ವಾಡಿ: ಎಲ್ಲಾ ರೀತಿಯ ಶೋಷಣೆಗಳಿಂದ ಮುಕ್ತವಾದ ಸಮಾಜ ನಿರ್ಮಿಸುವ ಕನಸು ಹೊತ್ತ ಕ್ರಾಂತಿಕಾರಿಗಳ ತ್ಯಾಗ ಬಲಿದಾನಕ್ಕೆ ದೇಶವಾಳಿದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಕಿಂಚಿತ್ತೂ ಗೌರವ ನೀಡಲಿಲ್ಲ. ಅವರ ಕನಸಿನ ಸಮಾಜವಾದವನ್ನು ಸ್ಥಾಪಿಸಲು ಇವರಾರೂ ಬಯಸಲಿಲ್ಲ. ಬದಲಿಗೆ ಭ್ರಷ್ಟಾಚಾರ, ಶೋಷಣೆ, ದೌರ್ಜನ್ಯ, ಅನೈತಿಕತೆಯನ್ನು ಪೋಷಿಸಿಕೊಂಡು ಬಂದಿವೆ ಎಂದು ಅಖಿಲ ಭಾರತ ರೈತ-ಕೃಷಿ ಕಾರ್ಮಿಕ ಸಂಘಟನೆ (ಎಐಕೆಕೆಎಂಎಸ್) ರಾಜ್ಯ ಉಪಾಧ್ಯಕ್ಷ ಬಿ.ಭಗವಾನರೆಡ್ಡಿ ಆರೋಪಿಸಿದರು.
ಎಐಕೆಕೆಎಂಎಸ್ ರೈತ ಸಂಘಟನೆ ವತಿಯಿಂದ ಹಳಕರ್ಟಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಶಹೀದ್ ಭಗತ್ ಸಿಂಗ್ ಅವರ 115ನೇ ಜನ್ಮದಿನ ಕಾರ್ಯಕ್ರಮದ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಭಾರತವನ್ನು ಬ್ರಿಟೀಷರಿಂದ ಬಿಡುಗಡೆಗೊಳಿಸಲು ಭಗತ್, ನೇತಾಜಿ, ಚಂದ್ರಶೇಖರ ಆಜಾದ್, ಬಾಗಾ ಜತೀನ್‍ದಾಸ್, ಅಶ್ಪಾಖುಲ್ಲಾ ಖಾನ್, ಖುದಿರಾಮ್ ಬೋಸ್ ಸೇರಿದಂತೆ ಅನೇಕ ಜನ ಕ್ರಾಂತಿಕಾರಿ ಸಿಡಿಲ ಮರಿಗಳು ಸಮಾಜವಾದ ಸ್ಥಾಪಿಸಲು ಬದುಕು ಮೀಸಲಿಟ್ಟು ಹೋರಾಡಿದರು.
ಸ್ವಾತಂತ್ರ್ಯಾ ನಂತರ ಕಳೆದ 75 ವರ್ಷಗಳಿಂದ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷ ಕ್ರಾಂತಿಕಾರಿಗಳ ಇತಿಹಾಸವನ್ನೇ ನಮ್ಮ ವಿದ್ಯಾರ್ಥಿ ಯುವಜನಿರಿಗೆ ತಿಳಿಸಲಿಲ್ಲ. ಇತ್ತೀಚೆಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ಕೂಡ ಭಗತ್ ಮತ್ತು ನೇತಾಜಿಯ ಚಿಂತನೆಗಳನ್ನು ಒಪ್ಪೋದಿಲ್ಲ. ಆದರೂ ನೇತಾಜಿ ಪ್ರತಿಮೆ ಅನಾವರಣ ಮಾಡಿ ಹಾಗೂ ವಿಮಾನ ನಿಲ್ದಾಣಗಳಿಗೆ ಭಗತ್ ಹೆಸರಿಟ್ಟಿದೆ. ಇದು ರಾಜಕೀಯ ಪ್ರೇರಿತ ಪ್ರೀತಿಯಾಗಿದ್ದು, ನೇತಾಜಿ ಮತ್ತು ಭಗತ್ ಇತಿಹಾಸ ಹೇಳಿದರೆ ದೇಶದ ಕೋಟ್ಯಾಂತರ ಯುವಜನತೆ ಇವರ ವಿರುದ್ದವೇ ಸಿಡಿದು ನಿಲ್ಲುತ್ತಾರೆ ಎಂಬ ಭಯ ಇವರಿಗಿದೆ. ಆ ಕಾರಣಕ್ಕೆ ಕ್ರಾಂತಿಕಾರಿಗಳ ಜಯಂತಿ ಆಚರಣೆಗೆ ಇವರು ಮನಸ್ಸು ಮಾಡುವುದಿಲ್ಲ ಎಂದು ಛೇಡಿಸಿದರು.
ಎಸ್‍ಯುಸಿಐ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಸಮಿತಿ ಸದಸ್ಯ ವೀರಭದ್ರಪ್ಪ ಆರ್.ಕೆ ಮಾತನಾಡಿ, ದೇಶದ ಆಡಳಿತ ಪಕ್ಷಗಳ ದುರಾಡಳಿತವನ್ನು ತಡೆಯಬಲ್ಲ ಶಕ್ತಿ ಯುವಜನತೆಗಿದೆ. ಪರಿಣಾಮ ಈ ಯುವ ಶಕ್ತಿಯನ್ನು ಧಾರ್ಮಿಕ ಚಿಂತನೆಗಳಡಿ ಬಂಧಿಸಿಡುವ ಪ್ರಯತ್ನ ಸರ್ಕಾರಗಳಿಂದ ನಿರಂತರವಾಗಿ ಸಾಗಿದೆ. ಮೌಢ್ಯ, ಕಂದಾಚಾರ, ಅನಕ್ಷರತೆ, ನಿರುದ್ಯೋಗವನ್ನು ಜೀವಂತವಾಗಿಡುವ ಮೂಲಕ ಜನರು ಅನ್ಯಾಯಗಳ ವಿರುದ್ಧ ದನಿ ಎತ್ತದಂತೆ ಮಾಡಲಾಗುತ್ತಿದೆ. ಬೆಲೆ ಏರಿಕೆ, ಭ್ರಷ್ಟಾಚಾರ, ಹಿಂಸೆ, ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರ, ಅಶ್ಲೀಲತೆ ಸಮಾಜದ ಭಾಗವಾಗಿದೆ. ಇವುಗಳ ವಿರುದ್ಧ ಜನತೆ ಸಂಘಟಿತರಾಗದಂತೆ ನೋಡಿಕೊಳ್ಳಲು ತಲೆಯಲ್ಲಿ ಕೋಮು ವಿಷಬೀಜ ಬಿತ್ತಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಐಕೆಕೆಎಂಎಸ್ ತಾಲೂಕು ಕಾರ್ಯದರ್ಶಿ ಶಿವುಕುಮಾರ ಆಂದೋಲಾ ಅಧ್ಯಕ್ಷತೆ ವಹಿಸಿದ್ದರು. ಹಳಕರ್ಟಿ ಗ್ರಾಮ ಘಟಕದ ಅಧ್ಯಕ್ಷ ಚೌಡಪ್ಪ ಗಂಜಿ, ತಾಲೂಕು ಉಪಾಧ್ಯಕ್ಷ ಗುಂಡಣ್ಣ ಕುಂಬಾರ, ಗ್ರಾಮದ ಹಿರಿಯ ಮುಖಂಡರಾದ ಶರಣಪ್ಪ ಜೀವಣಗಿ, ಸಾಬಣ್ಣ ಹಿರಗೊಂಡ ಅತಿಥಿಗಳಾಗಿದ್ದರು. ಈರಣ್ಣ ಇಸಬಾ, ಗೌತಮ ಪರತೂರಕರ, ವಿರೇಶ ನಾಲವಾರ, ಮಹಾಂತೇಶ ಹುಳಗೋಳ, ಸಾಬಣ್ಣ ಸುಣಗಾರ, ಮಹ್ಮದ್ ಮಶಾಕ್, ಶಿವಯೋಗಿ, ಶರಣುಕುಮಾರ ದೋಶೆಟ್ಟಿ, ಕರಣಪ್ಪ ಇಸಬಾ, ದೊಡ್ಡಪ್ಪ ಹೊಸೂರ ಸೇರಿದಂತೆ ಗ್ರಾಮದ ರೈತರು ಪಾಲ್ಗೊಂಡಿದ್ದರು.
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಜೈ ಕನ್ನಡಿಗರ…
ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…
ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರು ಮೂರು ವರ್ಷಗಳು ಪೂರೈಸಿರುವ…