ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ಅಂಗವಾಗಿ ಕಲ್ಬುರ್ಗಿ ರಂಗಾಯಣದಲ್ಲಿ ನಾಟಕೋತ್ಸವ ಕಾರ್ಯಕ್ರಮ ಜರುಗಿದ್ದವು, ಅದರಲ್ಲಿ ನಾನು ನೋಡಿದ ನಾಟಕ “ಈ ಕರಿಯ ಬೆನ್ನಲಿ”, ಎನ್ಕೆ ಹನುಮಂತಯ್ಯ ಅವರ “ಮೌಂಸದಂಗಡಿಯ ನವಿಲು” ಕವನ ಸಂಕಲನದ ಆಯ್ದ ಕವಿತೆಗಳು ನಾಟಕ ರೂಪದಲ್ಲಿ ಪ್ರಸ್ತುತ ಪಡಿಸಿದ್ದು ಸಾಗರ ಇಟೇಕರ್ ಅವರು, ಈ ನಾಟಕದ ನಿರ್ದೇಶನ ಮಾಡಿದವರು ಪ್ರವೀಣ ಕುಮಾರ್ ಅವರು ನಾಟಕ ಅಂದರೆ ನಾವು ತಿಳಿದ ಹಾಗೆ ಕತೆಗಳನ್ನು ಆಧರಿಸಿ, ಕಾದಂಬರಿ, ಇಲ್ಲ ಸಂಭಾಷಣೆ ಹೊಂದಿದ್ದ ನಾಟಕಗಳು ಮಾಡುವುದು ಮತ್ತೆ ನಾಟಕ ಮಾಡಿರುವುದು ನಮಗೆಲ್ಲ ತಿಳಿದ ವಿಚಾರ, ಆದರೆ..! “ಈ ಕರಿಯ ಬೆನ್ನಲಿ ” “ಈ ಕರಿಯ ಬೆನ್ನಲಿ “, ಕವಿತೆಗಳನ್ನು ನಾಟಕ ರೂಪದಲ್ಲಿಳಿಸಿದ್ದು ತುಂಬಾ ವಿಭಿನ್ನ ಪ್ರಯೋಗ.
ಇಲ್ಲಿ ಅಭಿನಯ ಮಾಡುವ ವ್ಯಕ್ತಿ ಕವಿತೆಗಳನ್ನು ಹೇಳುತ್ತಾ ಜೀವ ತುಂಬುತ್ತಾ ತನ್ನ ಆಂಗಿಕ ಹಾವಭಾವಗಳಿಂದ ಪ್ರೇಕ್ಷಕರೆದೆಯೊಳಗೆ ಕವಿತೆಯಲ್ಲಿ ಅಡಗಿದ ಆ ಕ್ರೌರ್ಯ, ಹಿಂಸೆ, ಅವಮಾನ, ಸಾವು, ಮೇಲು ಕೀಳು, ಅಸಹಾಯಕತೆ, ಮಹಿಳೆಯ ಆರ್ತನಾದ, ಬಡತನ, ಶೋಷಿತ ಸಮುದಾಯಗಳು ಜೀವನ, ಯಜಮಾನರ ಹಟ್ಟಿಯೋಳಗೆ ಹೇಗೆ ಗೊಬ್ಬರವಾಗಿ, ಅವರ ಹೊಲಗದ್ದೆಗಳಲ್ಲಿ ಹುಲುಸಾಗಿ ಬೆಳೆಯುವ ಬತ್ತಗಳೆ.. ಸಾಕ್ಷಿ..! ಹೀಗೆ. ಆ ಕವಿತೆಯ ಒಡಲ ಕಟ್ಟೆಯೊಡೆದು ಪ್ರೇಕ್ಷಕನು ಚಪ್ಪಾಳೆ ತಟ್ಟಲು ಅಸಹಾಯಕನಾಗುತ್ತಾನೆ, ಆದರು ಚಪ್ಪಾಳೆ ತಟ್ಟಲೆಬೇಕಾಯಿತು ಅವರ ಅಭಿನಯಕ್ಕೆ.
ನಿಶಬ್ಧದವಾದ ವಾತಾವರಣ ತನ್ನಿಂದ ತಾನೇ.. ಕಟ್ಟಿಕೊಂಡಿತು ಏಕಾಂತಕ್ಕೆ ತೆಗೆದುಕೊಂಡಿತು.ಕವಿಯು ವಾಸ್ತವ ಬದುಕಿಗೆ ಕಟ್ಟಿಟ್ಟ ಕಾವ್ಯಕ್ಕೆ ಎಲ್ಲಿಯೂ ಧಕ್ಕೆ ಬರದಂತೆ, ತನ್ನ ಭಾವಬ್ಬರದ ಏರಿಳಿತಗಳ ಧ್ವನಿಯಲ್ಲಿ ಕಾವ್ಯದ ಪ್ರಸ್ತುತಿ, ಪ್ರತಿಯೊಂದು ಕವಿತೆಯು ಪ್ರೇಕ್ಷಕನರಿವಿಗಿಲ್ಲದಂತೆ ಮನಸ್ಸಿನಲ್ಲಿ ವಾಸ್ತವದ ಚಿತ್ರಣಗಳು ಎದುರಾಗಿ ಹೋಗುತ್ತಿದ್ದವು , ಅದರಲ್ಲಿ ಈ ಸಾಲುಗಳು.
“ಹರಿದ ಸೀರೆಯ ತೂರಿ
ನನ್ನ ಪುಟ್ಟ ಕಾಲುಗಳು
ಅವ್ವನ ತೊಡೆಗೆ ತಗುಲಿದಾಗ
ಕುಡಿದು ಸತ್ತ ಅಪ್ಪನ ನೆನೆದು
ಚೆಚ್ಚಿದಳು.. “
ವಿಧವೆ ಹೆಣ್ಣಿನ ಭಾವನೆಗಳು ಕಣ್ಣಿಗೆ ರಾಚುವಂತೆ, ಈ ಸಂಪ್ರದಾಯ ಎಂಬ ಸೊಂಗು ಹಾಕಿದವರ ನಡುವೆ ಇವಳೆಷ್ಟು ಸೊರಗಿ, ಕೊರಗಿ, ಮುದುಡಿ ಹೋಗಿದ್ದಾಳೆ , ಅವಳ ಆಸೆ, ಕನಸುಗಳು ದಿನ ನಿತ್ಯ ಕಣ್ಣಿರು ಹೊಳೆಯಾಗಿ ಹರಿಯುತ್ತವೆ.
ಗೋವು ತಿಂದು ಗೋವಿನಂತಾದವನು, ಈ ಪದ್ಯದ ಪ್ರತಿ ಸಾಲು ಪ್ರೇಕ್ಷಕರನ್ನು ಹುಬ್ಬೇರಿಸಿ ನೋಡುವಂತೆ, ತೋಳ್ಬಲಗಳಲ್ಲಿ ಶಕ್ತಿ ಬಂದಂತೆ ಭಾವಗಳು ಉಬ್ಬಿ ಹಾಗೆ ನೆಲಕ್ಕುರುಳಿದಂತೆ, ಪ್ರತಿಯೊಬ್ಬರ ಮೌನವು ಕಾವೇರಿ. ಉಕ್ಕಿ ಬಂದ ಭಾವ ತುಮುಲಗಳು “ಮನುಷ್ಯರ ತಿಂದು ಮನುಷ್ಯನಾಗಲಾರೆ” ಎಂಬ ಧ್ವನಿಗೆ ಅದುಮಿಟ್ಟಿದ ಕೋಪತಾಪವು ಒಮ್ಮೆಲೇ. ಚಪ್ಪಾಳೆ ತಟ್ಟಿದವು .. ಮೈ ರೋಮಾಂಚನಗೊಂಡಿತು.
ನಿಜಕ್ಕೂ ತುಂಬಾ ಹೊಸ ಪ್ರಯೋಗ ಮತ್ತೆ ಏಕವ್ಯಕ್ತಿ ಅಭಿನಯ ಒಂದು ತಾಸು ಬಿಡುವಿಲ್ಲದೆ ಕವಿತೆ ಹೇಳಿಕೊಂಡು ಅಭಿನಯಿಸುವುದು ಕಷ್ಟಕರ ಹಾಗೆ ಅಭಿನಯದ ಜೊತೆಗೆ ಬೆಳಕಿನ ವಿನ್ಯಾಸ ಕೂಡ ಸಂದರವಾಗಿತ್ತು ಪ್ರತಿ ಬೆಳಕಿನ ಹಿಂದೆ ಒಂದೊಂದು ಕವಿತೆಗಳು ಮಾತಾಡ್ತಿದ್ದವು, ಸಂಗೀತ ಕೂಡ ಚೆನ್ನಾಗಿತ್ತು, ನನಗನ್ನಿಸಿದ್ದು ಸಂಗೀತ ಇನ್ನೊಂದಿಷ್ಟು ಪ್ರಕಾರವಾಗಿ ಬೇರೆ ಬೇರೆ ಶೃತಿ ಲಯದಲ್ಲಿರಬೇಕಿತ್ತು.
ನಮ್ಗಳ ಬದುಕೆ ಒಂದು ಕಾವ್ಯ, ಆ ಕಾವ್ಯಗಳೆ ನಾಟಕ ರೂಪ ಪಡೆಯಿತು , ಅವರ ಪರಿಶ್ರಮ, ಆಯಾಸ ಎಲ್ಲಿಯೂ ಹೋರಹಾಕದೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡು ಕವಿತೆಗಳು ಹೇಳಿ ಮುಗಿಸುತ್ತಾರೆ, ಅವರ ಪರಿಶ್ರಮ ಕಂಡಿದ್ದು ಅವರು ತೊಟ್ಟ ಟೀ ಶರ್ಟ್ ಬೆವರಿಂದ ಒದ್ದೆಯಾಗಿತ್ತು ಮಳೆಯಲ್ಲಿ ನೆನೆದಂತೆ. ನಾಟಕ ಮುಗಿದ ಮೇಲೆ ಪ್ರೇಕ್ಷಕರು ಸಲಹೆ ನೀಡಿದರು , ಅನಿಸಿಕೆ ಅಭಿಪ್ರಾಯ ಸಲಹೆ ಧನಾತ್ಮಕವಾದ ಮನಸ್ಸಿನೊಂದಿಗೆ ಮುಂದಿನ ಅಭಿನಯಕ್ಕೆ ಸಜ್ಜಾಗಿ ಹೊರಡಿದರು.
ಕವಿತೆಗಳು ಲಯಬದ್ಧವಾಗಿ ಹಾಡಿ ರಂಗಭೂಮಿಯಲ್ಲಿ ನರ್ತನೆಯಷ್ಟೆಯಲ್ಲ, ಭಾವಂತರಗಳ ಬಡಿದೆಬ್ಬಿಸುವ, ಸತ್ತ ಸಂಪ್ರದಾಯಗಳನ್ನು ಮಣ್ಣು ಮಾಡಲು, ಮೇಲು ಕೀಳಿನ, ಜಾತಿ , ಮತ, ಪಂಥ, ಎಂದು ಸಾಯಿಸುತ್ತಿರುವ ಮನೋರೊಗಕ್ಕೆ ಔಷಧಿಯು.. ಆಗಬಲ್ಲದು , ಎಲ್ಲವೂ ಅಳಿಸಬಲ್ಲದು ನಾಟಕ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…