ಕಲಬುರಗಿ: ಕೇವಲ 10 ದಿನಗಳಲ್ಲಿ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರು ವ್ಯಕ್ತಿಗಳಿಗೆ ಮೆದುಳಿನ ನರರೋಗ ಶಸ್ತ್ರಚಿಕಿತ್ಸೆ ಕೈಗೊಳ್ಳುವ ಮೂಲಕ ಇಲ್ಲಿನ ಮಣೂರ್ ಮಲ್ಟಿ ಸ್ಪೆμÁ್ಯಲಿಟಿ ಆಸ್ಪತ್ರೆಯ ವೈದ್ಯರು ಅಮೋಘ ಸಾಧನೆ ಮಾಡಿದ್ದಾರೆ.
ಈ ಕುರಿತು ಮಣೂರ್ ಮಲ್ಟಿ ಸ್ಪೆμÁಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಫಾರೂಕ್ ಮಣೂರ್ ಹಾಗೂ ನ್ಯೂರೊ ಸರ್ಜನ್ ಡಾ.ಮೊಹ್ಮದ್ ಮಿನಾಜ್ ಹರಸೂರ್ ಅವರು ಆಸ್ಪತ್ರೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ, ಕೇವಲ 10 ದಿನಗಳಲ್ಲಿ ಎಂಟು ವರ್ಷದ ಬಾಲಕ ಸೇರಿದಂತೆ ಆರು ವ್ಯಕ್ತಿಗಳಿಗೆ ಅಪರೂಪದ ಮೆದುಳಿನ ನರರೋಗ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರೈಸಲಾಗಿದೆ ಎಂದು ಮಾಹಿತಿ ನೀಡಿದರು.
ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸೇಡಂ ತಾಲ್ಲೂಕಿನ ಸಂಗಾವಿ ಗ್ರಾಮದ 60 ವರ್ಷದ ಸದಾಶಿವ ಅವರನ್ನು ಕೋಮಾ ಸ್ಥಿತಿಯಲ್ಲಿ ಸಂಬಂಧಿಕರು ಮಣೂರ್ ಆಸ್ಪತ್ರೆಗೆ ಕರೆ ತಂದಿದ್ದರು. ಆಸ್ಪತ್ರೆಗೆ ಸೇರ್ಪಡೆಗೊಂಡ ಕೇವಲ ಒಂದು ತಾಸಿನೊಳಗೆ ಅಗತ್ಯ ವೈದ್ಯಕೀಯ ತಪಾಸಣೆಗಳನ್ನು ಕೈಗೊಂಡಾಗ ಅಪಘಾತದ ತೀವ್ರತೆಯಿಂದಾಗಿ ಮೆದುಳಿನ ಎಡಭಾಗದಲ್ಲಿ ರಕ್ತ ಹೆಪ್ಪುಗಟ್ಟಿರುವುದು ಪತ್ತೆಯಾಗಿತ್ತು. ತಕ್ಷಣ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಯಿತು. ಮುಂದಿನ ಕೇವಲ ಎರಡು ದಿನಗಳಲ್ಲಿ ಆತ ನಡೆದಾಡಲು ಆರಂಭಿಸಿದ್ದಾರೆ ಎಂದು ಡಾ.ಮಿನಾಜ್ ತಿಳಿಸಿದರು.
ಪಾಶ್ರ್ವವಾಯು ಪೀಡಿತ 65 ವರ್ಷದ ಗುಲಾಂ ಎಂಬುವವರು ಅತಿಯಾದ ರಕ್ತ ತೆಳುವು (ಬ್ಲಡ್ ಥಿನ್ನರ್ಸ್) ಔಷಧಗಳನ್ನು ಬಳಸುತ್ತಿದ್ದ ಕಾರಣಕ್ಕೆ ಇದ್ದಕ್ಕಿದ್ದಂತೆ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು. ಅಗತ್ಯ ತಪಾಸಣೆಯ ಬಳಿಕ ಇವರಿಗೂ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದಾಗಿ ಗೊತ್ತಾಯಿತು. ಹಾಗಾಗಿ ತಕ್ಷಣ ಆಪರೇಷನ್ ಕೈಗೊಂಡು ಕ್ಲೋಟಿಂಗ್ ಕ್ಲಿಯರ್ ಮಾಡಲಾಯಿತು ಎಂದು ಅವರು ವಿವರಿಸಿದರು.
ಅಪಘಾತದಲ್ಲಿ ತಲೆಗೆ ತೀವ್ರ ಸ್ವರೂಪದ ಪೆಟ್ಟುಬಿದ್ದ ಕಾರಣಕ್ಕೆ ಆಸ್ಪತ್ರೆಗೆ ಕರೆ ತರಲಾಗಿದ್ದ 30 ವರ್ಷದ ಮಲ್ಲಿಕಾರ್ಜುನ ಎಂಬುವವರಿಗೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ತುರ್ತು ಶಸ್ತ್ರಚಿಕಿತ್ಸೆಯ ಮೂಲಕ ವ್ಯಕ್ತಿಯ ಪ್ರಾಣ ಉಳಿಸಲಾಗಿದೆ.
ಮತ್ತೊಂದು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ 16 ವರ್ಷದ ದರ್ಶನ್ ಎಂಬ ಯುವಕ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟದೆಯೂ ಪ್ರಜ್ಞಾಹೀನನಾಗಿದ್ದ. ಅದರಲ್ಲೂ, ದರ್ಶನ್ ಗ್ರೇಡ್-3 ಸ್ಥಿತಿಯಲ್ಲಿದ್ದ ಕಾರಣಕ್ಕಾಗಿ ಆತನ ಸ್ಥಿತಿ ತೀರಾ ಚಿಂತಾಜನಕವಾಗಿತ್ತು. ಈ ಯುವಕನಿಗೆ ಶಸ್ತ್ರಚಿಕಿತ್ಸೆ ಇಲ್ಲದೆ ಅತ್ಯಂತ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ ಎಂದರು.
ಮಣೂರ್ ಮಲ್ಟಿ ಸ್ಪೆμÁಲಿಟಿ ಆಸ್ಪತ್ರೆಯ ಡಾ.ಅನಿಲ್ ಕಣ್ಣೂರ್, ಡಾ.ಸಾಫಿಯಾ ತರನ್ನುಮ್ ಇದ್ದರು.
ಇನ್ನು ಬ್ಲಡ್ ಥಿನ್ನರ್ಸ್ ಬಳಸುವ ವ್ಯಕ್ತಿಗಳಿಗೆ ಹೀಗೆ ದಿಢೀರ್ ಬ್ಲಡ್ ಕ್ಲಾಟಿಂಗ್ ಸಮಸ್ಯೆ ಕಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ, ಎಚ್ಚರ ವಹಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…