ಕಲಬುರಗಿ: ಜಾತ್ಯತೀತ ಸಮಾಜದ ಪರಿಕಲ್ಪನೆ ಶರಣರಿಗೆ ಇತ್ತು. ಸಕಲ ಜೀವಾತ್ಮರಿಗೆ ಲೇಸನೆ ಬಯಸುವನು ಕುಲಜನು ಎನ್ನುತ್ತಾ ಮನುಜ ಶ್ರೇಷ್ಠತೆಯನ್ನು ಎತ್ತಿ ಹಿಡಿದರು.
ಇವನಾರವ ಇವನಾರವ ಎಂದೆನಿಸದೆ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯ ಎನ್ನುತ್ತ ಎಲ್ಲ ಕುಲದವರನ್ನು ತಮ್ಮವರೆಂದೆ ಭಾವಿಸಿದರು. ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎನ್ನುತ್ತಾ ಎಲ್ಲ ಶರಣರನ್ನು ಪೂಜ್ಯ ಎಂದು ಭಾವಿಸಿದರು ಶರಣರ ನಡೆ ಇಂದಿನ ಸಮಾಜಕ್ಕೆ ಆದರ್ಶ ಎಂದರು. ಕಲಬುರ್ಗಿ ನಗರದ ರೇಷ್ಮಿ ವಿದ್ಯಾ ಭವನದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಕದಳಿ ಮಹಿಳಾ ವೇದಿಕೆ ವತಿಯಿಂದ ಹಮ್ಮಿಕೊಂಡ ಕದಳಿ ಮಹಿಳಾ ವೇದಿಕೆಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಸಮಾಜಕ್ಕೆ ಶರಣರ ಆದರ್ಶಗಳು ಮತ್ತೆ ದಾರಿ ತೋರಿಸಬೇಕಾಗಿದೆ, ದುಡಿಯದೆ ಹಣಗಳಿಸುವ ವಾಮ ಮಾರ್ಗವನ್ನು ಹೊಂದಿರುವವರಿಗೆ ಶರಣರ ಕಾಯಕ ತತ್ವ ತಿಳಿಸಬೇಕಾಗಿದೆ.ಕೋಟಿ ಕೋಟಿ ಸಂಪತ್ತನ್ನು ಮಾಡುವವರಿಗೆ ದಾಸೋಹದ ಪರಿಕಲ್ಪನೆ ತಿಳಿಸಬೇಕು.ಮಹಿಳೆಯರನ್ನು ಕೀಳಾಗಿ ಕಾಣುವ ದೌರ್ಜನ್ಯ ಅತ್ಯಾಚಾರಗಳನ್ನು ಮಾಡುವ ದುಷ್ಕರ್ಮಿಗಳಿಗೆ ಶರಣರ ಸ್ತ್ರೀ ಸಮಾನತೆ ತತ್ವ ಮನಗಾಣಬೇಕು. ಜಾತಿಭೇದ ಮಾಡುವವರಿಗೆ ಶರಣರ ಅನುಭವ ಮಂಟಪದ ಅರಿವಾಗಬೇಕು. ಕೋಟಿ ಕೋಟಿ ಹಣ ಖರ್ಚುಮಾಡಿ ಗುಡಿ ಗುಂಡಾರಗಳನ್ನು ಕಟ್ಟುವವರಿಗೆ ಇಷ್ಟಲಿಂಗದ ಪರಿಕಲ್ಪನೆ ತಿಳಿಸಬೇಕು. ಮೌಢ್ಯಾಚರಣೆ ತೊಲಗಿ ಶರಣರ ನಿಜ ಭಕ್ತಿಯ ಅರಿವಾಗಬೇಕು. ಅಂತರಂಗ ಬಹಿರಂಗಗಳು ಒಂದಾಗಬೇಕು. ಮೋಸ, ವಂಚನೆ ಗಳು ದೂರವಾಗಬೇಕು ಎಂದು ನುಡಿದರು.
ಮುಖ್ಯ ಅತಿಥಿಯಾಗಿದ್ದ ಡಾ. ಮೀನಾಕ್ಷಿ ಬಾಳಿ ಮಾತನಾಡಿ ಶರಣರ ಕಾಯಕ ದಾಸೋಹ ಸಿದ್ಧಾಂತ ಪ್ರತಿಪಾದಿಸಿದ್ದರು.ಇದು ಆರ್ಥಿಕ ಸಮಾನತೆ ಹೇಳುತ್ತದೆ ಶ್ರಮ ಸಂಸ್ಕøತಿಯನ್ನು ಮನ್ನಿಸುತ್ತದೆ. ಮಾಡುವ ಕಾಯಕ ಶುದ್ಧವಾಗಿರಬೇಕು ಎನ್ನುತ್ತಾರೆ.ನೈತಿಕ ಮೌಲ್ಯವನ್ನು ನೀಡಿದರು. ದುಡಿಮೆ ಇಲ್ಲದೆ ಗಳಿಸಿದ ಸಂಪತ್ತನ್ನು ತಿರಸ್ಕರಿಸಿದರು. ಕಾಯಕವೇ ಕೈಲಾಸ ಎಂದು ಸಾರಿದರು ಎಂದರು.
ಅಧ್ಯಕ್ಷತೆಯನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ದನಕೇರಿ ವಹಿಸಿದ್ದರು. ಡಾ. ಶಾಂತ ಅಷ್ಟಿಗೆ, ಡಾ. ಭಾರತಿ ರೇಷ್ಮೀ, ಶೀಲಾ ಸಿದ್ದರಾಮ ವೇದಿಕೆಯಲ್ಲಿದ್ದರು.
ಡಾ.ಶರಣಬಸಪ್ಪ ವಡ್ಡನಕೇರಿ, ವಿಶ್ವನಾಥ್ ಮಂಗಲಗಿ, ಜಯಶ್ರೀ ಚಟ್ನಳ್ಳಿ, ಡಾ. ನೀಲಾಂಬಿಕ ಪೆÇಲೀಸ್ ಪಾಟೀಲ, ಡಾ. ಸಾರಿಕಾ ದೇವಿ ಕಾಳಗಿ,ಡಾ. ಶಿವಲೀಲಾ ಚಟ್ನಳ್ಳಿ, ಡಾ. ಗೀತಾ ಮಾಸಿಮಾಡೆ, ಸಾಕ್ಷಿ ಸತ್ಯಂಪೇಟೆ, ಡಾ. ಚಿತ್ಕಳಾ ಮಠಪತಿ, ಡಾ. ಸಾವಿತ್ರಿ ಪಟ್ಟಣ, ಡಾ. ಸುಜಾತ ಪಾಟೀಲ ಮೊದಲಾದವರಿದ್ದರು.
ಕಲಬುರಗಿ: ನ.28 ಜಿಲ್ಲೆಯಾದ್ಯಂತ ಮಣ್ಣಿನಲ್ಲಿ ತೇವಾಂಶದ ಕೊರತೆ ಹಾಗೂ ಒಣ ಬೇರು ಕೊಳೆ ರೋಗದಿಂದ ತೊಗರಿ ಒಣಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರ…
ಕರ್ಜಗಿ (ಕಲಬುರಗಿ): ನ.28 ಅಫಜಲಪುರ ತಾಲ್ಲೂಕಿನ ಸುಕ್ಷೇತ್ರ ಕುಬೇರ ಕರಜಗಿ ಗ್ರಾಮದ ಹಜರತ್ ಖ್ವಾಜಾ ಸೈಫನ್ ಮುಲ್ಕ 891 ಜಾತ್ರೆ…
ಕಲಬುರಗಿ, ನ.೨೮ - ಹಿರಿಯ ಚಿತ್ರನಟ ಮದನ್ ಪಟೇಲ್ ಅವರು ನಾಯಕ ನಟರಾಗಿರುವ ಕಾದಂಬರಿ ಆಧಾರಿತ `ತಮಟೆ’ ಸಿನಿಮಾ ನವೆಂಬರ್…
ಕಲಬುರಗಿ: ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಸರ್ಕಾರಿ ಪದವಿ ಸ್ವಾಯತ್ತ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಮಹಾನಗರ ಪಾಲಿಕೆ,ಸಮಾಜ ಕಲ್ಯಾಣ ಇಲಾಖೆ, ಕನ್ನಡ…
ಕಲಬುರಗಿ: ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿ ಹಾಗೂ ಸಿ.ಆರ್.ಸಿ ಸ್ನೇಹ ಬಳಗ ಕಲಬುರಗಿ ಮತ್ತು ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ…
ಕಲಬುರಗಿ: ಸುವರ್ಣ ಭವನ (ಕನ್ನಡ ಭವನ)ದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ ವತಿಯಿಂದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ…