ಬಿಸಿ ಬಿಸಿ ಸುದ್ದಿ

ಸಂವಿಧಾನ ದೇಶಕ್ಕೆ; ವಚನಗಳು ದೇಹಕ್ಕೆ

ಕಲಬುರಗಿ: ಬಸವಾದಿ ಶರಣರ ವಚನ ಕ್ರಾಂತಿ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಕ್ರಾಂತಿ. ಕಾನೂನಿನಲ್ಲಿ ಅಪರಾಧ ಹಾಗೂ ಶಿಕ್ಷೆ ಮಾತ್ರ ಇದೆ. ಆದರೆ ಅಪರಾಧ ಮಾಡಬಾರದು ಎಂದು ವಚನಗಳು ಹೇಳುತ್ತವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾಯಮೂರ್ತಿ ಕೆ.ಬಿ. ಪಾಟೀಲ ಅಭಿಪ್ರಾಯಪಟ್ಟರು.

ಬಸವ ಸಮಿತಿ, ಡಾ.ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರ, ಗುಲ್ಬರ್ಗ ನ್ಯಾಯವಾದಿಗಳ ಸಂಘ, ಎಸ್.ಎಸ್.ಎಲ್. ಕಾನೂನು ಮಹಾವಿದ್ಯಾಲಯ, ಸಿದ್ಧಾರ್ಥ ಕಾನೂನು ಮಹಾ ವಿದ್ಯಾಲಯ, ವಿಜ್ಞಾನೇಶ್ವರ ಕಾನೂನು ಮಹಾ ವಿದ್ಯಾಲಯ ಮರತೂರ ಇವರ ಸಂಯುಕ್ತಾಶ್ರಯದಲ್ಲಿ ಜಯನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ ಅವರು ರಚಿಸಿದ ಸಂವಿಧಾನ ಮತ್ತು ವಚನಗಳು ಕೃತಿ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾನೂನುಗಳು ಎಷ್ಟೇ ಬಂದಿರಬಹುದು. ಆದರೆ ತಪ್ಪುಗಳನ್ನು ಮಾಡದಿರುವಂತೆ ವಚನಗಳು ಹೇಳಿಕೊಡುತ್ತವೆ. ನಮ್ಮ ಮಾನಸಿಕ ಸ್ಥಿತಿ ಬದಲಾಯಿಸುವ ಶಕ್ತಿ ವಚನಗಳಿಗಿವೆ ಎಂದು ತಿಳಿಸಿದರು.

ಕೃತಿ ಬಿಡುಗಡೆ ಮಾಡಿ ಮಾತನಾಡಿದ ಕೇಂದ್ರ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಮಾತನಾಡಿ, ವಚನ ಚಳವಳಿಯ ನೇತಾರ ಬಸವಣ್ಣ ರಾಜಪ್ರಭುತ್ವದಲ್ಲಿ ಕಾಯಕ ಪ್ರಜ್ಞೆಯಲ್ಲಿರುತ್ತಿದ್ದರು. ಪರುಷ ಕಟ್ಟೆಯಲ್ಲಿ ಪ್ರಜಾತಾಂತ್ರಿಕದ ಸ್ಥಿತಿಯಲ್ಲಿರುತ್ತಿದ್ದರು. ಮಹಾಮನೆಯಲ್ಲಿ ಸತ್ಯ ನ್ಯಾಯಾನ್ವೇಷಣೆಯಲ್ಲಿ ತೊಡಗಿರುತ್ತಿದ್ದರು ಎಂದು ವಚನಕಾರರ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ತಿಳಿಸಿದರು.

ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದ ಶರಣು ಬದುಕಿನ ಸಂವಿಧಾನ ಹೇಳಿಕೊಟ್ಟರು. ನಮಗೆ ಈಗ ಗುಜರಾತ ಮಾದರಿ ಬೇಕಿಲ್ಲ. ಬಸವಣ್ಣನ ಮಾದರಿ ಬೇಕಿದೆ ಎಂದು ಹೇಳಿದರು.

ಕೃತಿ ಕುರಿತು ಮಾತನಾಡಿದ ಕೃತಿಯ ಲೇಖಕ ನ್ಯಾಯಮೂರ್ತಿ ನಾಗಮೋಹನ ದಾಸ ಮಾತನಾಡಿ, ಸಂವಿಧಾನದ ಓದು ಅಭಿಯಾನದಂತೆ ಸಂವಿಧಾನ ಮತ್ತು ವಚನಗಳು ಕುರಿತು ಅಭಿಯಾನ ನಡೆಸಬೇಕು. ಅನುಭವ ಮಂಟಪದಲ್ಲಿ ಸಾಮಾಜಿಕ, ಧಾರ್ಮಿಕ ಚರ್ಚೆ ನಡೆಸಿದ ಶರಣರು, ಪಾರದರ್ಶಕವಾಗಿ ನಡೆದುಕೊಂಡರು. ಆದರೆ ಇಂದಿನ ಪಾರ್ಲಿಮೆಂಟ್ ನಲ್ಲಿ ಭಾವನಾತ್ಮ ವಿಷಯಗಳಿಗೆ ಪ್ರಾಧಾನ್ಯತೆ ಸಿಗುತ್ತದೆ. ಬದುಕಿನ ವಿಷಯಕ್ಕೆ ಇಂದು ಅವಕಾಶ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಈಗಿನಂತೆ ಸ್ವಾತಂತ್ರ್ಯ ಸಿಕ್ಕ ನಂತರ ಆಗಲೂ ಹಿಂದೂ ರಾಷ್ಟ್ರ ಮಾಡಬೇಕೆಂಬ ಪ್ರಶ್ನೆ ಎದುರಾಗಿತ್ತು.ಆದರೆ ಇಲ್ಲಿನ ಹಿಂದೂ, ಮುಸ್ಕಿಂ, ಕ್ರಿಶ್ಚಿಯನ್ನರು  ಎಲ್ಲರೂ ಜಾತ್ಯತೀತ ರಾಷ್ಟ್ರ ಬಯಸಿದರು. ಸಂವಿಧಾನ ಕಾನೂನು ಚೌಕಟ್ಟು ಒದಗಿಸಿದರೆ ವಚನಗಳು ನೈತಿಕತೆಯ ಚೌಕಟ್ಟು ಒದಗಿಸಬಲ್ಲವು ಎಂದು ವಿವರಿಸಿದರು.

ಕರ್ನಾಟಕ ರಾಜ್ಯ ಅಡ್ವೊಕೇಟ್ ಬಾರ್ ಕೌನ್ಸಿಲ್ ಅಧ್ಯಕ್ಷ ಕಾಶಿನಾಥ ಮೋತಕಪಲ್ಲಿ, ಗುಲ್ಬರ್ಗ ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಜಕುಮಾರ ಎಸ್. ಕಡಗಂಚಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ವಿಶ್ರಾಂತ ನ್ಯಾಯಮೂರ್ತಿ ಸಿ.ಆರ್. ಬೆನಕನಳ್ಳಿ ಅಧ್ಯಕ್ಷತೆ ವಹಿಸಿದ್ದರು.

ಬಸವ ಸಮಿತಿ ಜಿಲ್ಲಾಧ್ಯಕ್ಷೆ ಡಾ. ವಿಲಾಸವತಿ ಖೂಬಾ, ಜಿಲ್ಲಾ ನ್ಯಾಯವಾದಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಎನ್. ಕಪನೂರ ವೇದಿಕೆಯಲ್ಲಿದ್ದರು.

ಎಚ್.ಕೆ. ಉದ್ದಂಡಯ್ಯ ನಿರೂಪಿಸಿದರು. ಡಾ. ವೀರಣ್ಣ ದಂಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಆನಂದ ಸಿದ್ದಾಮಣಿ ವಂದಿಸಿದರು.

ಮಾಜಿ ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ, ಬಂಡಪ್ಪ ಕೇಸೂರ, ಬಸವರಾಜ ಮೊರಬದ, ಆರ್.ಕೆ. ಹುಡಗಿ, ಡಾ. ಜಯಶ್ರೀ ದಂಡೆ ಇತರರಿದ್ದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

56 mins ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

12 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

12 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

14 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

14 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

14 hours ago