ಬಿಸಿ ಬಿಸಿ ಸುದ್ದಿ

ಶರಣರ ತ್ಯಾಗ ಬಲಿದಾನ ಮರಿಯಬೇಡಿ

ಭಾಲ್ಕಿ: ಪಟ್ಟಣದ ಶ್ರೀ ಚನ್ನಬಸವಾಶ್ರಮದಲ್ಲಿ ವಿಜಯ ದಶಮಿ ನಿಮಿತ್ಯ ಮರಣವೇ ಮಹಾನವಮಿ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವ ನೆರವೇರಿತು. ಶ್ರೀಮಠದಿಂದ ಚನ್ನಬಸವಾಶ್ರಮದವರೆಗೆ ವಚನ ಸಾಹಿತ್ಯ ಪಲ್ಲಕಿಯ ಮೆರವಣಿಗೆ ಜರುಗಿತು. ಚನ್ನಬಸವಾಶ್ರಮದಲ್ಲಿ ಏರ್ಪಡಿಸಿದ ಸಮಾರಂಭದ ದಿವ್ಯಸನ್ನಿಧಾನ ವಹಿಸಿದ ಪೂಜ್ಯಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿದರು.

12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸರ್ವಸಮಾನತೆಯ ಕಲ್ಯಾಣ ರಾಜ್ಯವನ್ನು ಕಟ್ಟಿದ್ದರು. ಬಸವಣ್ಣನವರ ಕ್ರಾಂತಿಯಲ್ಲಿ ಅನೇಕ ಮಹಾಶರಣರು ಭಾಗಿಯಾಗಿದ್ದರು. ಅದರಲ್ಲಿ ಶರಣ ಹರಳಯ್ಯ ಮತ್ತು ಶರಣ ಮಧುವಯ್ಯನವರು ಬಸವಸ್ಥಾಪಿತ ಸಮತಾ ರಾಜ್ಯ ನಿರ್ಮಾಣಕ್ಕಾಗಿ ಬಲಿದಾನವನ್ನು ನೀಡಿದರು. ಲಿಂಗಾಯತ ಧರ್ಮ ಸಾವಿರಾರು ಶರಣರ ತ್ಯಾಗ ಮತ್ತು ಬಲಿದಾನದ ಮೇಲೆ ನಿಂತಿದೆ. ವಿಶೇಷವಾಗಿ ಹರಳಯ್ಯ ಮತ್ತು ಮಧುವಯ್ಯನವರು ಸಮತಾ ತತ್ವಕ್ಕಾಗಿ ಎಳೆಹೂಟಿ ಶಿಕ್ಷೆಯನ್ನು ಅನುಭವಿಸಿದರು. ಆ ದಿನ ಮಹಾನವಮಿ. ಅದಕ್ಕೆ ಶರಣರು ಮರಣವೇ ಮಹಾನವಮಿ ಎಂದು ಹೇಳಿದರು.

ಶರಣರಿಗೆ ಶಿಕ್ಷೆಯಾಗಿದ್ದರೂ ಅವರು ಶರಣತತ್ವಕ್ಕಾಗಿ ತಮ್ಮ ಬಲಿದಾನ ನೀಡಿದ್ದಾರೆಂದು ಅದು ನಮಗೆ ಸೋಲಲ್ಲ ಗೆಲವು ಎಂದು ತಿಳಿದು ಕಲ್ಯಾಣ ಕ್ರಾಂತಿ ವಿಜಯೋತ್ಸವವನ್ನು ಆಚರಿಸುತ್ತಾ ಬಂದಿದ್ದೇವೆ. ಶರಣರ ತ್ಯಾಗ ಬಲಿದಾನ ಜಗತ್ತಿಗೆ ಪರಿಚಯಿಸುವ ಹೊಣೆಗಾರಿಕೆ ನಮ್ಮೆಲ್ಲರದಾಗಿದೆ ಎಂದು ಪೂಜ್ಯರು ನುಡಿದರು.

ದಿವ್ಯ ಸಮ್ಮುಖ ವಹಿಸಿದ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ವಿಜಯದಶಮಿ ನಮ್ಮೆಲ್ಲರಿಗೆ ದುಷ್ಟಶಕ್ತಿಯ ವಿರುದ್ಧ ಹೋರಾಡುವ ಹಾಗೂ ಶಿಷ್ಟ ಶಕ್ತಿಯ ರಕ್ಷಣೆಯ ಪ್ರೇರಣೆಯನ್ನು ನೀಡುತ್ತವೆ. ನಮ್ಮೆಲ್ಲರಲ್ಲಿರುವ ದುಷ್ಟತನವನ್ನು ಕಳೆದುಕೊಳ್ಳುವ ಮೂಲಕ ನಾವು ನಮ್ಮ ಇಂದ್ರಿಯಗಳ ಮೇಲೆ ಗೆಲವು ಸಾಧಿಸುವುದೇ ನಿಜಾರ್ಥದಲ್ಲಿ ವಿಜಯದಶಮಿ. ಆ ದಿಶೆಯಲ್ಲಿ ನಾವು ಸಾಗುವ ಅವಶ್ಯಕತೆ ಇದೆ. ಇಂದಿನ ದಿವಸ ನಾವೆಲ್ಲರೂ ಬನ್ನಿಯ ತಪ್ಪಲನ್ನು ಬಂಗಾರವೆಂದು ಭಾವಿಸುತ್ತೇವೆ. ಇದರ ಒಳರ್ಥ ನಮ್ಮಲ್ಲರ ಮನಸ್ಸುಗಳನ್ನು ಬಂಗಾರದಂತೆ ಆಗಲಿ ಅಂಥ ಶಕ್ತಿ ಗುರುಬಸವಣ್ಣನವರು ನಿಮ್ಮೆಲ್ಲರಿಗೆ ಕರುಣಿಸಲೆಂದು ಆಶೀರ್ವಚನ ನೀಡಿದರು.

ಮುಖ್ಯ ಅಥಿತಿಗಳಾಗಿ ಈಶ್ವರ ಖಂಡ್ರೆ, ಶಾಸಕರು, ಪ್ರಕಾಶ ಖಂಡ್ರೆ, ಮಾಜಿ ಶಾಸಕರು, ಯುವ ಮುಖಂಡರಾದ ಡಿ.ಕೆ.ಸಿದ್ರಾಮ, ನ್ಯಾಯವಾದಿಗಳಾದ ರಾಜಶೇಖರ ಅಷ್ಟೂರೆ, ಹರಳಯ್ಯ ಸಮಾಜದ ಅಧ್ಯಕ್ಷರಾದ ಶ್ರಾವಣ ಮುಂತಾದವರು ಉಪಸ್ಥಿತರಿದ್ದರು. ಪ್ರೊ.ಶಂಭುಲಿಂಗ ಕಾಮಣ್ಣ ಸ್ವಾಗತ ಕೋರಿದರು. ನವಲಿಂಗ ಪಾಟೀಲ ನಿರೂಪಿಸಿದರು. ಯಲ್ಲನಗೌಡರ ವಚನ ಸಂಗೀತ ನಡೆಸಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

9 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

9 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago