ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ನಾಲ್ಕನೇ ಪುಣ್ಯಸ್ಮರಣೆ: ರಾಷ್ಟ್ರೀಯ ಪ್ರಶಸ್ತಿ ಪ್ರದಾನ

  • ತೋಂಟದ ಶ್ರೀಗಳು ಮನುಕುಲಕ್ಕೆ ಸಲ್ಲಿಸಿದ ಸೇವೆ ಮಠಾಧೀಶರಿಗೆ ಮಾದರಿ : ಸಚಿವ ಸಿ.ಸಿ. ಪಾಟೀಲ

ಗದಗ; ನಾಲ್ಕು ದಶಕಗಳ ಕಾಲ ಹೊಗಳಿಕೆಗೆ ಹಿಗ್ಗದೇ, ತೆಗಳಿಕೆಗೆ ಕುಗ್ಗದೇ ಅವಿರತವಾಗಿ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಮನುಕುಲಕ್ಕೆ ಸಲ್ಲಿಸಿದ ಸೇವೆ ನಾಡಿನ ಮಠಾಧೀಶರಿಗೆಲ್ಲ ಮಾದರಿಯಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ನುಡಿದರು.

ಅವರು ದಿ. ೬ರಂದು ಗುರುವಾರ ನಗರದ ತೋಂಟದಾರ್ಯ ಮಠದಲ್ಲಿ ಲಿಂ. ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ನಾಲ್ಕನೇ ಪುಣ್ಯಸ್ಮರಣೆ ಅಂಗವಾಗಿ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟಿçÃಯ ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿ ತೋಂಟದ ಶ್ರೀಗಳು ಎಂದಾಕ್ಷಣ ನೆನಪಾಗುವುದೇ ೧೨ನೇ ಶತಮಾನದ ಶರಣರ ಕ್ರಾಂತಿಕಾರಕ ಚಳುವಳಿ. ಬಸವಾದಿ ಪ್ರಮಥರ ಮುಂದುವರಿದ ಭಾಗವೇ ಆಗಿದ್ದ ಶ್ರೀಗಳು ಹಲವು ಕ್ರಾಂತಿ ಹಾಗೂ ಯಶಸ್ವಿ ಹೋರಾಟಗಳ ಮೂಲಕ ಸಮಾಜಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ.

ಲಗರ್ಭದಲ್ಲಿ ಮರೆಯಾದ ಸಾಧಕರ ಚರಿತ್ರೆಗಳುಳ್ಳ ಸುಮಾರು ೬೦೦ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಶ್ರೀಗಳು, ಅನ್ನ-ಅಕ್ಷರ ದಾಸೋಹಕ್ಕೆ ಹೊಸ ಭಾಷ್ಯ ಬರೆದರು. ಆಧುನಿಕ ದಿನಗಳಲ್ಲಿ ಸ್ವಾಮೀಜಿಗಳನ್ನು ಗೌರವಿಸುವ ಗುರು ಸಂಸ್ಕೃತಿ ಮರೆಯಾಗುತ್ತಿದ್ದು, ಮಕ್ಕಳನ್ನು ಕೇವಲ ಅಂಕ ಗಳಿಕೆಯ ಯಂತ್ರಗಳನ್ನಾಗಿಸದೇ ಸಾಮಾಜಿಕ ಕಾಳಜಿಯುಳ್ಳ ಸಂಸ್ಕಾರ ನೀಡಬೇಕಿದೆ. ಡಂಬಳದಲ್ಲಿ ಪ್ರತಿಷ್ಠಾಪನೆಗೊಂಡ ಕಂಚಿನ ಪುತ್ಥಳಿ ಆಕರ್ಷಣ Ãಯವಾಗಿದ್ದು, ಗದಗ ಶಹರದಲ್ಲಿ ಸಹ ಸ್ಥಾಪಿಸುವುದು ಪ್ರಸ್ತುತವಾಗಿದೆ. ತಾವು ಅದಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಘೋಷಿಸಿದರು. ಶ್ರೀಗಳ ರಾಷ್ಟಿçÃಯ ಸ್ಮಾರಕ ಪ್ರಶಸ್ತಿಯನ್ನು ಭಾಲ್ಕಿ ಶ್ರೀಗಳಿಗೆ ನಾನು ಪ್ರದಾನ ಮಾಡಿದ್ದು ಅವಿಸ್ಮರಣ Ãಯವಾಗಿದ್ದು, ಇಂಥ ಅವಕಾಶ ನನ್ನ ಜೀವನದ ಸೌಭಾಗ್ಯವೆಂದೇ ಭಾವಿಸುತ್ತೇನೆ ಎಂದ ಅವರು, ಶ್ರೀಮಠದ ಕಾರ್ಯಕ್ರಮ ವೇದಿಕೆ ಪುನರ್ ನಿರ್ಮಾಣಕ್ಕೆ ೫ ಲಕ್ಷ ರೂ ದೇಣ ಗೆ ನೀಡುವುದಾಗಿ ಘೋಷಿಸಿದರು.

ಲಿಂ.ಡಾ.ತೋAಟದ ಸಿದ್ಧಲಿಂಗ ಮಹಾಸ್ವಾಮಿಗಳ ಪುಣ್ಯಸ್ಮರಣೆ ನಿಮಿತ್ಯ ನೀಡಲಾಗುವ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟಿçÃಯ ಪ್ರಶಸ್ತಿಯನ್ನು ಭಾಲ್ಕಿ ಹಿರೇಮಠದ ಡಾ.ಬಸವಲಿಂಗ ಪಟ್ಟದ್ದೇವರಿಗೆ ಪ್ರದಾನ ಮಾಡಲಾಯಿತು. ಕರ್ನಾಟಕ ಸರ್ಕಾರದ ಲೋಕೋಪಯೋಗಿ ಸಚಿವರಾದ ಸಿ.ಸಿ ಪಾಟೀಲ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಡಂಬಳದAತೆ ಗದಗ ಶಹರದಲ್ಲಿ ಲಿಂಗೈಕ್ಯ ಸಿದ್ಧಲಿಂಗ ಮಹಾಸ್ವಾಮಿಗಳ ಕಂಚಿನ ಪುತ್ಥಳಿಯನ್ನು ನಿರ್ಮಾಣ ಮಾಡಲು ಎಲ್ಲ ರೀತಿಯ ನೆರವು ನೀಡುವುದಾಗಿ ಘೋಷಿಸಿದರು. ಈ ಸಂದರ್ಭದಲ್ಲಿ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಶ್ರೀಮಠದ ಆಡಳಿತಾಧಿಕಾರಿಗಳಾದ ಎಸ್.ಎಸ್ ಪಟ್ಟಣಶೆಟ್ಟಿ ಸೇರಿದಂತೆ ಅನೇಕ ಗಣ್ಯರು, ಹರ-ಗುರು-ಚರಮೂರ್ತಿಗಳು ಹಾಜರಿದ್ದರು.

‘ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟಿçÃಯ ಪ್ರಶಸ್ತಿ’ ಸ್ವೀಕರಿಸಿದ ಭಾಲ್ಕಿ ಹಿರೇಮಠದ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ ಭಾಲ್ಕಿ ಶ್ರೀಮಠದ ಪ್ರಸಾದ ನಿಲಯಕ್ಕೆ ವಿದ್ಯಾರ್ಜನೆಗೆ ತೆರಳಿದ್ದ ನಾನು ಪೂಜ್ಯ ಚನ್ನಬಸವ ಪಟ್ಟದ್ದೇವರ ಕೃಪಾದೃಷ್ಟಿಯಿಂದ ಮಠಕ್ಕೆ ಉತ್ತರಾಧಿಕಾರಿಯಾಗಿ ನೇಮಕವಾದೆ. ಅಂದಿನಿAದ ಇಂದಿನವರೆಗೂ ಡಾ. ತೋಂಟದ ಶ್ರೀಗಳೇ ನನಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಬೀದರ ಜಿಲ್ಲೆಗೆ ಸೀಮಿತವಾಗಿದ್ದ ನಮ್ಮ ಗುರುಗಳನ್ನು ಮೊಟ್ಟಮೊದಲಿಗೆ ಗದಗ ಶ್ರೀಮಠಕ್ಕೆ ಕರೆದು ಗೌರವಿಸಿದ್ದ ತೋಂಟದ ಶ್ರೀಗಳು ನಾನು ಪಟ್ಟಕ್ಕೇರುವ ಪೂರ್ವದಲ್ಲಿಯೇ ಪ್ರಭಾವ ಬೀರಿದ್ದರು. ನನ್ನ ಕಷ್ಟಕಾಲದಲ್ಲಿ ಸದಾ ಆಸರೆಯಾಗಿದ್ದ ಶ್ರೀಗಳು, ೧೯೯೨ರಲ್ಲಿ ಭಾಲ್ಕಿ ಮಠದಿಂದ ಚನ್ನಬಸವ ಪಟ್ಟದ್ದೇವರ ಹೆಸರಿನಲ್ಲಿ ಸ್ಥಾಪನೆಯಾಗಿದ್ದ ಟ್ರಸ್ಟ್ ಉದ್ಘಾಟಿಸಿದರು.

ಇಂದು ಆ ಸಂಸ್ಥೆ ೨೦ ಸಾವಿರ ವಿದ್ಯಾರ್ಥಿಗಳುಳ್ಳ ಬೃಹತ್ ವಿದ್ಯಾ ಸಂಸ್ಥೆಯಾಗಿ ಹೊರಹೊಮ್ಮಿದ್ದು, ಇದಕ್ಕೆ ಲಿಂಗೈಕ್ಯ ಶ್ರೀಗಳೇ ಪ್ರೇರಕ ಶಕ್ತಿಯಾಗಿದ್ದಾರೆ. ಗಡಿಯಾಚೆಗೆ ಬಸವತತ್ವ ಪಸರಿಸುವ ನಮ್ಮ ಕರ‍್ಯಚಟುವಟಿಕೆಗಳಿಗೆ ಶ್ರೀಗಳೇ ಮೇಲ್ಪಂಕ್ತಿ ಹಾಕಿದ್ದು, ಶ್ರೀಗಳ ಅನುಪಸ್ಥಿತಿ ನನ್ನನ್ನು ನಿರಂತರ ಬಾಧಿಸುತ್ತಿದೆ. ನಮ್ಮ ಸಂಸ್ಥೆಯ ಬೀದರ್ ನಗರದ ಒಂದು ಹೈಸ್ಕೂಲಿಗೆ ಲಿಂಗೈಕ್ಯ ಗುರುಗಳ ಹೆಸರನ್ನು ನಾಮಕರಣ ಮಾಡಿದ್ದೇವೆ. ಇತ್ತೀಚೆಗೆ ಆ ಶಾಲೆಯ ವಿದ್ಯಾರ್ಥಿ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿರುವುದು ವಿಶೇಷ. ಸದ್ಯದ ಶ್ರೀಗಳು ಸಹ ನನ್ನನ್ನು ಲಿಂಗಾಯತ ಮಠಾಧೀಶರ ಒಕ್ಕೂಟಕ್ಕೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಹ ಭಾಲ್ಕಿ ಹಾಗೂ ಗದಗ ಮಠದ ಅವಿನಾಭಾವ ಸಂಬAಧ ಮುಂದುವರಿಯಲಿದೆ ಎಂದರು.

ಇತ್ತೀಚೆಗೆ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಚಿಂಚಣ -ಶಿರೋಳದ ಪೂಜ್ಯ ಅಲ್ಲಮಪ್ರಭು ಪೂಜ್ಯರನ್ನು ಹಾಗೂ ರಾಣ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ತಾಯಿ ಅವರನ್ನು ಸಂಮಾನಿಸಲಾಯಿತು.

ಸAಮಾನೋತ್ತರವಾಗಿ ಅಕ್ಕ ಅನ್ನಪೂರ್ಣ ತಾಯಿ ಬಸವ ತತ್ವವನ್ನು ಗಟ್ಟಿಯಾಗಿ ಅನುಸರಿಸುತ್ತಿದ್ದ ಲಿಂಗೈಕ್ಯ ತೋಂಟದ ಶ್ರೀಗಳ ಮಾತುಗಳು ನನ್ನನ್ನು ಸಾಕಷ್ಟು ಪ್ರಭಾವಗೊಳಿಸಿದ್ದು ಗುಣ-ಅವಗುಣ ಗಳನ್ನು ಲೆಕ್ಕಿಸದೇ ನಿರ್ಭೀಡೆಯಿಂದ ಮಾತನಾಡುತ್ತಿದ್ದ ಅವರ ವ್ಯಕ್ತಿತ್ವವೇ ಅನುಪಮ. ಬಸವತತ್ವಕ್ಕೆ ಕುಂದು ಎರಗಿ ಬರುತ್ತಿರುವ ಇಂದಿನ ದಿನಗಳಲ್ಲಿ ಬಸವಾಭಿಮಾನಿಗಳು ಶ್ರೀಗಳನ್ನು ನಿತ್ಯ ಸ್ಮರಿಸುವಂತಾ ಗಿದ್ದು, ಅವರ ಆಶೀರ್ವಾದ ಇಲ್ಲವೆಂಬ ಕೊರಗಿನಲ್ಲಿದ್ದ ನನಗೆ ಪೂಜ್ಯ ಸಿದ್ಧರಾಮ ಶ್ರೀಗಳು ಕರೆ ಮಾಡಿ ಕರ‍್ಯಕ್ರಮಕ್ಕೆ ಕರೆದು ಗೌರವಿಸಿರುವುದು ಹೊಸ ಶಕ್ತಿ ತುಂಬಿದೆ ಎಂದರು.

ಲಿAಗೈಕ್ಯ ಗುರುಗಳ ಕುರಿತು ಶ್ರೀಗುರು ಷಟ್ಪದಿಯಲ್ಲಿ ರಚನೆಗೊಂಡ ಡಾ. ಪ್ರದೀಪಕುಮಾರ ಹೆಬ್ರಿ ವಿರಚಿತ ಮನುಕುಲದ ಬೆಳಕು ಮಹಾಕಾವ್ಯ ಹಾಗೂ ಸುಷಮಾ ಜಗಜಂಪಿ ವಿರಚಿತ ಭಾವಮೇರು ಮರಾಠಿ ಅನುವಾದಿತ ಗ್ರಂಥಗಳು ಬಿಡುಗಡೆಗೊಂಡವು.
ಬನಹಟ್ಟಿಯ ಪ್ರೊ. ಬಿ. ಆರ್. ಪೊಲೀಸ ಪಾಟೀಲ ಹಾಗೂ ತಂಡದವರು ತೋಂಟದ ಶ್ರೀಗಳ ಕುರಿತು ಲಾವಣ ಪದಗಳ ಗಾಯನ ನಡೆಸಿದರು.

ಮುಂಡರಗಿ ತೋಂಟದಾರ್ಯ ಮಠದ ಪೂಜ್ಯ ನಿಜಗುಣಪ್ರಭು ಶ್ರೀಗಳು ಮಾತನಾಡಿ, ಮಹಾತ್ಮರನ್ನು ನೆನೆಯುವುದೇ ಘನಮುಕ್ತಿ ಎಂಬAತೆ ಲಿಂಗೈಕ್ಯ ಗುರುಗಳನ್ನು ನೆನೆಯುವುದೇ ನಮ್ಮ ಸೌಭಾಗ್ಯವಾಗಿದ್ದು, ಅವರು ಅಗಲಿದ ಈ ನಾಲ್ಕು ವರ್ಷಗಳಲ್ಲಿ ಬರೊಬ್ಬರಿ ೬೧ ಪುಸ್ತಕಗಳು ಅವರ ಕುರಿತು ಪ್ರಕಟವಾಗಿರುವುದು ಸಖೇದಾಶ್ಚರ್ಯದ ಸಂಗತಿಯಾಗಿದೆ. ಮಠಗಳಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವ ಸಂಸ್ಕೃತಿಗೆ ಲಿಂಗೈಕ್ಯ ಗುರುಗಳೇ ನಾಂದಿ ಹಾಡಿದ್ದು, ಧಾರ್ಮಿಕ, ಶಿಕ್ಷಣ, ಸಾಹಿತ್ಯ ಕ್ಷೇತ್ರಗಳಿಗೆ ಶ್ರೀಮಠದ ಕೊಡುಗೆ ಅಪಾರವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿ.ಪ. ಸದಸ್ಯ ಎಸ್.ವ್ಹಿ. ಸಂಕನೂರ ಮಾತನಾಡಿ ಗಂಧದ ಕೊರಡಿನಂತೆ ತಮ್ಮ ಜೀವನವನ್ನು ತೇಯ್ದು ಸಮಾಜಕ್ಕೆ ಮುಡುಪಾಗಿಟ್ಟಿದ್ದ ಶ್ರೀಗಳು ಸತ್ಯ ಎಷ್ಟೇ ಕಹಿಯಾಗಿದ್ದರೂ ಅದನ್ನು ಪ್ರತಿಪಾದಿಸುವ ಛಾತಿಯುಳ್ಳವರಾಗಿದ್ದರು. ಸಧ್ಯ ಅವರ ಹೆಸರಿನಲ್ಲಿ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ನೌಕರರು ರಾಷ್ಟಿçÃಯ ಪ್ರಶಸ್ತಿ ಸ್ಥಾಪಿಸಿ ಅರ್ಹರಿಗೆ ಅದನ್ನು ಪ್ರದಾನ ಮಾಡುತ್ತಿರುವುದು ಅಭಿನಂದನೀಯ ಸಂಗತಿಯಾಗಿದ್ದು, ಶ್ರೀಗಳು ಹಾಕಿಕೊಟ್ಟ ಅಭೂತಪೂರ್ವ ಸಂಸ್ಕೃತಿಯನ್ನು ಮುಂದುವರೆಸುತ್ತಿರುವುದು ಸಂತಸ ನೀಡಿದೆ ಎಂದರು.

ಸಾನಿಧ್ಯ ವಹಿಸಿದ್ದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ತೋಂಟದಾರ್ಯ ಮಠದ ಆಡಳಿತಾಧಿಕಾರಿ ಪ್ರೊ. ಎಸ್.ಎಸ್. ಪಟ್ಟಣಶೆಟ್ಟರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯ ಮೇಲೆ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿAಗ ಮಹಾಸ್ವಾಮಿಗಳು, ಆಳಂದದ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು, ಅನುಭವ ಮಂಟಪದ ಕೋರಣೇಶ್ವರ ಮಹಾಸ್ವಾಮಿ ಗಳು, ಅರಸೀಕೆರೆಯ ಶಾಂತಲಿAಗ ದೇಶೀಕೇಂದ್ರ ಮಹಾಸ್ವಾಮಿಗಳು, ಬಸವ ಕಲ್ಯಾಣದ ಶಿವಾನಂದ ಮಹಾಸ್ವಾಮಿಗಳು, ಬಸವಬೆಳವಿಯ ಶರಣಬಸವ ದೇವರು, ಮಾಜಿ ಸಚಿವರಾದ ಎಸ್.ಎಸ್. ಪಾಟೀಲ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಮಂಡ್ಯ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್. ಶಿವಪ್ರಕಾಶ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ದಾನಯ್ಯ ಗಣಾಚಾರಿ, ಜಾತ್ರಾ ಸಮಿತಿ ಅಧ್ಯಕ್ಷರಾದ ಅಮರೇಶ ಅಂಗಡಿ ಉಪಸ್ಥಿತರಿದ್ದರು.
ವಿವೇಕಾನಂದಗೌಡ ಪಾಟೀಲ ಹಾಗೂ ಕೊಟ್ರೇಶ ಮೆಣಸಿನಕಾಯಿ ಕಾರ್ಯಕ್ರಮ ನಿರೂಪಿಸಿದರು. ಲಿಂಗೈಕ್ಯ ತೋಂಟದ ಶ್ರೀಗಳ ಭಕ್ತರು, ಬಸವಾಭಿಮಾನಿಗಳು ಭಾಗವಹಿಸಿದ್ದರು.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

3 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

6 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

10 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

11 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

13 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420