ಕಲಬುರಗಿ: ಗ್ರಾಮ ಸ್ವಚ್ಛತೆಗೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದಿಂದ ಕಸ ನಿರ್ವಹಣೆಗೆ ಸ್ವಚ್ಛ ಸಂಕೀರ್ಣ ಮಾಡಿದ್ದು, ಪ್ರತಿಯೊಬ್ಬರು ತಮ್ಮ ಮನೆಯ ಕಸವನ್ನು ಹಸಿ ಮತ್ತು ಒಣ ಕಸವನ್ನಾಗಿ ವಿಂಗಡಿಸಿ ಗ್ರಾಮದ ಮನೆಯ ಮುಂದೆ ಬರುವ ಸ್ವಚ್ಛವಾಹಿನಿ ನೀಡಬೇಕು. ಮತ್ತು ಬಚ್ಚಲು ಮತ್ತು ಪಾತ್ರೆ ತೊಳೆದ ನೀರನ್ನು ಇಂಗು ಗುಂಡಿ ನಿರ್ಮಿಸಿ ಅದರೊಳಗೆ ಬಿಟ್ಟರೆ ಇಡೀ ಗ್ರಾಮ ಸ್ವಚ್ಛಮಯವಾಗಿ ಕಾಣುವುದು ಮತ್ತು ಎಕ ಬಳಕೆಯ ಪ್ಲಾಸ್ಟೀಕನ್ನು ಗ್ರಾಮದಲ್ಲಿ ಸಂಪೂರ್ಣ ನಿಷೇಧಿಸಬೇಕೆಂದು ಕಲಬುರಗಿ ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಗೀರಿಶ್ ಬದೋಲೆ ರವರು ಕರೆ ನೀಡಿದರು.
ಇಂದು ಸೇಡಂ ತಾಲೂಕಿನ ಮಳಖೇಡ ಗ್ರಾಮ ಪಂಚಾಯತ ಮಳ ಖೇಡ ಗ್ರಾಮದಲ್ಲಿ,್ಲ ಜಿಲ್ಲಾ ಪಂಚಾಯತ್ ಕಲಬುರಗಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಲಬುರಗಿ, ಸ್ವಚ್ಛ ಭಾರತ ಮಿಷನ್ ಮತ್ತು ಜಲ ಜೀವನ ಮಿಷನ್ , ತಾಲೂಕು ಪಂಚಾಯತ ಸೇಡಂ, ಹಾಗೂ ಗ್ರಾಮ ಪಂಚಾಯತ್ ಮಳಖೇಡ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯಲ್ಲಿ ಸೆಪ್ಟೆಂಬರ್ 15ನೇ ಅಕ್ಟೋಬರ್ 2022 ರಿಂದ 2ನೇ ಅಕ್ಟೋಬರ್ 2022 ರವರೆಗೆ ಸ್ವಚ್ಛತಾ ಹೀ ಸೇವಾ ಅಂದೋಲನ ಅಂಗವಾಗಿ ಇಂದು ಸಾವಳಗಿ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿಗ್ರಾಮದ ಗ್ರಾಮದಲ್ಲಿರುವ ಕೋಟೆಯೊಳಗೆ ಮತ್ತು ಸುತ್ತಮುತ್ತ ಸ್ವಚ್ಛತೆ ಮಾಡುವ ಮೂಲಕ ಗ್ರಾಮದಲ್ಲಿ ಶ್ರಮದಾನಕ್ಕೆ ಸಾಂಕೇತಿವಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಎಸ್.ಬಿ.ಎಂ. ಯೋಜನಾ ನಿದೇರ್ಶಕರಾದ ಜಗದೇವ ಬಿ., ರವರು ಮಾತನಾಡಿದರು, ತಾ.ಪಂ.ಸೇಡಂ ಕಾರ್ಯನಿರ್ವಾಹಕ ಅಧಿಕಾರಿ ಶಂಕರರಾಠೋಡ ರವರು ಆಂದೋಲನದ ಪ್ರತಿಜ್ಞಾ ವಿಧಿ ಬೋದಿಸಿದರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸೇಡಂ ಉಪ ವಿಭಾಗ ಎ.ಇ.ಇ. ವಿಜಯಕುಮಾರ, ಪಿಆರ್‍ಇಡಿ ಎ.ಇ.ಇ. ಸಾಯಬಣ್ಣ, ಟಿಹೆಚಓ ರಾಕೇಶ ಕಾಂಬಳೆ, ಸಿಡಿಪಿಓ ಗೌತಮ್ಮ ಸಿಂಧೆ ಹಾಗೂ ಗ್ರಾ.ಪಂ. ಅಧ್ಯಕ್ಷರು ಮತ್ತು ಸದಸ್ಯರು , ಸಹಾಯಕ ನಿದೇರ್ಶಕರು ಅನಿಲ್ ಮಾನ್ಪಡೆ, ಕಿರಿಯ ಅಭಿಯಂತರರು ಅಬ್ದುಲ್ ಸಲಾಂ,ಮತ್ತು ಪಿಡಿಓ ಜಗದೀಶ , ಗ್ರಾ.ಪಂ. ಸದಸ್ಯರು, ಜಲ ಜೀವನ ಮಿಷನ್ ಡಿಪಿಎಂ. ಡಾ.ರಾಜು ಕಂಬಳಿಮಠ ಮತ್ತು ಎಸ್.ಬಿ.ಎಂ. ಜಿಲ್ಲಾ ಸಮಾಲೋಚಕರು, ಗುರುಬಾಯಿ ಇಂಡಿ, ಮಲ್ಲಿಕಾರ್ಜುನ ಕುಂಬಾರ , ಪಾಪರಡ್ಡಿ ಶೇರಿಕಾರ, ಬಾಗಪ್ಪ ಮೋದಿ, ಮತ್ತು ರೂಢಾ ಸಂಸ್ಥೆಯ ಸಿಬ್ಬಂಧಿಗಳಾದ ನಾಗರಾಜ, ಅನಂತನಾಗ ಮತ್ತು ಶ್ರವಣ ಕುಮಾರ, ,ಎನ್.ಆರ್.ಎಲ್. ಎಂ.ತಾಲೂಕು ವ್ಯವಸ್ಥಾಪಕರು ಚನ್ನವೀರ ಸ್ವಾಮಿ ಮತ್ತು ಸಿಬ್ಬಂಧಿಗಳು ಆಶಾ ಮತ್ತು ಅಂಗನವಾಡಿ ಕಾಯೆಕರ್ತೆಯರು ರವರುಗಳು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…