ಕಲಬುರಗಿ: ಒತ್ತಡದ ಬೆಂದ ಜೀವಕ್ಕೆ ಬಿಡುವಿನ ಸಮಯದಲ್ಲಿ ಆಲಿಸುವ ಸಂಗೀತದಿಂದ ಮಾನಸಿಕ ನೆಮ್ಮದಿ ಲಭಿಸಲು ಸಾಧ್ಯ ಸಂಗೀತ ತಾಯಿಬೇರು ಇದ್ದದಂತೆ ಎಂದು ವೇದಮೂರ್ತಿ ಶಂಕ್ರಯ್ಯ ಹಿರೇಮಠ ನುಡಿದರು.
ಇಲ್ಲಿನ ಶಾಹಾ ಬಜಾರ ನಾಕಾ ಮಹಾದೇವ ನಗರದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ನಿಂಗದಳ್ಳಿಯ ಶ್ರೀ ದಾನಮ್ಮದೇವಿ ಗಾನವೃಂದ ಸೇವಾ ಸಂಸ್ಥೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರುಗಳ ಸಹಯೋಗದಲ್ಲಿ ಸಂಗೀತ ಸೌರಭ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲಾವಿದರಿಗೆ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಆಗ್ರಹಿಸಿದರು. ನಿವೃತ್ತ ಎಎಸ್‍ಐ ಭೀಮಾಶಂಕರ ಚಿತಲಿ, ನಿಂಗದಳ್ಳಿ ಶ್ರೀ ದಾನಮ್ಮದೇವಿ ಗಾನವೃಂದ ಸೇವಾ ಸಂಸ್ಥೆ ಕಾರ್ಯದರ್ಶಿ ಶಿವಶರಣಯ್ಯ ಸ್ವಾಮಿ, ಶ್ರೀ ಸುಭಾಶ್ಚಂದ್ರ ಪಾಟೀಲ್ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ್ ಪಾಳಾ ಇವರು ಭಾಗವಹಿಸಿ ಮಾತನಾಡಿ ಕಲೆ, ಸಾಹಿತ್ಯ, ಸಂಗೀತ ಕಾರ್ಯಕ್ರಮಗಳು ಜನರ ಜೀವಾಳವಾಗಿವೆ ಆದ್ದರಿಂದ ಸಂಗೀತ ಆಲಿಸುವ ಮನೋಭಾವ ಎಲ್ಲರಲಿ ಬರಲಿ ಎಂದರು.
ಪತ್ರಕರ್ತ ಚಂದ್ರಕಾಂತ ಹಾವನೂರ, ಅಂಬಾರಾಯ ಕೋಣೆ ಇವರು ಮಾತನಾಡಿದರು. ಮುಖಂಡ ಸಿದ್ಧಣ್ಣಗೌಡ ಪಾಟೀಲ್, ಶ್ರೀದೇವಿ ಪೋತದಾರ, ರೇವಣಸಿದ್ಧಪ್ಪ ಬಿರಾದಾರ ವೇದಿಕೆಯಲ್ಲಿ ಇದ್ದರು.
ಡಾ. ಶಿವಶಂಕರ ಬಿರಾದಾರ (ಶಾಸ್ತ್ರೀಯ ಸಂಗೀತ), ಗುರುಲಿಂಗಯ್ಯ ಸ್ವಾಮಿ, ಗುರುಶಂತಯ್ಯ ಸ್ವಾಮಿ ( ಭಕ್ತಿಗೀತೆ), ಡಾ. ನಾಗರಾಜ ಕೋಟನೂರ, ಆನಂದ ನಂದಿಕೋಲಮಠ, ಸೃಷ್ಟಿ ಶಂಕರ ಪಾಟೀಲ್, ನಾಗೇಂದ್ರ ಸಪ್ಪನಗೋಳ , ರಕ್ಷೀತಾ ಅಂಬಾಜಿ ( ವಚನ ಗಾಯನ), ಅಣ್ಣಾರಾವ ಶೆಳ್ಳಗಿ (ಸುಗಮ ಸಂಗೀತ), ಸೂರ್ಯಕಾಂತ ಪೂಜಾರಿ, ಚೇತನ ಕೋಬಾಳ, ಶಿವರಾಜ ನಿರಗುಡಿ (ತತ್ವಪದ), ವಿನೋದ ದಸ್ತಾಪೂರ (ಭಾವಗೀತೆ), ಶಿವಕುಮಾರ ಪಾಟೀಲ್ (ಕನ್ನಡ ಗೀತೆಗಳು), ತೀಟಯ್ಯ ಶಾಸ್ರ್ತೀ, ಉದಯಕುಮಾರ ಶಾಸ್ರ್ತೀ ( ಕಥಾ ಕೀರ್ತನೆ), ಸುಭಾಷ ತೇಲಿ, ಚೇತನ ಬೀದಿಮನಿ ( ಜಾನಪದ ಗೀತೆ), ಶ್ರೀಶೈಲ್ ಪಾಟೀಲ್ (ಭಜನೆ ಪದ), ತೇಜು ನಾಗೋಜಿ ( ದಾಸವಾಣಿ) ಪದ್ಯಗಳು ನೆರೆದ ಕಲಾ ಆಸಕ್ತರ ಗಮನ ಸೆಳೆದವು. ವೀರಭದ್ರಯ್ಯ ಸ್ಥಾವರಮಠ, ಮೌನೇಶ ಪಂಚಾಳ, ಸಂತೋಷ ಕೋಡ್ಲಿ, ರವಿಸ್ವಾಮಿ ಗೋಟೂರ ಇವರು ಸಂಗೀತ, ತಬಲಾ, ಡೋಲಕ ನುಡಿಸಿದರು.ಡಾ. ಶಿವಶಂಕರ ಬಿರಾದಾರ, ಚಂದ್ರಕಾಂತ ಗುಳಗಿ, ಶಿವಕುಮಾರ ಪಾಟೀಲ್, ಸೂರ್ಯಕಾಂತ ಬಿರಾದಾರ ಇವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…