ಬಿಸಿ ಬಿಸಿ ಸುದ್ದಿ

ಶಿಕ್ಷಕ ರಾಷ್ಟ್ರದ ಶಿಲ್ಪಿ: ಸಿದ್ದಪ್ಪ ಹೊಟ್ಟಿ

ಶರಣರು ಶಾಲಾ-ಕಾಲೇಜುಗಳನ್ನು ತೆರೆಯಲಿಲ್ಲ. ಬದಲಗಿ ಅನುಭವ ಮಂಟಪ ಪ್ರಾರಂಭಿಸಿದರು. ಶರಣರು ಅಕ್ಷರ ಕಲಿಸಲಿಲ್ಲ. ಪದವಿ ಕೊಡಲಿಲ್ಲ. ಬದಲಾಗಿ ಆದರ್ಶದ ಬದುಕನ್ನು ಕಲಿಸಿದರು. ಜ್ಞಾನವೇ ನಾವು ಗಳಿಸುವ ನಿಜವಾದ ಸಂಪತ್ತು ಎಂದರು. ಮಾನವೀಯತೆ ಬೆಳೆಸುವ ನೈತಿಕ ಶಿಕ್ಷಣ ಶರಣರು ನೀಡಿದರು. ಡಾ. ಶಿವರಂಜನ ಸತ್ಯಂಪೇಟೆ

ಶಹಾಪುರ: ರಾಷ್ಟ್ರದ ಶಿಲ್ಪಿಯಾಗಿರುವ ಶಿಕ್ಷಕರ ಮೇಲೆ ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವ ಶಕ್ತಿ ಇದೆ ಎಂದು ಯಾದಗಿರಿ ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ತಿಳಿಸಿದರು.

ತಾಲ್ಲೂಕಿನ ಇಟಗಿ (ಎಸ್) ಗ್ರಾಮದಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಕಸಾಪ ಶಿರವಾಳ ವಲಯದ ವತಿಯಿಂದ ಹಮ್ಮಿಕೊಂಡಿದ್ದ ಆದರ್ಶ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದಿನ ತಮ್ಮ ಅವಧಿಯಲ್ಲಿ 4 ಸಮ್ಮೇಳನ, 36 ಕೃತಿಗಳನ್ನು ಪರಿಷತ್ತಿನ ವತಿಯಿಂದ ಬಿಡುಗಡೆ ಮಾಡಲಾಗಿದ್ದು, ಕನ್ನಡ ಉಳಿಸುವ ಬೆಳೆಸುವ ಕರ್ತವ್ಯ ಪ್ರತಿಯೊಬ್ಬರದ್ದಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ತಾಲ್ಲೂಕು ಕಸಾಪ ಅಧ್ಯಕ್ಷ ಡಾ. ರವೀಂದ್ರ ಹೊಸಮನಿ ಮಾತನಾಡಿ, ಕನ್ನಡ ಉಳಿದಿರುವುದು ಹಳ್ಳಿಗಳಲ್ಲಿ. ಕನ್ನಡದ ಆತ್ಮ ಹಳ್ಳಿಗಳಲ್ಲಿದೆ ಎಂದು ತಿಳಿಸಿದರು. ಶರಣರ ಶೈಕ್ಷಣಿಕ ಚಿಂತನೆಗಳು ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಪತ್ರಕರ್ತ-ಲೇಖಕ ಡಾ. ಶಿವರಂಜನ ಸತ್ಯಂಪೇಟೆಯವರು, ಶರಣರ ವಚನಗಳಲ್ಲಿ ಶೈಕ್ಷಣಿಕ ಚಿಂತನೆಗಳಿದ್ದು, ಬಾಹ್ಯ ಶಿಕ್ಷಣಕ್ಕಿಂತ ಆಂತರಿಕ ಶಿಕ್ಷಣಕ್ಕೆ ಒತ್ತು ನೀಡಿದ ಶರಣರು, ಆತ್ಮವಿಶ್ವಾಸ ಹೆಚ್ಚಿಸಿ ಆತ್ಮಜ್ಞಾನಕ್ಕೆ ದಾರಿ ಮಡಿಕೊಟ್ಟರು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ವಲಯ ಕಸಪ ಅಧ್ಯಕ್ಷ ಮಲ್ಲಣ್ಣ ಶಿರವಾಳ ಮಾತನಾಡಿ, ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನವನ್ನು ವಲಯ ಮಟ್ಟದಲ್ಲಿ ಏರ್ಪಡಿಸುವ ಮೂಲಕ ಗ್ರಾಮೀಣ ಭಾಗದಲ್ಲಿ ಸಾಹಿತ್ಯದ ಕಂಪು ಹರಡಬೇಕು ಎಂದು ಮನವಿ ಮಾಡಿದರು.

ಇದೇ ವೇಳೆಯಲ್ಲಿ ಸರ್ಕಾರ ಗುರುತಿಸದೆ ಇರುವ ವಲಯ ಮಟ್ಟದ ಶಿಕ್ಷಕರಾದ ಎಂ.ಬಿ. ಪಾಟೀಲ, ಜುಬೇದಾ ಬೇಗಂ, ಕಲ್ಲಪ್ಪ, ಕವಿತಾ ಹಾದಿಮನಿ ಹಾಗೂ ನಿವೃತ್ತ ದೈಹಿಕ ಶಿಕ್ಷಕ ಸುಧಾಕರ ಗುಡಿ, ಪತ್ರಕರ್ತ ಅಮರೇಶ ಹಿರೇಮಠ, ಡಾ. ಶೀವರಂಜನ ಸತ್ಯಂಪೇಟೆ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಮಾನಪ್ಪ ಹೂಗಾರ, ಶರಣಪ್ಪಗೌಡ ಮಾಲಿಪಾಟೀಲ, ಗುರುಸಿದ್ದಪ್ಪಗೌಡ ಪೊಲೀಸ್ ಪಾಟೀಲ, ನಾಗಣ್ಣಗೌಡ ಹಿರೇಗೌಡರ, ಸುರೇಶ ಅರುಣಿ, ಡಾ. ದೇವಿಂದ್ರಪ್ಪ ಹಡಪದ, ಮಲ್ಲಯ್ಯ ಸ್ವಾಮಿ ವೇದಿಕೆಯಲ್ಲಿದ್ದರು. ಕಸಾಪ ವಲಯ ಪದಾಧಿಕಾರಿಗಳಾದ ಮೃತ್ಯುಂಜಯ ಸ್ವಾಮಿ ಹಿರೇಮಠ, ಮಾರ್ತಂಡ ಶಿರವಾಳ, ಭೀಮಣ್ಣ ಬೇವಿನಹಳ್ಳಿ, ಸಾವಿತ್ರಿ ಹಂಚಿನಾಳ ಇತರರಿದ್ದರು.

emedialine

Recent Posts

ಬಸವರಾಜ್ ಎಸ್ ಜಿಲಿಗೆ ಸನ್ಮಾನ ನಾಳೆ

ಕಲಬುರಗಿ; ಬಸವರಾಜ್ ಎಸ್ ಜಿಲಿ ಅಭಿಮಾನಿ ಬಳಗದ ವತಿಯಿಂದ ಡೆಪ್ಟಿ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಕೆ ಎಸ್ ಆರ್…

11 mins ago

ಐಆರ್‌ಎಸ್‌ಒ ಕರ್ನಾಟಕ ರಾಜ್ಯ ಕಾರ್ಯಕರ್ತರ ಸಭೆ

ರಾಯಚೂರು; ಮಾರ್ಕ್ಸ್ ಭವನದಲ್ಲಿ ಎಐಆರ್‌ಎಸ್‌ಒ ಕರ್ನಾಟಕ ರಾಜ್ಯ ಮಟ್ಟದ ಕಾರ್ಯಕರ್ತರ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಕಾರ್ಯಕರ್ತರ ಸಭೆಯಲ್ಲಿ, ಕೇಂದ್ರ ಸಂಘಟನಾ…

31 mins ago

ಶೈಲಜಾ ಶರಣಗೌಡಗೆ ಪಿಎಚ್. ಡಿ. ಡಾಕ್ಟರೇಟ್ ಪದವಿ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಶೋಧನಾ ವಿಭಾಗದ ವಿದ್ಯಾರ್ಥಿನಿ, ಶೈಲಜಾ ಶರಣಗೌಡ ಇವರು ಡಾ. ಶಾರದಾ ದೇವಿ ಎಸ್.…

34 mins ago

ಜನಪದ ಕಲಾವಿದರು ಸಮಾಜದ ಆಸ್ತಿ

ಕಲಬುರಗಿ; ಗ್ರಾಮೀಣ ಭಾಗದಲ್ಲಿ ಅನೇಕ ಜನ ಕಲಾವಿದರು ಹಗಲಿರುಳು ಸೇವೆಗೈದು ಜನಪದ ಉಳಿಸುವುದರೊಂದಿಗೆ ಸಮಾಜದ ಆಸ್ತಿಯಾಗಿದ್ದಾರೆ ಎಂದು ನ್ಯಾಯವಾದಿ ಹಣಮಂತರಾಯ…

38 mins ago

ಕಲಬುರಗಿ: ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

ಕಲಬುರಗಿ: ಮಹಾನಗರ ಪಾಲಿಕೆ ವಾರ್ಡ್ ಸಂಖ್ಯೆ 15ರ ಫಿರದೋಸ್ ಕಾಲೋನಿ ಬಡಾವಣೆಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಸೈಯದ್ ಮಿರಾಜೊದ್ದೀನ್ ಕಾಶೀಪ್…

3 hours ago

ಸಿಯುಕೆಯಲ್ಲಿ ರಾಷ್ಟ್ರೀಯ ಅಪ್ರೆಂಟಿಸ್‍ಶಿಪ್ ತರಬೇತಿ ಯೋಜನೆ ಕುರಿತು ಜಾಗೃತಿ

ಕಲಬುರಗಿ: "ನ್ಯಾಷನಲ್ ಅಪ್ರೆಂಟಿಸ್‍ಶಿಪ್ ಟ್ರೈನಿಂಗ್ ಸ್ಕೀಮ್ (ಓಂಖಿS) ಐಟಿಐ, ಪಿಯುಸಿ, ಡಿಪೆÇ್ಲೀಮಾ ಮತ್ತು ಪದವೀಧರರು ಸೇರಿದಂತೆ ತಾಂತ್ರಿಕ ಮತ್ತು ತಾಂತ್ರಿಕೇತರ…

4 hours ago