡಿದ್ದ ಮಣ್ಣೇತ್ತು ಮಾಡುವ ಸ್ಪರ್ಧೆಯಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು…

2 hours ago

ವಾಡಿ: ಕುಸ್ತಿ ಪಂದ್ಯಾವಳಿ: 50ಗ್ರಾಂ.ಬೆಳ್ಳಿ ಕಡಗ ವಿಜೇತ ಮಂಜುನಾಥ

ಇಂಗಳಗಿ ಹಜರತ್ ಸೈಯದ್ ಶೇರ್.ಖಾನ್.ವಲಿ ದುರ್ಗಾದ 621ನೇ ಜಾತ್ರಾ ಮಹೋತ್ಸವ ವಾಡಿ: ಪಟ್ಟಣ ಸಮೀಪದ ಇಂಗಳಗಿ ಗ್ರಾಮದ ಹಜರತ್ ಸೈಯದ್…

2 hours ago

ಹಿರಿಯ ನಾಗರಿಕರ ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ ಅಗತ್ಯ: ಅರ್ಥಶಾಸ್ತ್ರಜ್ಞ ವಿಜಯ್ ದೇಶಮುಖ್

ಕಲಬುರಗಿ: ದೇಶದ ಹಿರಿಯ ನಾಗರಿಕರನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಿ ಅವರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರವು ಹಿರಿಯ ನಾಗರಿಕರ ಸಚಿವಾಲಯವನ್ನು…

5 hours ago

ಪ್ರಣವ್ ಮೆಂಡನ್ ಫಿಸಿಯೋಥೆರಪಿ ಪದವಿ ಪ್ರದಾನ

ಕಲಬುರಗಿ : ಜಿಲ್ಲಾ ಹೋಟೆಲ್ ಅಸೋಸಿಯೇಷನ್ ನ ಕಾರ್ಯದರ್ಶಿ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರದ ಸದಸ್ಯರಾದ ನರಸಿಂಹ ಮೆಂಡನ್ ಅವರ…

5 hours ago

ಕನ್ನಡ ಸಾಹಿತ್ಯಕ್ಕೆ ಕಮಲ ಹಂಪನಾ ಕೊಡುಗೆ ಅಪಾರ: ಹಣಮಂತ್ರಾಯ ಕಾಳನೂರ

ಯಾದಗಿರಿ : ಆಧುನಿಕ ಸಾಹಿತ್ಯದ ಪ್ರಕಾರಗಳಾದ ನವ್ಯ,ನವೋದಯ,ಪ್ರಗತಿಶೀಲ,ದಲಿತ ಬಂಡಾಯದ ಕಾವ್ಯ,ಕಥೆ,ಕಾದಂಬರಿ ಹಾಗೂ ನಾಟಕ ಮುಂತಾದ ಪ್ರಕಾರಗಳಲ್ಲಿ ಸ್ತ್ರೀ ಸಂವೇದನೆಗೆ ವಿಶೇಷವಾದ…

6 hours ago

ನಾಡೋಜ ಪಾಟೀಲ್ ಪುಟ್ಟಪ್ಪ ಸ್ಮಾರಕ ಮಾಧ್ಯಮ ಪ್ರಶಸ್ತಿ ಪ್ರದಾನ: ಜುಲೈ 7ರಂದು

ಬೆಂಗಳೂರು: ಜಗತ್ತಿನ ಪ್ರಚಲಿತ ವಿದ್ಯಮಾನಗಳ ಮಾಹಿತಿ ನೀಡುವ ಪತ್ರಕರ್ತರು ಹಗಲುರಾತ್ರಿ ಎನ್ನದೇ ಕಷ್ಟವಾದರೂ ಇಷ್ಟಪಟ್ಟು ವರದಿ ಮಾಡುವ ಮಾಧ್ಯಮ ಮಿತ್ರರಿಗೆ,…

10 hours ago