ಕಲಬುರಗಿ: ಆಳಂದ ತಾಲ್ಲೂಕಿನ ಕಡಗಂಚಿ ಬಳಿಯಿರುವ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಎಲ್ಲವೂ ಅಯೋಮಯವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕುಲಸಚಿವ ಪೆÇ್ರ.ಬಸವರಾಜಡೋಣೂರ ತಪ್ಪು ಮಾಹಿತಿ ನೀಡಿ ಸಹ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾಗಿದ್ದಾರೆ ಎಂದು ವಿಶ್ವವಿದ್ಯಾಲಯಗಳ ಹಿತರಕ್ಷಣಾ ಸಮಿತಿ, ರಿಪಬ್ಲಿಕನ್ ಯೂತ್ ಫೆಡರೇಷನ್‍ನ ಸಂಚಾಲಕ ಸುನಿಲ್ ಮಾನ್ಪಡೆಆರೋಪ ಮಾಡಿದರು.
ಯುಜಿಸಿ ನಿಯಮಗಳು ಜೂನ್ 2010ರಲ್ಲಿ ಬದಲಾವಣೆ ಮಾಡಿದ್ದು.ಆ ನಿಯಮದ ಪ್ರಕಾರಯಾವ ವಿಷಯದ ಸಹ ಪ್ರಾಧ್ಯಾಪಕ ಹುದ್ದೆಇದೆಯೋ ಆ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆಯಬೇಕು ಎಂಬ ನಿಯಮವಿದೆ.ಆದರೆ ಪೆÇ್ರ.ಬಸವರಾಜಡೋಣೂರಅವರು 2010ರಲ್ಲಿ ಇಂಗ್ಲಿಷ್‍ನಲ್ಲಿ ಪಿಎಚ್.ಡಿ ಪದವಿ ಪಡೆದಿಲ್ಲ ಎಂದು ಆರೋಪಿಸಿದ ಅವರು, ಈ ನೇಮಕಾತಿ ಪ್ರಕ್ರಿಯೆ ಅಕ್ರಮದಿಂದ ಕೂಡಿದ್ದು ಕೂಡಲೇ ಇದರ ಬಗ್ಗೆ ನ್ಯಾಯಾಂಗತನಿಖೆ ಮಾಡಿಸಬೇಕುಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಕುಲಸಚಿವ ಪೆÇ್ರ.ಬಸವರಾಜಡೋಣೂರಅವರು ವಿವಿ ಕುಲ ಸಚಿವರಿಗೆ ಮೀಸಲಿಟ್ಟಿದ್ದಎರಡೂ ಕಾರುಗಳನ್ನು ತಮ್ಮ ವೈಯಕ್ತಿಕ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ. ರಾಜ್ಯ ಮತ್ತು ಹೊರ ರಾಜ್ಯಗಳಿಗೆ ತೆರಳಿದಂತೆ ತೋರಿಸಿ ವಿವಿಯ ಹಣವನ್ನುದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಎಲ್ಲ ದಾಖಲಾತಿಗಳು ನಮ್ಮಲ್ಲಿದ್ದು, ಈ ಬಗ್ಗೆ ತನಿಖೆ ನಡೆಸಬೇಕುಎಂದು ಆಗ್ರಹಿಸಿದರು.ಸಂತೋಷ ಮೇಲ್ಮನಿ, ಆಶ್ವಿನಿ ಮದನಕರ್, ಬಾಬುರಾವ ಬೀಳಗಿ, ಹಣಮಂತಇಟಗಿ, ಮೈಲಾರಿದೊಡ್ಡಮನಿ, ಗೌತಮಕರಿಕಲ್, ಧರ್ಮಣ್ಣಕೋನಿಕರ್, ರುಕ್ಮೇಶ ಭಂಡಾರಿಇದ್ದರು.
ವಿಶ್ವವಿದ್ಯಾಲಯದಲ್ಲಿಆರ್‍ಎಸ್‍ಎಸ್ ಪಥಸಂಚಲನ, ಗಣೇಶೋತ್ಸವ, ರಾಮ ನವಮಿ ಆಚರಣೆ ಮಾಡುವ ಮೂಲಕ ಕೋಮು ಭಾವನೆ ಮೂಡಿಸಲಾಗುತ್ತಿದೆ.ಇದರಿಂದಕಲಿಯಬೇಕಾದ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುವಂತೆ ಮಾಡುತ್ತಿದ್ದಾರೆ ಎಂದು ಮಾನ್ಪಡೆ ಹೇಳಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…