ಕಲಬುರಗಿ; ನಗರದ ಎಪಿಎಂಸಿ ಯಾರ್ಡ್ ಪ್ರದೇಶದಲ್ಲಿ ಮೂಲಸೌಕರ್ಯಕಲ್ಪಿಸಬೇಕುಎಂದು ಆಗ್ರಹಿಸಿ ಸೆ.29 ರಂದು ಎಪಿಎಂಸಿ ವಹಿವಾಟು ಬಂದ್ ಮಾಡಿ ಪ್ರತಿಭಟನೆ ನಡೆಸಲುಆಹಾರಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂಘ, ಅಖಿಲ ಭಾರತಕಿಸಾನ್ ಸಭಾ, ಕರ್ನಾಟಕ ಪ್ರಾಂತರೈತ ಸಂಘಗಳು ನಿರ್ಧರಿಸಿವೆ.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿಆಹಾರಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂಘದಅಧ್ಯಕ್ಷ ಶ್ರೀಮಂತ ಉದನೂರ, ಅಖಿಲ ಭಾರತಕಿಸಾನ್ ಸಭಾದ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ, ಕರ್ನಾಟಕ ಪ್ರಾಂತರೈತ ಸಂಘದಅಧ್ಯಕ್ಷ ಶರಣಬಸಪ್ಪ ಮಮ್ಮಶೆಟ್ಟಿಅವರು ಮಾತನಾಡಿದರು.ವರ್ಷಕ್ಕೆ ಕನಿಷ್ಠ ರೂ.80 ಲಕ್ಷ ಆಸ್ತಿ ತೆರಿಗೆ ಪಾವತಿಸಿದ್ದರೂ ಎಪಿಎಂಸಿ ಯಾರ್ಡ್ನಲ್ಲಿ ಶುದ್ಧಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಸಿ.ಸಿ ರಸ್ತೆ ನಿರ್ಮಾಣ, ಪಾಕಿರ್ಂಗ್ ವ್ಯವಸ್ಥೆ, ಭದ್ರತಾ ಸಿಬ್ಬಂದಿ ನಿಯೋಜನೆ ಸಮರ್ಪಕವಾಗಿಕಂಡುಬರುತ್ತಿಲ್ಲ. ಕೂಡಲೇ ಬೇಡಿಕೆಈಡೇರಿಸಬೇಕುಎಂದು ಆಗ್ರಹಿಸಿದರು.
ಕಳೆದ 70 ವರ್ಷಗಳ ಹಿಂದೆ ಎಪಿಎಂಸಿ ಯಾರ್ಡ್ರಚಿಸಲಾಗಿದ್ದು, ಇಲ್ಲಿಗೆ ಆಗಮಿಸುವ ರೈತರಿಗೆ ಕನಿಷ್ಟ ಸೌಲಭ್ಯಗಳಿಲ್ಲ. ಇನ್ನುಅಡತ್ ವ್ಯಾಪಾರಿಗಳು ಭಯದ ವಾತಾವರಣದಲ್ಲಿ ವ್ಯವಹರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಎಪಿಎಂಸಿ ಮೂರು ಪ್ರವೇಶ ದ್ವಾರಗಳಲ್ಲಿ ಕೊಳಚೆ ಮತ್ತುಚರಂಡಿ ನೀರು ಹರಿದಾಡುತ್ತಿದೆ.ಇದರಿಂದ ಉತ್ಪನ್ನಗಳ ಸಾಗಾಟಕ್ಕೆಅಡೆಚಣೆಉಂಟಾಗಿದೆ.ಈ ಬಗ್ಗೆ ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಿದರೂ ಸ್ಪಂದನೆ ಸಿಗುತ್ತಿಲ್ಲ. ಇನ್ನು ಎಪಿಎಂಸಿ ಕಾರ್ಯದರ್ಶಿ ಅವರು ಸಹ ಅಸಹಾಯಕರಾಗಿದ್ದಾರೆ.
ಹೊಸ ಟ್ರೇಡ್ ಲೈಸನ್ಸ್ ಬಗ್ಗೆ ವಿಚಾರಿಸಿದರೆ ಜಿಲ್ಲಾಧಿಕಾರಿಗಳು ಸಭೆಕರೆದಿಲ್ಲ, ಎಪಿಎಂಸಿಗೆ ಆಡಳಿತ ಮಂಡಳಿ ಇಲ್ಲದಿರುವುದರಿಂದರೈತರು. ವರ್ತಕರುತೊಂದರೆಅನುಭವಿಸುವಂತಾಗಿದೆಎಂದುಆಕ್ರೋಶ ವ್ಯಕ್ತಪಡಿಸಿದರು. ಸಂಗನಬಸಪ್ಪ ಹಿರೇಗೌಡ, ಸಂತೋಷಕುಮಾರ ಬಾರಿ, ಸಹದೇವ ಬಿರಾದಾರ್, ಎಂ.ಬಿ.ಸಜ್ಜನ್ಇತರರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…