ಬಿಸಿ ಬಿಸಿ ಸುದ್ದಿ

ಶಿಕ್ಷಣ, ಉದ್ಯೋಗ ಮೂಲಭೂತ ಹಕ್ಕಾಗಿಸಿ

ಜನಹಿತಕ್ಕೆ ಶರಣಾಗಬೇಕಾದ ಸ್ವಾಮಿಗಳು ಜಾತಿ ಹಿತಕ್ಕೆ ಶರಣಾಗುತ್ತಿರುವುದು ಈ ದೇಶದ ವಾಸ್ತವ. ಮೀಸಲಾತಿ ಪಡೆದು ಮುಂದೆ ಬಂದವರುತಮ್ಮ ಸಮುದಾಯಕ್ಕೆಜ್ಞಾನ ಮತ್ತು ತಿಳಿವಳಿಕೆಯನ್ನು ಧಾರೆಯರೆಯಬೇಖು. ತಮ್ಮ ಸಂಪಾದನೆಯಲ್ಲಿನ ಶೇ.10ರಷ್ಟಾದರೂ ವಂಚಿರಾದವರಿಗೆ ನೀಡಬೇಕು.ಸಂವಿಧಾನ ಸಂರಕ್ಷಿಸುವಲ್ಲಿ ಸಾರ್ವಜನಿಕರ ಪಾತ್ರವೂಅಗತ್ಯವಾಗಿದೆ. -ನ್ಯಾಯಮೂರ್ತಿ ನಾಗಮೋಹನದಾಸ್.

ಕಲಬುರಗಿ: ದೇಶದಲ್ಲಿಅರಾಜಕತೆ, ಕೋಮುವಾದರಾರಜಿಸುತ್ತಿದ್ದು, ಸಂವಿಧಾನದಓದು ಮತ್ತು ತಿಳಿವಳಿಕೆಯಿಂದ ಪ್ರಜಾತಂತ್ರ ವ್ಯವಸ್ಥೆ ಉಳಿಸಬಹುದು. ಸಂವಿಧಾನ ಉಳಖಿದರೆ ಸಾಮಾಜಿಕ ನ್ಯಾಯ, ಮೀಸಲಾತಿ ಮತ್ತು ಪ್ರಜಾಪ್ರಭುತ್ವ ಉಳಿಯಲು ಸಾಧ್ಯಎಂದು ನ್ಯಾಯಮೂರ್ತಿ ನಾಗಮೋಹನದಾಸ್‍ಅಭಿಪ್ರಾಯಪಟ್ಟರು.

ಇಲ್ಲಿನ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ನಗರದಕನ್ನಡ ಭವನದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಸಂವಿಧಾನ ಮತ್ತು ಸಾಮಾಜಿಕ ನ್ಯಾಯಒಂದು ದಿನದ ವಿಚಾರ ಸಂಕಿರಣದಲ್ಲಿ ವಿಶೇಷ ಉಪನ್ಯಾಸ ನೀಡಿದಅವರು, ಶಿಕ್ಷಣ ಮತ್ತುಉದ್ಯೋಗವನ್ನು ಮೂಲಭೂತ ಹಕ್ಕಾಗಿ ಪರಿವರ್ತಿಸಬೇಕುಎಂದು ಸಲಹೆ ನೀಡಿದರು.

ವರ್ಣ, ವರ್ಗ, ಜಾತಿ, ಧರ್ಮ, ಸಂಸ್ಕøತಿ ಭೇದಇರುವ ಈ ದೇಶದಲ್ಲಿಅಸಮಾನತೆಯನ್ನುಕೊನೆಗಾಣಿಸುವುದೇ ಸಾಮಾಜಿಕ ನ್ಯಾಯ.ಇಂತಹ ಸಾಮಾಜಿಕ ನ್ಯಾಯಕ್ಕಗಿ ಬುದ್ಧ, ಬಸವ ಧ್ವನಿ ಎತ್ತಿ ಹೋರಾಡಿದರು.ಡಾ. ಬಿ.ಆರ್.ಅಂಬೇಡ್ಕರ್‍ಅವರುಅದನ್ನು ಸಂವಿಧನದಲ್ಲಿ ಅಳವಡಿಸುವ ಮೂಲಕ ಸಾಮಾಜಿಕ ನ್ಯಾಯದ ಪರವಾಗಿ ಹೊರಾಡಿದರು.ಯಾರುಅನ್ಯಾಯಕ್ಕೆ ಒಳಗಾಗಿದ್ದಾರೋ ಅವರಿಗೆ ನ್ಯಾಯಕೊಡಿಸುವುದೇ ಸಾಮಾಜಿಕ ನ್ಯಾಯ.ಮೀಸಲಾತಿಇದರ ಸಣ್ಣ ಭಾಗಎಂದುಅವರು ತಿಳಿಸಿದರು.

ಮೀಸಲಾತಿಯಿಂದಾಗಿಎಸ್.ಸಿ., ಎಸ್ಟಿ ಹಾಗೂ ಓಬಿಸಿಗಳಿಗೆ ಅನುಕೂಲ ಆಗಿದೆ. ಆದರೆ ಇದೀಗ ಮೀಸಲಾತಿ ಬಗ್ಗೆ ತಪ್ಪು ತಿಳಿವಳಿಕೆ ಮೂಡಿದೆ.ಕೆಲವರಿಗೆಈವರೆಗೆ ಸಂವಿಧಾನದಲ್ಲಿಏನಿದೆಎಂಬುದು ತಿಳಿದಿಲ್ಲ. ಇನ್ನೂ ಕೆಲವರಿಗೆ ಸಂವಿಧಾನ ತಿಳಿದಿದೆ.ಆದರೆಅವರುಅದನ್ನು ಅನುಷ್ಠಾನಕ್ಕೆ ತರುತ್ತಿಲ್ಲ. ಎಲ್ಲಿಯವರೆಗೆಅಸಮಾನತೆಇರುತ್ತದೋಅಲ್ಲಿಯವರೆಗೆ ಮೀಸಲಾತಿಇರಬೇಕು.ಆದರೆ ಶಾಸ್ವತವಾಗಿಇರಬೇಕಾಗಿಲ್ಲ. ಸಂವಿಧಾನ ವಿರೋಧಿ ಚಟುವಟಿಕೆಗಳ ಬಗ್ಗೆ ಬಗ್ಗೆ ಜನಾಭಿಪ್ರಾಯರೂಪಿಸಬೇಕು ಎಂದುಕರೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವಡಾ.ಶರಣಪ್ರಕಾಶ ಪಾಟೀಲ ಸಾಮಾಜಿಕ ನ್ಯಾಯವೇ ಸಂವಿಧಾನದ ತಳಹದಿ ಎಂದು ಹೇಳಿದರು.ಪ್ರೊ.ಆರ್.ಕೆ. ಹುಡಗಿ, ಮಾಜಿಎಂಎಲ್ಸಿಅಲ್ಲಮಪ್ರಭು ಪಾಟೀಲ ನೆಲೋಗಿ, ಪ್ರೊ.ಸಂಗೀತಾಕಟ್ಟಿಮನಿ, ಅರ್ಜುನ ಭದ್ರೆ, ಎಂ.ಎನ್. ಪಾಟೀಲ, ಅಮೃತ ಸಜ್ಜನ ಮುಖ್ಯ ಅತಿಥಿಗಳಾಗಿದ್ದರು.ಜೆಸ್ಕಾಂ ಹಿರಿಯಅಭಿಯಂತರ ಬಿ.ಆರ್.ಬುದ್ಧಾ ಅಧ್ಯಕ್ಷತೆವಹಿಸಿದ್ದರು.ರಮೇಶ ಮಾಡ್ಯಾಳಕರ್ ನಿರೂಪಿಸಿದರು.ಸುರೇಶ ಮೆಂಗನ್ ಸ್ವಾಗತಿಸಿದರು.ದತ್ತಾತ್ರೇಯ ಇಕ್ಕಳಕಿ, ಮಹಾಂತೇಶ ನವಲಕಲ್, ಮಾರುತಿ ಗೋಖಲೆ, ಡಾ. ಶ್ರೀಶೈಲ ಘೂಳಿ, ಡಾ.ಅಪ್ಪಗೆರೆ ಸೋಮಶೇಖರ, ಡಾ.ಶಿವರಂಜನ ಸತ್ಯಂಪೇಟೆ, ಡಾ.ಅಶೋಕ ಶೇಟಕಾರಡಾ.ವೆಂಕಟರೆಡ್ಡಿ, ಅರ್ಜುನಗೊಬ್ಬೂರಇತರರಿದ್ದರು.

emedialine

Recent Posts

ಸಚಿವ ಪ್ರೀಯಾಂಕ್ ಖರ್ಗೆ ಹುಟ್ಟುಹಬ್ಬ ನಿಮಿತ್ತ ಬಾಲಕಿಯರ ಕ್ರಿಕೇಟ್

ಕಲಬುರಗಿ: ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಐಟಿ, ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ್ ಖರ್ಗೆ ಅವರ 46ನೇ ವರ್ಷದ…

12 seconds ago

ಯತ್ನಾಳ ಹೋರಾಟಕ್ಕೆ ಬೆಂಬಲವಿಲ್ಲ : ಆನಂದ ಕಣಸೂರ

ಕಲಬುರಗಿ: ವಕ್ಫ್ ಬೋರ್ಡ್ ವಿರುದ್ಧ ಹೋರಾಟ ಮಾಡುತ್ತಿರುವ ಯತ್ನಾಳ ಟೀಮ್ ಗೆ ಬೆಂಬಲವಿಲ್ಲ ಭಾರತೀಯ ಜನತಾ ಪಕ್ಷದ ಯುವ ಮುಖಂಡ…

3 mins ago

ವಕ್ಫ್ ಮಸೂದೆ ತಿದ್ದುಪಡಿಗೆ ಮುಸ್ಲೀಮ ವೈಯಕ್ತಿಕ ಕಾನೂನು ಮಂಡಳಿ ವಿರೋಧ

ಕಲಬುರಗಿ: ನ.25- ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ತರಲು ಮುಂದಾಗಿದ್ದನ್ನು ಆಲ್ ಇಂಡಿಯಾ ಮುಸ್ಲೀಮ ವೈಯಕ್ತಿಕ ಕಾನೂನು…

14 mins ago

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

23 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago