ಕಲಬುರಗಿ: ನಗರದ ಸುಪರ್ ಮಾರ್ಟಕೆಟ್ ನ ಮಹೆಬಸ್ ಮಸಜೀದ್ ಹತ್ತಿರ ಶನಿವಾರ ತಡ ರಾತ್ರಿ ಧ್ವನಿ ವರ್ಧಕ ನಿಯಮ ಉಲ್ಲಂಘನೆ ಮತ್ತು ಪ್ರಚೋದನಕಾರಿ ಹಾಡು ಹಚ್ಚಿದ ಆರೋಪದಲ್ಲಿ ಬ್ರಹ್ಮಪುರ ಪೊಲೀಸರು ಮೂರಕ್ಕು ಹೆಚ್ಚು ಜನರ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭೂವಿ ಸಮಾಜ ಗಣೇಶ್ ಮಂಡಳಿಯ ಅಧ್ಯಕ್ಷ ಉಪಾಧ್ಯಕ್ಷ ತುಕಾರಾಮ ಮಹೇಂದ್ರಕರ್, ಅಂಬ್ರೆಶ್ ಭೂವಿ, ಮತ್ತು ಡಿಜೆ ಮಾಲೀಕ ಸೋಲಾಪುರ ಸಲೀಮ್ ಸೇರಿದಂತೆ ಹಲವರ ಮೇಲೆ ದೂರು ದಾಖಲಾಗಿದೆ.
ಶನಿವಾರ ತಡ ರಾತ್ರಿ ಹಳೆ ಭೂವಿ ಗಲ್ಲಿಯಿಂದ ಸುಪರ್ ಮಾರ್ಕೆಟ ಸರಾಫ್ ಬಜಾರ ಮಾರ್ಗವಾಗಿ ಅಪ್ಪನ ಕರೆಯಲ್ಲಿ ಗಣೇಶ್ ಮೂರ್ತಿ ವಿಸರ್ಜನೆಗೆಂದು ಮೆರವಣೆಗೆ ಹೋಗುವ ವೇಳೆಯಲ್ಲಿ ಮಹೆಬಸ್ ಮಸಜೀದ್ ಹತ್ತಿರ ಬಂದಿದ ಮೇಲೆ ಕೋಮುಭಾವನೆ ಕೆರಳಿಸುವ, ಪ್ರಚೋದನಕಾರಿ ಹಾಡು ಹಾಕಿ ಸಂಭ್ರಮಿಸಿರುವ ವಿಡಿಯೋ ಸಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದ ತಕ್ಷಣ ಎಚ್ಚೆತು ಕೊಂಡ ಪೊಲೀಸರು ಭಾನುವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಕುರಿತು ಈ ಹಿಂದೆ ಕಲಬುರಗಿ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದು ಪಾಟೀಲ್ ಗಣೇಶ್ ಉತ್ಸವ ಮೆರವಣಿಗೆಯಲ್ಲಿ ಪೊಲೀಸ್ ಆಯುಕ್ತರಿಗೆ ಡಿಜೆ ಹಚ್ಚಲು ಅನುಮತಿ ಕೇಳಿದ್ದಾಗ ಅನುಮತಿ ಸಿಗಲಿ ಬಿಡಲಿ ನಾವು ಡಿಜೆ ಹಚ್ಚುತ್ತೇವೆ ಎಂಬ ವಿಡಿಯೋ ವೈರಲ್ ಆಗಿತ್ತು.
ನಂತರ ಚಂದು ಪಾಟೀಲ್ ಟ್ವೀಟ್ ನಲ್ಲಿ ಕಾನೂನು ಉಲ್ಲಂಘಿಸಲ್ಲ ಎಂದು ಬರೆದುಕೊಂಡಿದರು. ಆದರೆ ಮೆರಣಿಗೆಯಲ್ಲಿ ಭಾರೀ ಸೌಂಡ್ ಇಟ್ಟು ಡಾನ್ಸ್ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ತಕ್ಷಣ ತಪ್ಪಿ ತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ಪ್ರಚೋದನಕಾರಿ ಹಾಡು ಹಾಕಿ ಕಲಬುರಗಿ ಶಾಂತಿ ಕದಡಲು ಯತ್ನಿಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು SDPI ಮುಖಂಡ ಅಲೀಮ್ ಇಲಾಹಿ ಆಗ್ರಹಿಸಿದ್ದಾರೆ.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…