ಕಲಬುರಗಿ: ಅನನ್ಯ ಪದವಿ ಮತ್ತು ಸ್ನಾತ್ತಕೊತ್ತರ ಎಮ್.ಎಸ್.ಡಬ್ಲ್ಯೂ ಮಹಾವಿದ್ಯಾಲಯ ವತಿಯಿಂದ ಖಣದಾಳ ಗ್ರಾಮದಲ್ಲಿ ಹಮ್ಮಿಕೊಂಡಿದದ (7 ದಿನಗಳ ಕಾಲ) ಸಮಾಜ ಕಾರ್ಯ ಶಿಬಿರ ಮತ್ತು ಎನ್.ಎಸ್.ಎಸ್ ಶಿಬಿರದ ಸಮಾರೋಪ ಸಮಾರಂಭಕ್ಕೆ ಆಗಮಿಸಿದ ಮುಖ್ಯ ಅತಿಥಿಗಳಾದ ಸುನೀಲ ಸಾಹುಕಾರ ಚಿನಮಳ್ಳಿರವರು ಮಾತನಾಡಿ ಶಿಬಿರಾರ್ಥಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯ ಇಂತಹ ಶಿಬಿರ ನಮ್ಮ ಗ್ರಾಮದಲ್ಲಿ ಹಮ್ಮಿಕೊಂಡಿದ್ದು, ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು.
ಕಾಲೇಜಿನ ಅಧ್ಯಕ್ಷೆ ಸುಷ್ಮಾವತಿ ಹೊನ್ನಗೆಜ್ಜೆ ಮಾತನಾಡಿ ಶಿಬಿರದ ಯಶಸ್ಸಿಗೆ ಕಾರಣರಾದ ಎಲ್ಲಾ ಶಿಬಿರಾರ್ಥಿಗಳಿಗೂ ಗ್ರಾಮದ ಹಿರಿಯರಿಗೂ, ಉಪನ್ಯಾಸಕರಿಗೂ ತುಂಬು ಹೃದಯದ ಕೃತಜ್ಞತೆಗಳು ಅರ್ಪಿಸಿದರು.
ಖಣದಾಳ ಗ್ರಾ.ಪಂ ಸದಸ್ಯ ಸಂತೋಷ ಕೆ. ಚವ್ಹಾಣ ಮಾತನಾಡಿ ನಾವು ವಿದ್ಯಾರ್ಥಿ ಜೀವನದಲ್ಲಿ ಎನ್.ಎಸ್.ಎಸ್. ಶಿಬಿರಾರ್ಥಿಗಳಾಗಿದ್ದೆವು. ಇಂದು ನಾಯಕರಾಗುವುದಕ್ಕೆ ಶಿಬಿರದಲ್ಲಿ ಕಲಿತ ನಾಯಕತ್ವ ಗುಣವೆ ಕಾರಣ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಶರಣು.ಬಿ ಹೊನ್ನಗೆಜ್ಜೆ ಮಾತನಾಡಿ ಶಿಬಿರದಲ್ಲಿ ವಿದ್ಯಾರ್ಥಿಗಳು ಶಿಸ್ತು ಬಧ್ಧ ಜೀವನ ರೂಡಿಸಿಕೊಳ್ಳಬೇಕು ಮತ್ತು ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಇದೊಂದು ಉತ್ತಮ ಅವಕಾಶ ಎಂದರು.
ಶಿಬಿರದ ನಿರ್ದೇಶಕರಾದ ಕಿರಣಕುಮಾರ ಡಿ. ಕುಮಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಜೀವನದಬಗ್ಗೆ ಮೌಲ್ಯಗಳ ಪಾಠ ಈ ಶಿಬಿರ ಕಲಿಸುತ್ತದೆ ಎಂದರು.
ಈ ಸಂಧರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರಾದ ಶಹಬೋದ್ದಿನ್ ಪಟೇಲ್, ನಾಗರಾಜ ಬಿ. ಕಾಮಾ, ಶೇಖರ ಯಾದಗಿರಿ, ಶಿವಯೋಗಿ ಹೂಗಾರ, ಹುಣಚಪ್ಪ ತಳವಾರ, ಚಂದ್ರಕಾಂತ ನಾಟೀಕಾರ, ಶರಣು ಪಾಟೀಲ, ಉಪನ್ಯಾಸಕರಾದ ಶಿಲ್ಪಾ ಡಿ. ಲಿಂಗದೇ, ಗೌರಿ ಗಟಗೇರಿ, ಆಶಾರಾಣಿ ಕಲಕೋರೆ, ಪ್ರೀತಿ ಸಜ್ಜನ, ಭಾಗ್ಯಶ್ರೀ, ಚೈತ್ರಾ, ರಾಜೇಶ್ವರಿ, ಶಿವಕುಮಾರ ಸಿನ್ನೂರ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಜರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…