ಬಿಸಿ ಬಿಸಿ ಸುದ್ದಿ

ತೊನಸನಹಳ್ಳಿ(ಎಸ್) ಗ್ರಾಪಂಯಲ್ಲಿ ಅವ್ಯವಹಾರ ಆರೋಪ: ಕ್ರಮಕ್ಕೆ ಆಗ್ರಹ

ಶಹಾಬಾದ: ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಪಂಯಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳದೇ ಭೋಗಸ್ ಬಿಲ್‍ಗಳನ್ನು ಸೃಷ್ಠಿಸಿ ಸುಮಾರು 16 ಲಕ್ಷ ರೂ.ಯನ್ನು ಅಧ್ಯಕ್ಷ ಹಾಗೂ ಪಿಡಿಓ ಕೂಡಿಕೊಂಡು ಅವ್ಯವಹಾರ ಮಾಡಿದ್ದಾರೆ ಎಂದು ತೊನಸನಹಳ್ಳಿ(ಎಸ್) ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಖಣದಾಳ ಆರೋಪಿಸಿ, ಈಗಾಗಲೇ ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ಈಗಾಗಲೇ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಒಂದು ತಿಂಗಳ ಆಗಿಲ್ಲ ಹಾಗೂ ನೂತನ ಪಿಡಿಓ ಅವರು ಗ್ರಾಮ ಪಂಚಾಯಿತಿಗೆ ಬಂದು ಕೇವಲ ಎರಡು ತಿಂಗಳ ಆಗಿದೆ. ಗ್ರಾಪಂ ಅಧ್ಯಕ್ಷ ಹಾಗೂ ಪಿಡಿಓ ಅವರು ಒಳ ಒಪ್ಪಂದ ಮಾಡಿಕೊಂಡು 15ನೇ ಹಣಕಾಸು ಯೋಜನೆ ಅಡಿ ಕೆಲಸ ಮಾಡದೆ ನಕಲಿ ದಾಖಲೆ ಸೃಷ್ಟಿಸಿ ವ್ಯವಹಾರ ಸಿಕ್ಕಿದ್ದು ಸದರಿ ಬೊಗಸ್ ಕಾಮಗಾರಿ ಮಾಡಿ ಸೃಷ್ಟಿಸಿದ್ದಾರೆ. ಅಗಸ್ಟ ತಿಂಗಳಲ್ಲಿ 3,94,684 ರೂ. ಮತ್ತು ಸೆಪ್ಟೆಂಬರ ಒಂದೇ ತಿಂಗಳಲ್ಲಿ ಸುಮಾರು 12,52,613 ರೂ. ಹಣವನ್ನು ತಮ್ಮ ಬೇಕಾದವರಿಗೆ ಹಣ ವರ್ಗಾವಣೆ ಮಾಡಿಸಿ ಅವರಿಂದ ಕಾಮಗಾರಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ.

ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಗೋಳಾ(ಕೆ) ಹಾಗೂ ತರನಳ್ಳಿ ಗ್ರಾಮಗಳಲ್ಲಿ ಯಾವುದೇ ಕಾಮಗಾರಿ ಮಾಡದೆ ಕೊಟ್ಟಿಬಿಲ್ ಸೃಷ್ಟಿಸಿ ಹಣ ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿ ಕಂಡುಬಂದಿದೆ.ಅಲ್ಲದೇ ಯಾವುದೇ ಕಾಮಗಾರಿ ಕ್ರೀಯಾಯೋಜನೆ ಸಿದ್ಧಪಡಿಸದೇ ಮತ್ತು ಸದಸ್ಯರ ಗಮನಕ್ಕೂ ತರದೇ ಎಲ್ಲಾ ಕಾಮಗಾರಿಗಳನ್ನು ಮಾಡಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ.ಅಲ್ಲದೇ ಕಳೆದ ಸೆಪ್ಟೆಂಬರ್ 16ರಂದು ಸಭೆ ನಡೆಸಲಾಗಿದೆ ಎಂದು ಹೇಳುತ್ತಿದ್ದಾರೆ.ಆದರೆ ಬಹುತೇಖ ಸದಸ್ಯರ ಸಭೆಯೇ ನಡೆಸಿಲ್ಲ ಎಂದು ಗ್ರಾಪಂ ಸದಸ್ಯರೇ ಹೇಳುತ್ತಾರೆ.

ಸದಸ್ಯರ ಸಭೆಯನ್ನು ಕರೆಯದೇ, ಗ್ರಾಪಂ ಸಿಬ್ಬಂದಿ ಮೂಲಕ ಸದಸ್ಯರ ಮನೆಮನೆಗೆ ಹೋಗಿ ಸುಳ್ಳು ಹೇಳಿ ಸಹಿ ತೆಗೆದುಕೊಂಡು, ಸಭೆ ನಡೆಸಲಾಗಿದೆ ಎಂದು ಸುಳ್ಳು ದಾಖಲೆ ಮಾಡಿದ್ದಾರೆ. ಪಿಡಿಓ ಅವರಿಗೆ ಕೆಲಸಗಳನ್ನು ಮಾಡಿದ ಸಂಪೂರ್ಣ ಮಾಹಿತಿ ನೀಡಿ ಎಂದು ಕೇಳಿದರೇ ನನ್ನ ಹತ್ತಿರ ಏನು ಇಲ್ಲ.ಅಧ್ಯಕ್ಷರಿಗೆ ಕೇಳಿ ಎಂದು ಉಡಾಫೆ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆ.

ಈ ಕುರಿತು ಜಿಪಂ ಸಿಇಓ ಅವರಿಗೆ ದೂರು ನೀಡಲಾಗಿದೆ.ಕೂಡಲೇ ಸಮಗ್ರ ತನಿಖೆ ಮಾಡಿ ಸೂಕ್ತ ಕಾನೂನು ಕ್ರಮ ಕ್ರಮಕೈಗೊಳ್ಳಬೇಕು.ತಪ್ಪಿತಸ್ಥ ಗ್ರಾಪಂ ಅಧ್ಯಕ್ಷರ ಹಾಗೂ ಪಿಡಿಓ ವಿರುದ್ಧ ಕ್ರಮಕೈಗೊಳ್ಳಬೇಕು.ಇಲ್ಲದಿದ್ದರೇ ಅಕ್ಟೋಬರ್ 7ರಂದು ಗ್ರಾಮ ಪಂಚಾಯತಿ ಮುಂಭಾಗದಲ್ಲಿ ಅನಿರ್ದಿμÁ್ಟವಧಿ ಧರಣಿ ಸತ್ಯಾಗ್ರ ಮಾಡಲಾಗುವುದು ಎಚ್ಚರಿಕೆ ನೀಡಿದ್ದಾರೆ.

emedialine

Recent Posts

ಕಲಬುರಗಿ: ಬಿಜೆಪಿ ಹಿರಿಯ ಮುಖಂಡ ಧರ್ಮಣ್ಣ ದೊಡ್ಡಮನಿ ನಿಧನ

ಕಲಬುರಗಿ: ಬಿಜೆಪಿ ಹಿರಿಯ ಮುಖಂಡ ಧರ್ಮಣ್ಣ ಇಂದು ಬೆಳಗ್ಗೆ ವಾಕಿಂಗ್ ಹೋದಾಗ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಲಬುರಗಿ ನಗರದ ಜೇವರ್ಗಿ…

2 hours ago

ಜೇವರ್ಗಿ: ಲಂಚಾಪಡೆಯುತ್ತಿದ್ದಾಗ ಮಹಿಳಾ ಸಿಬ್ಬಂದಿ ಲೋಕಾಯುಕ್ತರ ಬಲೆಗೆ

ಕಲಬುರಗಿ: ನೀರಿನ ಕನೆಕ್ಷನಗಾಗಿ ಹತ್ತು ಸಾವಿರ ಲಂಚಾಪಡೆಯುತ್ತಿದ್ದಾಗ ಜೇವರ್ಗಿ ಪುರಸಭೆಯ ಮಹಿಳಾ ಸಿಬ್ಬಂದಿ ಲಣೊಕಾಯುಕ್ತರ ಬಲೆಗೆ ಬಿದ್ದ ಘಟನೆ ಬುಧವಾರ…

14 hours ago

371 ಜೆ ಅಡಿ ಉದ್ಯೋಗ ನೇಮಕಾತಿ ಸಂಬಂಧದ ಗೊಂದಲ ನಿವಾರಿಸಿ ಮಾರ್ಗಸೂಚಿ ಸಿದ್ಧಪಡಿಸಲು ಸಚಿವರ ಸೂಚನೆ

ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 371 ಜೆ ಅಡಿ ಉದ್ಯೋಗ ನೇಮಕಾತಿ ಹಾಗೂ ಬಡ್ತಿ ಸಂಬಂಧದಲ್ಲಿ ಆಗಿರುವ ಗೊಂದಲಗಳನ್ನು ನಿವಾರಿಸಿ…

15 hours ago

ಶ್ಯಾಮರಾವ ನಾಟಿಕಾರಗೆ ಅಧ್ಯಕ್ಷರನ್ನಾಗಿ ನೇಮಕಕ್ಕೆ ಡಾ. ಮಲ್ಲಿಕಾರ್ಜುನ ಖರ್ಗೆಗೆ ಮನವಿ

ಕಲಬುರಗಿ: ಆದಿಜಾಂಬವ ಸರ್ಕಾರಿ ಅರೆ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ನಿಯೋಗ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಖರ್ಗೆ…

16 hours ago

ಚಿರಂಜೀವಿ ವೆಂಕಯ್ಯ ಕುಶಾಲ್ ಗುತ್ತೇದಾರ್ ಗೆ ಸನ್ಮಾನ

ಕಲಬುರಗಿ: ಮಾಜಿ ಸಚಿವರಾದ ಮಾಲಿಕೆಯ್ಯಾ ಗುತ್ತೇದಾರ್ ಅವರ ಅಪ್ಪಟ ಅಭಿಮಾನಿ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ…

16 hours ago

ಮಹಿಳಾ ಘಟಕದ ನೂತನ ಪದಾಧಿಕಾರಿಗಳ ನೇಮಕ

ಕಲಬುರಗಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಪ್ರಶಾಂತ್ ಗೌಡ ಮಾಲಿಪಾಟೀಲ್ ಅವರ ನೇತೃತ್ವದಲ್ಲಿ ಜಿಲ್ಲಾ…

16 hours ago