ಬಿಸಿ ಬಿಸಿ ಸುದ್ದಿ

ಈ ದೇಶ ಕಂಡ ಅತ್ಯುತ್ತಮ ಅಭಿಯಂತರ ಎಂದರೆ ಸರ್.ಎಂ. ವಿಶ್ವೇಶ್ವರಯ್ಯ

ಶಹಾಬಾದ:ವಿಶ್ವದಲ್ಲಿಯೇ ಜನಪ್ರಿಯವಾಗಿರುವ ಮತ್ತು ಈ ದೇಶ ಕಂಡ ಅತ್ಯುತ್ತಮ ಅಭಿಯಂತರ, ಜನಪ್ರಿಯ ಮುತ್ಸದ್ದಿ, ಹಾಗೂ ವಿದ್ವಾಂಸ ಎಂದರೆ ಸರ್.ಎಂ. ವಿಶ್ವೇಶ್ವರಯ್ಯನವರು ಎಂದು ನಗರಸಭೆಯ ಪ್ರಭಾರಿ ಎಇಇ ಶಾಂತರೆಡ್ಡಿ ದಂಡಗುಲಕರ್ ಹೇಳಿದರು.

ಅವರು ಗುರುವಾರ ನಗರಸಭೆಯಲ್ಲಿ ಆಯೋಜಿಸಲಾದ ಇಂಜಿನಿಯರ್ ದಿನದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಇಂಜಿನಿಯರಿಂಗ್ ಪದಕ್ಕೆ ಬೇರೆಯದ್ದೇ ರೂಪ ನೀಡಿದ ವಿಶ್ವೇಶ್ವರಯ್ಯ ನಾಡಿನ ಏಳಿಗೆಗಾಗಿ ಶ್ರಮಿಸಿದವರು. ಸ್ವಾತಂತ್ರ್ಯ ಪೂರ್ವದಲ್ಲೇ ನವ ಭಾರತದ ಕನಸನ್ನು ಕಂಡಿದ್ದ ಸರ್ ಎಂ.ವಿ. ವಿಶ್ವೇಶ್ವರಯ್ಯ ಅದಕ್ಕಾಗಿ ಅನೇಕ ಯೋಜನೆಗಳನ್ನು ತಂದರು. ಕೃಷಿ, ಶಿಕ್ಷಣ, ಆರ್ಥಿಕ ವ್ಯವಸ್ಥೆ, ಕೈಗಾರಿಗೆ ಹೀಗೆ ಒಂದು ನಾಡು ಎಲ್ಲಾ ವಿಭಾಗದಲ್ಲೂ ಅಭಿವೃದ್ಧಿ ಹೊಂದಲು ಬೇಕಾದ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ವಿಶ್ವೇಶ್ವರಯ್ಯನವರ ಪಾತ್ರ ದೊಡ್ಡದು. ಅವರ ಸಾಧನೆ ಒಂದೆರೆಡಲ್ಲ ಕನ್ನಂಬಾಡಿ ಕಟ್ಟೆ, ಹಿಂದೂಸ್ಥಾನ್ ಏರ್‌ಕ್ರಾಫ್ಟ್ ಫ್ಯಾಕ್ಟರಿ(ಈಗ ಎಚ್‌ಎಎಲ್), ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಸರಕಾರಿ ಸಾಬೂನು ಕಾರ್ಖಾನೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕನ್ನಡ ಸಾಹಿತ್ಯ ಪರಿ?ತ್, ಮೈಸೂರು ವಿವಿ, ಶಿವನಸಮುದ್ರ, ಜೋಗದ ಜಲವಿದ್ಯುತ್ ಯೋಜನೆ, ಬ್ಲಾಕ್ ಸಿಸ್ಟಮ್(ನೀರಾವರಿ ಯೋಜನೆ), ಪ್ಯಾರಾಸಿಟಾಯ್ಡ್ಸ್ ಲ್ಯಾಬೋ ರೇಟರಿ, ಮೈಸೂರು ಸಕ್ಕರೆ ಕಾರ್ಖಾನೆ, ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆ ಹೀಗೆ ದೊಡ್ಡ ಪಟ್ಟಿಯೇ ಇದೆ. ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ, ಹೊರ ರಾಜ್ಯ ಮತ್ತು ಹೊರ ದೇಶಗಳಿಗೂ ಅವರ ಸಾಧನೆ ವಿಸ್ತರಿಸಿದೆ. ಗ್ವಾಲಿಯರ್‌ನ ಟೈಗರ್ ಡ್ಯಾಂ, ಪುಣೆಯ ಖಡಕ್‌ವಾಸ್ಲಾ ಜಲಾಶಯ ಹಾಗೂ ಒರಿಸ್ಸಾದ ಮಹಾನದಿ ಪ್ರವಾಹ ನಿಯಂತ್ರಣ ಯೋಜನೆ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿದ ಮಹಾನ್ ಮೇಧಾವಿ ವಿಶ್ವೇಶ್ವರಯ್ಯನವರು ಎಂದರು.

ನಗರಸಭೆಯ ಪರಿಸರ ಅಭಿಯಂತರ ಮುಜಾಮಿಲ್ ಅಲಂ ಮಾತನಾಡಿ, ವಿಶ್ವೇಶ್ವರಯ್ಯನವರು ಅವರು ಕೈಗೊಂಡ ಎಲ್ಲಾ ಯೋಜನೆಗಳು ಕೂಡ ಯಶಸ್ವಿಯಾಗಿವೆ. ಅಲ್ಲದೆ ತಾವೇ ಸ್ವತಃ ಮುಂದೆ ನಿಂತು ಎಲ್ಲದರ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಇಂದು ಎ? ಜನಕ್ಕೆ ಈ ರೀತಿಯ ಕಾರ್ಯ ದಕ್ಷತೆ ಇದೆ ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಅಲ್ಲದೇ ಎ? ಇಂಜಿನಿಯರ್ ಗಳಿಗೆ ದೇಶದ ಬಗ್ಗೆ ಕಾಳಜಿವಹಿಸುವ ಮನಸ್ಸಿದೆ. ಪಿಯುಸಿ ನಂತರ ಸಿಇಟಿ ಬರೆದು ಪ್ರತಿ?ಗಾಗಿ ಬಿಇ ಮುಗಿಸಿ, ಯಾವುದೋ ಒಂದು ಕೆಲಸ ಹಿಡಿದು, ವಿದೇಶಗಳಿಗೆ ಹಾರುವ ಇಂಜಿನಿಯರ್ ಗಳಿಗೂ ಸರ್ ಎಂ ವಿ ಅವರಿಗೂ ಆಕಾಶ-ಪಾತಾಳಕ್ಕೆ ಇರುವ ಅಂತರ.

ನಮ್ಮ ದೇಶದ ಇಂಜಿನಿಯರಿಂಗ್ ಕಾಲೇಜುಗಳು ವಿಶ್ವೇಶ್ವರಯ್ಯನವರ ಆದರ್ಶವಿರುವ, ನಾಡಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಸುವ, ಸಮಾಜವನ್ನು ಸರಿಯಾದ ದಿಕ್ಕಿನಲ್ಲಿ ಸಾಗುವಂತೆ ಯೋಜನೆ ರೂಪಿಸುವ ಇಂಜಿನಿಯರ್ ಗಳನ್ನು ರೂಪಿಸಿದರೆ ಇಂಜಿನಿಯರ್ ದಿನಕ್ಕೆ ಮತ್ತು ಸರ್ ಎಂ ವಿಶ್ವೇಶ್ಚರಯ್ಯರಿಗೆ ನಿಜವಾದ ಗೌರವ ಸಲ್ಲುತ್ತದೆ ಎಂದರು.

ಈ ಈ ಸಂದರ್ಭದಲ್ಲಿ ನಗರಸಭೆಯ ಸಿಬ್ಬಂದಿಗಳಾದ ಜೆಇ ಸಿದ್ದಪ್ಪ ದೇಸಾಯಿ,ಆರೋಗ್ಯ ನಿರೀಕ್ಷಕರಾದ ಮೋಹಿದ್ದಿನ್, ರಾಜೇಶ, ಶರಣು, ಮುತ್ತಣ್ಣ ಭಂಡಾರಿ, ಸಾಹೇಬಗೌಡ ಬೋಗುಂಡಿ, ದುರ್ಗಪ್ಪ ಪವಾರ ಉಪಸ್ಥಿತರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

5 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

5 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

21 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

23 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago