ಆಳಂದ: ಏಕಾಗೃತೆ ಅಧ್ಯಯನ ಸವಾಲು ಮತ್ತು ಸಮಸ್ಯೆ ಅರಿಯುವ ಮೂಲಕ ಬದುಕಿನ ಕಲೆಯನ್ನು ರೂಪಿಸುತ್ತದೆ ಎಂದು ಕೇಂದ್ರ ಸರ್ಕಾರದ ಭಾರತೀಯ ಖಾದ್ಯ ನಿಗಮದ ನಿರ್ದೇಶಕ ಆಗಿರುವ ಎಂಎಆರ್‌ಜಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರಾಘವೇಂದ್ರ ಚಿಂಚನಸೂರ ಅವರು ಇಂದಿಲ್ಲಿ ಹೇಳಿದರು.
ಪಟ್ಟಣದ ಮಾತೋಶ್ರೀ ಗಂಗಮ್ಮ ಮೊಗಲಯ್ಯಾ ಗುತ್ತೇದಾರ ಸ್ಮಾರಕ ಕನ್ಯಾ ಪ್ರೌಢಶಾಲೆಯ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಶೈಕ್ಷಣಿಕ ವಿಕಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬದುಕು ಒಂದು ಕಲೆಯಾಗಿದೆ. ಇದನ್ನು ಹಲವು ವಿಧಗಳಲ್ಲಿರುವ ಶಿಕ್ಷಣದ ಮೂಲಕ ಗಟ್ಟಿಗೊಳಿಸಲು ಸಾಧ್ಯವಿದೆ. ತರಗತಿಯಲ್ಲಿನ ಪಠ್ಯ-ಪುಸ್ತಕದ ವಿಷಯಗಳು ಜೀವನಕ್ಕೆ ಹತ್ತಿರವೇ ಆಗಿರುತ್ತವೆ ಇದನ್ನು ಏಕಾಗೃತೆ ಮತ್ತು ನಿರಂತರತೆ ಮೂಲಕ ಗುರುಯನ್ನು ಮುಟ್ಟಬೇಕು. ಆದರ್ಶ ಬದುಕಿಗೆ ಸಾಧಕರ ಸಾಧನೆಗಳ ಸ್ಫೂರ್ತಿಯಾಗಿ ಪಡೆದು ವಿದ್ಯಾರ್ಥಿ ಜೀವನ ಹಸನಾಗಿಸಬೇಕು ಎಂದು ಸಲಹೆ ನೀಡಿದರು.
ಪ್ರತಿಯೊಬ್ಬರ ಪ್ರತಿಭೆ ಗ್ರಹಿಕೆ ಶಕ್ತಿಯನ್ನು ಶ್ರಮದ ಮೂಲಕ ಹೊರಹಾಕಿದಾಗ ಮಾತ್ರ ಇನ್ನೊಬ್ಬರಿಗೆ ಮಾದರಿಯಾಗಲು ಸಾಧ್ಯವಿದೆ. ವಿದ್ಯಾರ್ಥಿಗಳು ಪ್ರಶ್ನೆಸುವ ಮನೋಭಾವ ಬೆಳೆಸಿಕೊಂಡರೆ ಪರಿಪೂರ್ಣತೆ ಸಾಧಕರಾಗುತ್ತಾರೆ. ಈ ನಿಟ್ಟಿನಲ್ಲಿ ನಿರಂತರ ಕ್ರಮಬದ್ಧ ಅಧ್ಯಯನ ಮೈಗೂಡಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪತ್ರಕರ್ತ ಮಹಾದೇವ ವಡಗಾಂವ ಅವರು ಮಾತನಾಡಿ, ಕಠಿಣ ಪರಿಶ್ರಮ ನಿರಂತರ ಅಧ್ಯಯನ ಕೈಗೊಂಡರೆ ಕಂಡ ಕನಸು ನನಸಾಗಲು ಸಾಧ್ಯವಿದೆ ಎಂದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಎಂಬಿಎಚ್‌ಜಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಲ್ಲಿನಾಥ ತುಕಾಣೆ ಅವರು, ಮಾತನಾಡಿ, ವಿದ್ಯಾರ್ಥಿದೀಸೆಯಿಂದಲೇ ಜ್ಞಾನಾರ್ಜನೆ, ಸಮಯ ಪ್ರಜ್ಞೆ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದರು.
ಶಾಲೆಯ ಮುಖ್ಯ ಶಿಕ್ಷಕ ಮಲ್ಲಿನಾಥ ಬುಕ್ಕೆ ಅವರು ಮಾತನಾಡಿ, ಪ್ರತಿವರ್ಷ ಉತ್ತಮ ಫಲಿತಾಂಶ ನೀಡುವ ಮೂಲಕ ವಿದ್ಯಾರ್ಥಿನಿಯರು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದಂತೆ ಪ್ರವೇಶ ಪಡೆದ ವಿದ್ಯಾರ್ಥಿನಿಯರ ಸಹ ಉತ್ತಮವಾಗಿ ಕಲಿತು ಮುಂದೆ ಬರಬೇಕು ಎಂದರು.
ಶಿಕ್ಷಕಿ ಸುಜಾತ ಸರಸಂಬಿ, ರೇಷ್ಮಾ ಕಠಾರೆ, ಮಂಜುನಾಥ ಗುತ್ತೇದಾರ ಉಪಸ್ಥಿತರಿದ್ದರು.
ಶಿಕ್ಷಕ ದಿನೇಶ ಕುರೇನ, ವಿದ್ಯಾರ್ಥಿನಿ ಪಲ್ಲವಿ ಶಾಂತಪ್ಪ, ಸಂಜನಾ ವಿಜಯಕುಮಾರ, ಕೀರ್ತಿ ವಿಜಯಕುಮಾರ, ಸೌಂದರ್ಯ ಬಸವರಾಜ, ಸೌಭಾಗ್ಯ ದೇವಿಂದ್ರ ಇತರರು ಮಾತನಾಡಿದರು. ಶಿಕ್ಷಕರಾದ ಮಹ್ಮದ್ ಶೇಖ ನಿರೂಪಿಸಿದರು. ಪುಷ್ಪಾ ವಗ್ಗನ ಸ್ವಾಗತಿಸಿದರು. ರಸೀಕಲಾ ಮುಲಗೆ ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…