ಕಲಬುರಗಿ: ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಇಂಗ್ಲೀಷ್ ವಿಭಾಗದಿಂದ ವಿಶ್ವ ಶಾಂತಿ ದಿವಸ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ವಿಜ್ಞಾನ ಮತ್ತು ವಾಣಿಜ್ಯ ಪದವಿ.ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಉಷಾದೇವಿ ಪಾಟೀಲ್ ಮಾತನಾಡಿ ವಿಶ್ವದಲ್ಲಿ ಅನೇಕ ಬಲಿಷ್ಟ ರಾಷ್ಟ್ರಗಳು ವಿಶ್ವ ಶಾಂತಿ ಬಯಸುತ್ತಿವೆ. ಯಾವ ದೇಶವು ಯುದ್ಧ ಬಯಸುತ್ತಿಲ್ಲ,ನಮಗೆ ಶಾಂತಿ ಬೇಕು,ಯುದ್ಧ ಬೇಡ ಎಂದು ವಿದ್ಯಾರ್ಥಿಗಳನ್ನುದ್ದೆಶಿಸಿ ಮಾತನಾಡಿದರು.
ಅವರು ಮುಂದುವರಿದು ಈ ಮೊದಲು ವಿಶ್ವ ಶಾಂತಿ ದಿವಸವನ್ನು ಪ್ರತಿ ವರ್ಷ ನೂಯಾರ್ಕನ ವಿಶ್ವ ಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ಶಾಂತಿ ಘಂಟೆ ಭಾರಿಸುವ ಮೂಲಕ ವಿಶ್ವ ಶಾಂತಿ ದಿನವನ್ನು ಆಚರಿಸಲಾಗುತಿತ್ತು.ಈಗಲೂ ಸಹ ಈ ದಿನದಂದು ವಿಶ್ವ ಸಂಸ್ಥೆಯಲ್ಲಿ ಮಹಾ ಅಧಿವೇಶನ ನಡೆಸುವುದು ವಾಡಿಕೆಯಾಗಿದೆ.2001ರಲ್ಲಿ “ವಿಶ್ವ ಶಾಂತಿ ದಿನ” ವನ್ನು ಅಧಿಕೃತವಾಗಿ ಪ್ರತಿವರ್ಷ ಸೆಪ್ಟೆಂಬರ್ 21ರಂದು ಆಚರಿಸಬೇಕೆಂದು ಘೋಷಿಸಲಾಯಿತು.
ಈ ಮೊದಲು ಪ್ರತಿ ವರ್ಷ ಸೆಪ್ಟೆಂಬರ್ ಮೂರನೇ ವಾರದ ಮಂಗಳವಾರದಂದು ವಿಶ್ವ ಶಾಂತಿ ದಿನ ಆಚರಿಸಲಾಗುತ್ತಿತ್ತು.ಆದ್ದರಿಂದ ನಾವೆಲ್ಲರು ಶಾಂತಿಯಿಂದ ಕಲಹವಿಲ್ಲದೆ ಜಾತಿ ಮತ,ಭೇದ ಮಾಡದೆ ಒಟ್ಟಾಗಿ ಕೂಡಿ ಬಾಳೋಣ ಎಂದು ಕರೆ ಕೊಟ್ಟರು. ಮೊದಲಿಗೆ ಇಂಗ್ಲೀಷ್ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಬಿ.ಯವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.ಅಶ್ವಿನಿ ಮಠ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಜೇಂದ್ರ ಬ. ಕೊಂಡಾ ಅಧ್ಯಕ್ಷತೆ ವಹಿಸಿ ಮಾತನಾಡುತ್ಣ ವಿಶ್ವದ ಜನರು ಇಂದು ಶಾಂತಿ ಬಯಸುತ್ತಿದ್ದಾರೆ ಆ ದಿಶೆಯಲಿ ನಾವು ಸಾಗೋಣ ಎಂದರು.ಕೊನೆಯಲ್ಲಿ ಶ್ರೀಮತಿ ಸುಮನ್ ಯಾಳವಾರ ವಂದಿಸಿದರು.ಶ್ರೀಮತಿ ಶೈಲಜಾ ನಾಕೇದಾರ ಕಾರ್ಯಕ್ರಮವನ್ನು ನಿರೂಪಿಸಿದರು.
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಜೈ ಕನ್ನಡಿಗರ…
ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…
ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರು ಮೂರು ವರ್ಷಗಳು ಪೂರೈಸಿರುವ…
ಕಲಬುರಗಿ: ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣ, ಶಿಕ್ಷಣವೆಂದರೆ ಕೇವಲ ಆನಲೈನ ಮಾಹಿತಿಯಲ್ಲ, ಪುಸ್ತಕದ ಜ್ಞಾನವೂ ಅಲ್ಲ, ವಿದ್ಯಾರ್ಥಿನಿಯರ ಬೌದ್ಧಿಕ, ಮಾನಸಿಕ,…