ಬಿಸಿ ಬಿಸಿ ಸುದ್ದಿ

ಸ್ವಾತಂತ್ರ್ಯದ ಕಿಚ್ಚು ಹಚ್ಚಿ, ಸ್ವಾತಂತ್ರ್ರ್ಯವನ್ನು ದೊರಕಿಸಿಕೊಟ್ಟ ಭಾಷೆ ಹಿಂದಿ ಭಾಷೆ

ಶಹಾಬಾದ: ಛೀದ್ರ ಛೀದ್ರವಾಗಿ ಹರಿದು ಹೋದ ಅಂದಿನ ಭಾರತವನ್ನು ಒಂದೇ ಸೂರಿನಡಿ ತಂದು ಸ್ವಾತಂತ್ರ್ಯದ ಕಿಚ್ಚು ಹಚ್ಚಿ, ಸ್ವಾತಂತ್ರ್ರ್ಯವನ್ನು ದೊರಕಿಸಿಕೊಟ್ಟ ಭಾಷೆ ಹಾಗೂ ಅತ್ಯಂತ ಮಹತ್ವ ಮತ್ತು ನಿರ್ಣಾಯಕ ಪಾತ್ರವಹಿಸಿದ ಭಾಷೆಯೇ ಹಿಂದಿ ಭಾಷೆ ಎಂದು ಸಾಹಿತಿ ಹಾಗೂ ಕಲಬುರಗಿ ದಯಾನಂದ ಹಿಂದಿ ಶಾಲೆಯ ಶಿಕ್ಷಕ ಸುನೀಲ ಚೌದ್ರಿ ಹೇಳಿದರು.

ಅವರು ಬುಧವಾರ ನಗರದ ರಾಷ್ಟ್ರ ಭಾಷಾ ಶಿಕ್ಷಣ ಸಮಿತಿಯ ಸೇಠ ಗೋವರ್ಧನಲಾಲ ಹಿಂದಿ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ಹಿಂದಿ ದಿನಾಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪಾಚೀನಕಾಲದಿಂದಲೂ ತನ್ನದೆಯಾದ ಪರಂಪರೆ, ಸಂಸ್ಕøತಿಯನ್ನು ಬೆಳೆಸಿಕೊಂಡು ಬಂದಿರುವ ಸುಂದರ, ಸ್ವಾರಸ್ಯಕರ ಹಾಗೂ ಕೇಳುವುದಕ್ಕೂ ಹಿತವಾಗಿರುವ ಸಂಪರ್ಕ ಭಾಷೆಯೇ ಹಿಂದಿ ಭಾಷೆಯಾಗಿದೆ. ರಾಷ್ಟ್ರೀಯ ಭಾಷೆಯಾಗಿರುವ ಹಿಂದಿಯು ದೇಶದ ಐಕ್ಯತೆ ಹಾಗೂ ಭಾವೈಕ್ಯತೆಯನ್ನು ಸಾರುವ ಭಾಷೆಯಾಗಿದ್ದು,ಎಲ್ಲರೂ ಗೌರವಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು.ಆಂಗ್ಲ ಭಾಷೆಯ ವ್ಯಾಮೋಹದ ಮಧ್ಯೆಯೂ ಈ ಭಾಗದಲ್ಲಿ ಹಿಂದಿ ಮಾಧ್ಯಮ ಶಾಲೆಯನ್ನು ಪ್ರಾರಂಭ ಮಾಡಿ ರಾಷ್ಟ್ಟ್ರಬಾಷೆಯ ಪ್ರಚಾರ,ಪ್ರಸಾರ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಸ್ವಾತಂತ್ರ್ಯ ಪಡೆದ ನಂತರ ರಾಷ್ಟ್ರ ಭಾಷೆಯಾಗಿ ಯಾವ ಮಟ್ಟದಲ್ಲಿ ಬೆಳೆಯಬೇಕಾಗಿತ್ತೋ, ಆ ಮಟ್ಟದಲ್ಲಿ ಹಿಂದಿ ಭಾಷೆಯು ಬೆಳೆಯದೇ ಇರುವದು ವಿಷಾದನೀಯವಾಗಿದೆ.ಇಡೀ ದೇಶವನ್ನು ಬೆಸೆಯುವ ಸಂಪರ್ಕ ಭಾಷೆಯಾಗಿರುವ ಹಿಂದಿಯು ಶೇ.53 ರಷ್ಟು ಮಾತ್ರ ಬೆಳವಣಿಗೆ ಕಂಡಿರುವುದು ದುಃಖಕರ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು. ಪ್ರತಿಯೊಬ್ಬರಿಗೂ ಅವರದೇ ಆದ ಮಾತೃಭಾಷೆ ಬಗ್ಗೆ ಹೆಚ್ಚಿನ ಪ್ರೀತಿ ಇರುವುದು ಸಹಜ ಗುಣ. ಆದರೆ ರಾಷ್ಟ್ರದ ಪ್ರಶ್ನೆ ಬಂದಾಗ ಹಿಂದಿಯನ್ನು ನಾವು ಅನಿವಾರ್ಯವಾಗಿ ನಮ್ಮದಾಗಿಸಿಕೊಳ್ಳಬೇಕಾಗಿದೆ ಎಂದರು.

ಮುಖ್ಯ ಅತಿಥಿಗಳಾದ ಎಸ್.ಎಸ್.ಮರಗೋಳ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಅನೀಲಕುಮಾರ ಕೊಪ್ಪಳಕರ್ ಮಾತನಾಡಿ, ಸಾಹಿತ್ಯಿಕವಾಗಿ ಸಮೃದ್ಧ ಭಾಷೆಯಾಗಿರುವ ಹಿಂದಿಯಲ್ಲಿ ಅತೀ ಹೆಚ್ಚಿನ ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಹಿರಿಮೆ ಇದೆ.ಇಂತಹ ದೇಶದÀ ಜನರೊಂದಿಗೆ ಬಾಂಧವ್ಯ ಬೆಸೆಯುವ ಹಿಂದಿ ಭಾಷೆಗೆ ನಾವೆಲ್ಲರೂ ಗೌರವಿಸಿ ಬೆಳೆಸಬೇಕಾಗಿದೆ ಎಂದು ಹೇಳಿದರು.

ಅತಿಥಿಗಳಾಗಿ ರಾಷ್ಟ್ರಭಾಷಾ ಶಿಕ್ಷಣ ಸಮಿತಿಯ ಅಧ್ಯಕ್ಷ ಬಾಲಕಿಶನ ವರ್ಮಾ,ಉಪಾಧ್ಯಕ್ಷರಾದ ಹಣಮಂತರಾಯ ಇಂಗಿನಶೆಟ್ಟಿ, ಕಾರ್ಯದರ್ಶಿ ದಿಲೀಪ ಯಲಶೆಟ್ಟಿ, ಸಿ.ಎ.ಇಂಗಿನಶೆಟ್ಟಿ ಕಾಲೇಜಿನ ಪ್ರಾಂಶುಪಾಲ ರಾಜಗೋಪಾಲ ಜೂಜಾರೆ, ಹಿಂದಿ ವಿದ್ಯಾಲಯದ ಮುಖ್ಯಗುರು ಬಾಬಾಸಾಹೇಬ ಸಾಳುಂಕೆ, ಹಿಂದಿ ಪ್ರಾಥಮಿಕ ಶಾಲೆಯ ಮುಖ್ಯಗುರುಮಾತೆ ಅನೀತಾ ಶರ್ಮಾ, ಎಸ್.ಎಸ್.ನಂದಿ ಪ್ರೌಢಶಾಲೆಯ ಮುಖ್ಯಗುರು ಸುಧೀರ ಕುಲಕರ್ಣಿ ವೇದಿಕೆಯ ಮೇಲಿದ್ದರು.

ಶಿಕ್ಷಕಿಯರಾದ ಲತಾ ಸಾಳುಂಕೆ ಹಾಗೂ ಸುಕನ್ಯಾ ಪ್ರಾರ್ಥಿಸಿದರು, ಮಲ್ಲಿನಾಥ ಪಾಟೀಲ ಸ್ವಾಗತಿಸಿದರು, ಮಹೇಶ್ವರಿ ಗುಳಿಗಿ ನಿರೂಪಿಸಿದರು, ಪ್ರಕಾಶ ಕೋಸಗಿಕರ್, ಪರಿಚಯಿಸಿದರು, ಅನೀತಾ ಶರ್ಮಾ ವಂದಿಸಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

10 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

10 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

10 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago