ಬಿಸಿ ಬಿಸಿ ಸುದ್ದಿ

ಪ್ರಾಮಾಣಿಕವಾಗಿ ಸೇವಾ ಮನೋಭಾವ ಸೇವೆ ಸಲ್ಲಿಸಲು ಅಜೀಮೋದಿನ ಕರೆ

ಕಲಬುರಗಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಪ್ರಾಂತೀಯ ತರಬೇತಿ ಕೇಂದ್ರದಲ್ಲಿ ಕಲಬುರಗಿ ಆರೋಗ್ಯ ಸಹಾಯಕರ ಹಿರಿಯ / ಕಿರಿಯ ನೌಕರರ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ೧೧ನೇ ವಾರ್ಷಿಕ ಸಭೆಯು ಸದರಿ ಸಂಘದ ಅಧ್ಯಕ್ಷ ಎನ್ ಡಿ ಕಾಚಾಪೂರ ರವರ ಅಧ್ಯಕ್ಷತೆಯಲ್ಲಿ ಜರುಗಿದ ಕಲಬುರಗಿ ಮಹಾನಗರ ಪಾಲಿಕೆಯ ಸದಸ್ಯರಾದ ಮಹ್ಮದ್ ಅಜೀಮೋದಿನ್ ಅವರು ಕಾರ್ಯಕ್ರಮ ಸಸಿಗೆ ನೀರುಣಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಈ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ಈಗ ಮಹಾನಗರ ಪಾಲಿಕೆ ಸದಸ್ಯನಾದ ನಾನು ಇಲಾಖೆಯ ಯಾವುದೇ ನೌಕರರು ಮಹಾನಗರ ಪಾಲಿಕೆಯಲ್ಲಿ ಕೆಲಸವಿದ್ದಲ್ಲಿ ಅವರಿಗೆ ಕೆಲಸಮಾಡಿಸಲು ತಮ್ಮ ಸೇವೆಗೆ ಸದಾ ಸಿದ್ದನಿದ್ದೆನೆಂದು ತಮ್ಮ ಸೇವಾವಧಿಯ ಪ್ರಸಂಗಗಳು ಮೆಲುಕು ಹಾಕುತ್ತಾ ಪ್ರಾಮಾಣಿಕತೆಯಿಂದ ಸೇವೆಯನ್ನು ಮಾಡುವಂತೆ ಸರ್ವ ಸದಸ್ಯರಿಗೆ ಕರೆ ನೀಡಿದರು.

ವೇದಿಕೆ ಮೇಲೆ ಮುಖ್ಯ ಅಥಿತಿ ಯಾಗಿ ಪ್ರಮುಖರಾದ ಉಪ ನಿರ್ದೇಶಕರು ಆಂತರಿಕ ಲೆಕ್ಕ ಪರಿಶೋಧಕ ಸಹಕಾರ ಸಂಘಗಳ ಇಲಾಖೆಯ ದೇವೇಂದ್ರ ಕುಮಾರ. ಸಹಕಾರ ಸಂಘದ ಉಪಾಧ್ಯಕ್ಷರಾದ ಗುಂಡಪ್ಪ ದೊಡ್ಡಮನಿ ವೇದಿಕೆ ಮೇಲೆ ಇದ್ದರು.

ವಿಶೇಷವಾಗಿ ಸದರಿ ಕಾರ್ಯಕ್ರಮದಲ್ಲಿ ೭೫ ನೇ ವರ್ಷದ ಸ್ವತಂತ್ರ ಮಹೋತ್ಸವದ ಅಂಗವಾಗಿ ೯ ಜನ ೭೫ ವರ್ಷ ವಯೋಮಾನದ ಆರೋಗ್ಯ ಸಹಾಯಕ ನಿವೃತ್ತಿ ಹೊಂದಿರುವ ಹಿರಿಯರಿಗೆ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಸನ್ಮಾನಿಸಿದರು. ಹಾಗೆ ೨೦೨೨ – ೨೦೨೭ನೇ. ಸಾಲಿನ ಆಡಳಿತ ಮಂಡಳಿಗೆ ಹೊಸದಾಗಿ ಚುನಾಯಿತರಾದ ೧೭ ಜನ‌ ನಿರ್ದೇಶಕರಿಗೂ ಕೂಡ ಸನ್ಮಾನಿಸಲಾಯಿತು.

ಹೊಸದಾಗಿ ಆರೋಗ್ಯ ನೀರಿಕ್ಷಾಣಧಿಕಾರಿಗಳ ಜಿಲ್ಲಾ ಸಂಘಕ್ಕೆ ಚುನಾಯಿತರಾದ ಅದ್ಯಕ್ಷರಾದ ಅಬ್ದುಲ್ ಮಜೀದ್, ಪ್ರಧಾನ ಕಾರ್ಯದರ್ಶಿಯಾದ ಕಾಶಿನಾಥ ಯಲಗೊಂಡ. ಖಜಾಂಚಿಯಾದ ಕಿರಣಕುಮಾರ. ಅದೇ ರೀತಿ ಆರೋಗ್ಯ ಸುರಕ್ಷಣಾಧಿಕಾರಿ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಮ್ಮ ಹಿರೇಮಠ ರವರಿಗೆ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಹಕಾರಿಗಳ ಪ್ರತಿಭಾವಂತ ಮಕ್ಕಳಿಗೆ ಅಧ್ಯಕ್ಷರಾದ ಎನ್ ಡಿ ಕಾಚಾಪೂರ ರವರು ವೈಯಕ್ತಿಕವಾಗಿ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಯಿತು. ಸಕಾಲದಲ್ಲಿ ಸಾಲ ಮರುಪಾವತಿಸಿದವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎನ್ ಡಿ ಕಾಚಾಪೂರ ರವರು ನಮ್ಮ ಪತ್ತಿನ ಸಹಕಾರ ಸಂಘದ ಕಾರ್ಯಕ್ರಮಕ್ಕೆ ನಿವೇಶನ ಖರೀದಿಸಲು ಹಾಗೂ ಕಟ್ಟಡಕ್ಕಾಗಿ ಸಂಘದಲ್ಲಿನ ವಿವಿಧ ನಿಧಿಗಳು ಕಟ್ಟಡದ ನಿಧಿಗೆ ವರ್ಗಾಯಿಸಲು ಅನುಮತಿ ಸರ್ವ ಸದಸ್ಯರಿಂದ ಅನುಮತಿ ಕೋರಿ ಸಂಘದ ನಡೆದು ಬಂದ ದಾರಿಯನ್ನು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಮಾತನಾಡಿದರು. ಕಾರ್ಯಕ್ರಮ ನಿರೂಪಣೆ ಗಣೇಶ ಚಿನ್ನಾಕರ್ , ಸ್ವಾಗತ ಅಮರಯ್ಯ, ಮತ್ತು ಅಮೃತಪ್ಪ ಹಿರೇಮನಿ ವಂದಿಸಿದರು.

ಈ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಪ್ರತಿನಿಧಿಗಳು ಇತರರು ಭಾಗವಹಿಸಿ ಯಶಸ್ವಿಯಾಗಿ ನಡೆಸಿಕೊಟ್ಟರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

21 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago