ಬಿಸಿ ಬಿಸಿ ಸುದ್ದಿ

ಕೊರಮ ಸಂಘ ಆನೇಕಲ್ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

  • ಕೊರಮ ಸಮುದಾಯದ ಯುವ ಜನತೆ ಐಎಎಸ್, ಕೆಎಎಸ್, ಉದ್ಯಮಗಳತ್ತ ಆಸಕ್ತರಾಗಲಿ: ಜಿ.ಮಾದೇಶ್

ಆನೇಕಲ್: ಕೊರಮ ಜನಾಂಗದ ಯುವಕ-ಯುವತಿಯರು ಐಎಎಸ್, ಕೆಎಎಸ್ ಹಾಗೂ ಉದ್ಯಮದ ಕಡೆಗೆ ಮುಖ ಮಾಡಬೇಕೆಂದು‌ ಅಖಿಲ‌ ಕರ್ನಾಟಕ‌ ಕೊರಮ ಸಂಘದ ರಾಜ್ಯಾಧ್ಯಕ್ಷ‌ ಜಿ.ಮಾದೇಶ್ ತಿಳಿಸಿದ್ದಾರೆ.

ತಾಲೂಕಿನ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಅಖಿಲ‌ ಕರ್ನಾಟಕ ಕೊರಮ ಸಂಘದ ಆನೇಕಲ್‌ ಘಟಕದ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತ‌ನಾಡಿದ ಅವರು, ಕೊರಮ ಸಮುದಾಯದ ಯುವ ಜನತೆ ದೊಡ್ಡ ಕನಸುಗಳನ್ನು ಕಟ್ಟಿಕೊಂಡು ಅದನ್ನು ಸಾಕಾರಗೊಳಿಸುವ ಕಡೆಗೆ ದಾಪುಗಾಲು ಇಡಬೇಕೆಂದು ಆಶಿಸಿದ್ದಾರೆ.

ಬಡತನದಲ್ಲಿ ಕೂಡಿರುವ ಕೊರಮ ಜನಾಂಗ ಆರ್ಥಿಕ ಸಬಲತೆಯ ಕಡೆಗೆ ಸಾಗಬೇಕಾಗಿದೆ. ಈ ನಿಟ್ಟಿನಲ್ಲಿ ಸರಕಾರದ ವಿವಿಧ ಇಲಾಖೆಗಳಲ್ಲಿ ಸಾಕಷ್ಟು ಸೌಲಭ್ಯಗಳಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ಹೇಳಿದ್ದಾರೆ.

ಕೊರಮ‌ ಜನಾಂಗದ ಪ್ರತಿಯೊಬ್ಬ ನಾಗರಿಕನಿಗೂ ಅಖಿಲ ಕರ್ನಾಟಕ ಕೊರಮ ಜನಾಂಗ ಬೆನ್ನೆಲುಬಾಗಿ ಕಾರ್ಯನಿರ್ವಹಿಸಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ರಾಜ್ಯಾದ್ಯಂತ ಪ್ರವಾಸಿ ಮಾಡಿ ಕೊರಮ‌ ಜನಾಂಗವನ್ನು ಸಂಘಟಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಕೊರಮ ಜನಾಂಗದ ಮುಖಂಡರು ಹಾಗೂ ಮಾಧ್ಯಮ‌ ವಕ್ತಾರರಾದ ಮೋಹನ್ ರಾಜ್ ಮಾತನಾಡಿ, ಕೊರಮ ಜನಾಂಗದಲ್ಲಿ ನುಲಿಯ ಚೆಂದಯ್ಯ, ಸನಾದಿ ಅಪ್ಪಣ್ಣ ಸೇರಿದಂತೆ ಅನೇಕ ಸಮಾಜ‌ ಸುಧಾರಕರು ಜನ್ಮತಾಳಿದ್ದಾರೆ‌. ಅವರೆಲ್ಲರ ಚಿಂತನೆಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.

ಈ ಸಮಾಜಕ್ಕೆ ಕೊರಮ ಸಮುದಾಯದ ಕೊಡುಗೆ ಸಾಕಷ್ಟಿದೆ. ಮರ, ಮಕ್ಕರಿ ಎಣಿಯುವುದು, ಕಣಿ ಹೇಳುವುದು ಸೇರಿದಂತೆ ಹಲವು ಉಪಯುಕ್ತ ಕಾರ್ಯಗಳನ್ನು ಮಾಡುವುದರ ಮೂಲಕ ಸಮಾಜಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿರುವ ಸಮುದಾಯವಾಗಿದೆ‌ ಎಂದು ಅವರು ತಿಳಿಸಿದ್ದಾರೆ.

ಅಖಿಲ ಕರ್ನಾಟಕ ಕೊರಮರ ಸಂಘ(ರಿ ) ರಾಜ್ಯಾಧ್ಯಕ್ಷ ಜಿ. ಮಾದೇಶ್, ರಾಜ್ಯ ವಕ್ತಾರ ಮೈಸೂರು ಮೋಹನ್ ರಾಜ್,
ಅಖಿಲ ಕರ್ನಾಟಕ ಕೊರಮರ ಸಂಘ ಬೆಂಗಳೂರು ನಗರ ಅಧ್ಯಕ್ಷ ಎಮ್.ಹರೀಶ್ ಪ್ರಕಾಶನಗರ, ಕಾರ್ಯಾಧ್ಯಕ್ಷರಾ ನಾಗಣ್ಣ ಯಲಹಂಕ,
ಉಪಾಧ್ಯಕ್ಷರುಗಳಾದ ಮುನಿರಾಮ್ ಹನುಮಂತನಗರ, ಉಮಾದೇವಿ ಲಗ್ಗೆರೆ, ಎಮ್.ರಾಜಶೇಖರ್ ಅನ್ನಪೂರ್ಣೇಶ್ವರಿ ನಗರ, ಶಾಂತಕುಮಾರ್ ಆನೇಕಲ್, ನಾಗರಾಜ್ ಆಡುಗೋಡಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಕೆ.ಆರ್.ಪುರo, ಜಂಟಿ ಕಾರ್ಯದರ್ಶಿ- ವಿ.ಚಂದ್ರಶೇಖರ್ ಅವಲಹಳ್ಳಿ, ಜಂಟಿ ಕಾರ್ಯದರ್ಶಿ- ನಂದೀಶ್ ಎಟಕೋಡಿ, ಖಜಾಂಚಿ- ಎನ್.ಬಾಲಕೃಷ್ಣ ಅಶ್ವಥ್ ನಗರ, ಸಂಘಟನಾ ಕಾರ್ಯದರ್ಶಿ ಲೋಕೇಶ್ ಜೆ ಪಿ ನಗರ, ಕಾನೂನು ಸಲಹೆಗಾರ ಶ್ರೀನಿವಾಸ್ (ವಕೀಲರು) ದೇವನಹಳ್ಳಿ, ಸದಸ್ಯರಾದ ಶ್ರೀನಿವಾಸ್ ಕಲ್ಲಳ್ಳಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹಿರಿಯರಾದ ಕೃಷ್ಣಪ್ಪ(ಬಿಎಸ್ ಎನ್ ಎಲ್, ಮುತ್ತುರಾಜು, ವಿಶ್ವನಾಥ್, ಮುನಿರಾಜು, ಗೌರೀಶ್, ರಾಜಪ್ಪ ನಾರಾಯಣಪುರ ಆನೇಕಲ್, ಮಹಿಳೆಯರು ಕೊರಮಬೀದಿ ಜಯಮ್ಮ, ಭಾಗ್ಯಮ್ಮ, ಶಾಂತಿ, ಹರೀಶ್ ವೈಟ್ ಫೀಲ್ಡ್, ಕಿಶೋರ್ ದೋಮಸಂದ್ರ, ಮುನಿರಾಜು ತಿಂಡ್ಲು, ಇಡ್ಲಾವಾಡಿ ಗ್ರಾಮ ಪಂಚಾಯಿತ್ತಿ ಮಾಜಿ ಅಧ್ಯಕ್ಷರು ಸಿ.ಗೋವಿಂದ ರಾಜ್, ವನಕನಹಳ್ಳಿ ಗ್ರಾಮ ಪಂಚಾಯತ್ತಿ ಮಾಜಿ ಉಪಾಧ್ಯಕ್ಷರು ವೆಂಕಟೇಶ್, ಹಾಗೂ ಮಂಜುನಾಥ್ ಪೈನಾಸ್ಸ್, ಮಾದೇಶ್, ರಾಜಣ್ಣ, ನರಸರಿ ಮುನಿರಾಜು, ಉಚ್ಚನಹಳ್ಳಿ ಮಾದೇಶ್, ಮತ್ತು ಎಲ್ಲಾ ಕುಲಬಾಂಧವರು ಚಿಕ್ಕಬಳಾಪುರ ಜಿಲ್ಲೆಯ ಅಖಿಲ ಕರ್ನಾಟಕ ಕೊರಚ ಕೊರಮ ಸಂಘದ ಜೆಲ್ಲಾ ಉಪಾಧ್ಯಕ್ಷ ಎಸ್.ಶಶಿಕಿರಣ್ ಹಾಗೂ ಪುತ್ತೂರು ಮಂಜುನಾಥ್, ಹರೀಶ್ ಕುಮಾರ್, ರಾಜೇಶ್, ಮತ್ತು ಚಿಕ್ಕ ಅಪ್ಪಯ್ಯ, ಚಿಟ್ನಹಳ್ಳಿ ಆನಂದ್ ಕುಮಾರ್ ಕಾವಾಡಿ, ಕೆ ಎಂ ಮುನಿ ವೆಂಕಟಸ್ವಾಮಿ, ಚಿಟ್ನಹಳ್ಳಿ ಹರಿಪ್ರಸಾದ್, ರಾಮಣಪ್ಪ, ಚಂದ್ರಶೇಖರ್ ಹಾಗೂ ಮಹೇಶ್ ಮದ್ದೂರು, ನಂದೀಶ್ ಕೆ. ಎಂ. ದೊಡ್ಡಿ ಈ ಎಲ್ಲಾ ನಮ್ಮ ಅಖಿಲ ಕರ್ನಾಟಕ ಕೊರಮ ಕೊರಚ ಸಂಘದ ಜನಾಂಗದವರು ಭಾಗಿಯಾಗಿದ್ದರು.

ಆನೇಕಲ್ ಅಧ್ಯಕ್ಷರಾಗಿ ಮಾದೇಶ್ ಆಯ್ಕೆ:  ಇದೇ ವೇಳೆ ಆನೇಕಲ್ ತಾಲೂಕು ವಿಧಾನಸಭಾ ಕ್ಷೇತ್ರದ ಅಖಿಲ ಕರ್ನಾಟಕ ಕೊರಮರ ಸಂಘದ ಘಟಕಕ್ಕೆ ನೂತನವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಆನೇಕಲ್ ತಾಲೂಕು ಅಧ್ಯಕ್ಷರಾಗಿ ರಾಜಕುಮಾರ್.ಆರ್, ಪತ್ರಿಕಾ ಕಾರ್ಯಾಧ್ಯರಾಗಿ ಮಂಜುನಾಥ ದಾಸನಪುರ, ಉಪಾಧ್ಯಕ್ಷರುಗಳಾಗಿ ಲಿಂಗರಾಜು.ಎಂ ಆನೇಕಲ್, ಮೂರ್ತಿ(ತಿಂಡ್ಲು), ಪ್ರಧಾನ ಕಾರ್ಯದರ್ಶಿಗಳಾಗಿ ಶಿವಕುಮಾರ್ ಸರ್ಜಾಪುರ, ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮಿ ನಾರಾಯಣ, ಕಾರ್ಯದರ್ಶಿಗಳಾಗಿ ಗೋವಿಂದರಾಜು ಕೋಮಸಂದ್ರ, ಶ್ರೀನಿವಾಸ್ ಎಂ ಆನೇಕಲ್ (ಅಕ್ಷಯ ಟಿವಿ ಚಾನಲ್), ವೆಂಕಟೇಶ್ ಆನೇಕಲ್, ಖಜಾಂಚಿ ನಾರಾಯಣಸ್ವಾಮಿ ಚೂಡೇನಹಳ್ಳಿ, ಉಪ ಖಜಾಂಚಿ ವಿಜಯ್ ಕುಮಾರ್ ಆನೇಕಲ್, ಸಂಘಟನಾ ಕಾರ್ಯದರ್ಶಿ ನವೀನ್ ಕುಮಾರ್ ಆನೇಕಲ್ ಕೋಳಿ ಫಾರ್ಮ್ ಅವರನ್ನು ಆಯ್ಕೆ ಮಾಡಲಾಗಿದೆ.

emedialine

View Comments

Recent Posts

ಸುರಪುರ-ಕಲಬುರ್ಗಿ ಸಗರನಾಡು ಬಸ್‍ಗಳ ಸಂಚಾರ ಹೆಚ್ಚಿಸಿ; ರಮೇಶ ದೊರೆ

ಸುರಪುರ: ನಗರದಿಂದ ಕಲಬುರಗಿ ನಗರಕ್ಕೆ ಸಗರನಾಡು ಬಸ್‍ಗಳ ಸಂಚಾರದಲ್ಲಿ ಸಾಕಷ್ಟು ಕಡಿಮೆಗೊಂಡಿದ್ದು ಇದರಿಂದಾಗಿ ಸುರಪುರ ದಿಂದ ಕಲಬುರಗಿ ನಗರಕ್ಕೆ ಸಂಚರಿಸಲು…

6 hours ago

ಸುರಪುರ:ಬಸ್ ಪಾಸ್ ನೀಡಲು ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

ಸುರಪುರ: ತಾಲೂಕಿನ ಎಲ್ಲಾ ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡುವಂತೆ ಹಾಗೂ ವಿವಿಧ ಗ್ರಾಮಗಳಿಗೆ ಬಸ್ ಓಡಿಸಲು ಆಗ್ರಹಿಸಿ ಅಖಿಲ ಭಾರತ…

6 hours ago

ಬೆಂಗಳೂರ ನಿರ್ಮಾತೃ ಕೆಂಪೇಗೌಡ ಹೆಸರು ಅಜಾರಾಮರ

ಸುರಪುರ:ಬೆಂಗಳೂರ ನಿರ್ಮತೃ ನಾಡಪ್ರಭು ಕೆಂಪೇಗೌಡ ಅವರು ಭಾರತದ ಇತಿಹಾಸದಲ್ಲಿ ಅವರ ಹೆಸರು ಅಜರಾಮರವಾಗಿದೆ ಎಂದು ತಹಸಿಲ್ದಾರ್ ಕೆ.ವಿಜಯಕುಮಾತ ಮಾತನಾಡಿದರು. ನಗರದ…

6 hours ago

ಸಿಮೆಂಟ್ ಕಾರ್ಖಾನೆಗಳಲ್ಲಿ 50% ಸ್ಥಳಿಯರಿಗೆ ಉದ್ಯೋಗ ನೀಡಲು ಕೇಂದ್ರ ಸಚಿವರಿಗೆ ಮನವಿ

ಶಹಾಬಾದ, ಕಡೇಚೂರು-ಬಾಡಿಯಾಳ ಕಾರ್ಖಾನೆ ಪುನರ ಪ್ರಾರಂಭಿಸಲು ಮನವಿ ಕಲಬುರಗಿ : ಕಲಬುರಗಿ ಜಿಲ್ಲೆಯಲ್ಲಿ ಅನೇಕ ಸಿಮೆಂಟ್ ಕಾರ್ಖಾನೆ ಹಾಗೂ ಸಕ್ಕರೆ…

6 hours ago

ಶಾಲೆ-ಅಂಗನವಾಡಿಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ವ್ಯವಸ್ಥೆ ವೀಕ್ಷಣೆ

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ಭೇಟಿ  ಕಲಬುರಗಿ; ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ…

6 hours ago

ದಲಿತ ಚಳುವಳಿಗೆ: ಹಾಸನದಲ್ಲಿ 50ನೇ ವರ್ಷ ರಾಜ್ಯಮಟ್ಟದ ಸಮಾವೇಶ ಜೂನ್ 29ರಂದು

ಕೊಪ್ಪಳ : ದಲಿತ ಚಳುವಳಿಯ ರೂವಾರಿ ಪ್ರೊ.ಬಿ,ಕೃಷ್ಣಪ್ಪ ಅವರ ಜನುಮ ದಿನ ಹಾಗೂ ದಲಿತ ಚಳುವಳಿ ಗೆ 50 ವರ್ಷ…

7 hours ago