ಶಹಾಬಾದ: ಎರಡನೇ ಸ್ವಾತಂತ್ರ್ಯ ಹೋರಾಟವೆಂದೇ ಬಣ್ಣಿಸಲಾಗುವ ಹೈದ್ರಾಬಾದ ಕರ್ನಾಟಕ ವಿಮೋಚನಾ ಹೋರಾಟದಲ್ಲಿ ಪಾಲ್ಗೊಂಡು ತ್ಯಾಗ, ಬಲಿದಾನ ಮಾಡಿದ ಅನೇಕ ಹೋರಾಟ ಮಾಡಿದ ಮಹನೀಯರ ಕೆಚ್ಚು ಮತ್ತು ಅವರ ಆದರ್ಶ ನಮ್ಮೆಲ್ಲರ ಬದುಕಿಗೆ ಸ್ಪೂರ್ತಿಯಾಗಲಿ ಎಂದು ನಗರಸಭೆಯ ಪೌರಾಯುಕ್ತ ಅಶೋಕ ಬಿಲಗುಂದಿ ಹೇಳಿದರು.
ಅವರು ಶುಕ್ರವಾರ ನಗರಸಭೆಯಲ್ಲಿ ಆಯೋಜಿಸಲಾದ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವÀ ದಿನ ಕಾರ್ಯಕ್ರಮದಲ್ಲ್ಲಿ ಪಾಲ್ಗೊಂಡು ಮಾತನಾಡಿದರು.
ಭಾರತ ಬ್ರಿಟಿಷರಿಂದ ಸ್ವತಂತ್ರ ಪಡೆದರೂ, ಹೈದ್ರಬಾದ ಕರ್ನಾಟಕ ಮಾತ್ರ ನಿಜಾಮನ ಕೆಟ್ಟ ಕ್ರೌರ್ಯಕ್ಕೆ ಒಳಗಾಗಿ ಜನರು ಬದುಕದಂತಾಗಿ, ಸ್ವಾತಂತ್ಯ್ರ ಹೋರಾಟಕ್ಕಿಂತ ನಿಜಾಮಶಾಹಿ ವಿರುದ್ಧದ ಹೋರಾಟದಲ್ಲಿ ಸಕ್ರೀಯವಾಗಿ ನಾಯಕರು ಪಾಲ್ಗೊಂಡು ಹೈದ್ರಬಾದ ಸಂಸ್ಥಾನ 1948 ಸೆಪ್ಟೆಂಬರ್ 17 ರಂದು ವಿಮೋಚನೆ ಪಡೆಯುವಂತಾದುದು ಚಾರಿತ್ರಿಕ ಸಂಗತಿ ಎಂದು ಹೇಳಿದರು.
ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಮಾತನಾಡಿ, ಮಹಾನ್ ನಾಯಕರ ತ್ಯಾಗ ಬಲಿದಾನಗಳ ಫಲವಾಗಿ ಹೈದ್ರಬಾದ ಕರ್ನಾಟಕ ಪ್ರದೇಶ ನಿಜಾಮಶಾಹಿ ಕಪಿ ಮುಷ್ಠಿಯಿಂದ ಬಿಡುಗಡೆಗೊಂಡಿತು, ಹೋರಾಟ ಮಾಡಿದ ನಾಯಕರ ರಾಷ್ಟ್ರ ಪ್ರೇಮ ನಮ್ಮೆಲ್ಲರ ಬದುಕಿಗೆ ಪ್ರೇರಣೆಯಾಗಬೇಕು ಅನ್ಯಾಯಗಳ ವಿರುದ್ಧ ಧ್ವನಿ ಎತ್ತಿ ಸತ್ಯಕ್ಕಾಗಿ ಹೋರಾಟ ಮಾಡಬೇಕಾಗಿದೆ. ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ಸ್ಮರಿಸುವ ಮೂಲಕ ಎರಡನೇ ಸ್ವತಂತ್ರೋತ್ಸವವನ್ನು ಅರ್ಥ ಗರ್ಭಿತಗೊಳಿಸಬೇಕೆಂದು ಹೇಳಿದರು.
ಡಾ.ರಶೀದ್ ಮರ್ಚಂಟ್, ಸಾಗೇಬಗೌಡ ಬೋಗುಂಡಿ, ನಗರಸಭೆಯ ಸದಸ್ಯರಾದ ಡಾ.ಅಹ್ಮದ್ ಪಟೇಲ್, ಪಾರ್ವತಿ ಪವಾರ, ನಗರಸಭೆಯ ಕಚೇರಿ ವ್ಯವಸ್ಥಾಪಕರಾದ ಶರಣಗೌಡ ಪಾಟೀಲ, ಆರೋಗ್ಯ ನಿರೀಕ್ಷರಾದ ಶಿವರಾಜಕುಮಾರ, ಅನೀಲಕುಮಾರ ಹೊನಗುಂಟಿ ಸೇರಿದಂತೆ ಅನೇಕರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…