ಬಿಸಿ ಬಿಸಿ ಸುದ್ದಿ

ರೋಗ ಬರುವುದಕ್ಕಿಂತ ಮುಂಚೆ ಬಾರದಂತೆ ಎಚ್ಚರಿಕೆ ವಹಿಸುವುದು ಅಗತ್ಯ: ಜಯಶ್ರೀ ಮತ್ತಿಮಡು

ಶಹಾಬಾದ: ಆರೋಗ್ಯವಂತ ವ್ಯಕ್ತಿ ನಿಜವಾದ ದೇಶದ ಸಂಪತ್ತು ಎನ್ನುವಂತೆ ರೋಗ ಬರುವುದಕ್ಕಿಂತ ಪೂರ್ವದಲ್ಲಿ ಬಾರದಂತೆ ಎಚ್ಚರಿಕೆ ವಹಿಸುವುದು ಅವಶ್ಯವಾಗಿದೆ ಎಂದು ಬಿಜೆಪಿ ಮುಖಂಡೆ ಜಯಶ್ರೀ ಮತ್ತಿಮಡು ಹೇಳಿದರು.

ಅವರು ಶುಕ್ರವಾರ ನಗರದ ಸಹರಾ ಫಂಕ್ಷನ್ ಹಾಲ್‍ನಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘ ಕಲ್ಬುರ್ಗಿ ಶಹಾಬಾದ ಘಟಕ ವತಿಯಿಂದ ಆಯೋಜಿಸಿದ ಮಹಿಳೆಯರಿಗಾಗಿ ಮನೆಮದ್ದು ಹಾಗೂ ಪರಸ್ಪರ ಸಂಬಂಧಗಳ ನಿರ್ವಹಣ ತರಬೇತಿ ಕಾರ್ಯಗಾರದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಸಣ್ಣ ಪುಟ್ಟ ರೋಗರುಜಿನಗಳಿಗೆ ಮನೆಯ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ವನಸ್ಪತಿ ದೊರೆಯಲಿದ್ದು, ಅವುಗಳನ್ನು ಉಪಯೋಗಿಸುವುದರ ಮೂಲಕ ಚಿಕಿತ್ಸೆಗೆ ಒಳಪಡಬೇಕು.ಅಲ್ಲದೇ ಮನೆಯಲ್ಲೇ ಸಿಗುವ ಜಿರಿಗೆ, ಲವಂಗ, ಅಜವಾನ್ ಸೇರಿದಂತೆ ಇತರ ವಸ್ತುಗಳನ್ನು ಬಳಸುವ ಮೂಲಕ ಶಾಶ್ವತವಾಗಿ ರೋಗ ಶಮನಗೊಳ್ಳುತ್ತದೆ. ತಲೆ ಸೋಲಿ, ನೆಗಡಿ ಕೆಮ್ಮು ಶೀತ ಮತ್ತಿತರ ಸಣ್ಣಪುಟ್ಟ ಕಾಯಿಲೆಗಳಿಗೆ ಮನೆಮದ್ದು ಉಪಯೋಗಿಸುವುದರ ಮೂಲಕ ಆರೋಗ್ಯವಂತರಾಗಿ ಜೀವಿಸಬಹುದು ಎಂದು ಹೇಳಿದರು.

ಕಲಬುರಗಿ ಹಿಂಗುಲಾಂಬಿಕ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪೆÇ್ರಫೆಸರ್ ನಿರ್ಮಲ ಕೆಳಮನೆ ಮಾತನಾಡಿ, ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಹಲವು ಉಪಯುಕ್ತ ಔಷಧೀಯ ಗಿಡಮರಗಳನ್ನು ಬಳಕೆ ಮಾಡಿಕೊಂಡು ರೋಗಗಳನ್ನು ಬಾರದಂತೆ ತಡೆಗಟ್ಟಬಹುದು, ನಿಂಬೆಹಣ್ಣು ಜೇನುತುಪ್ಪ ಹಸಿ ಶುಂಠಿ ಒಣ ಶುಂಠಿ ಜೇನುತುಪ್ಪ ಸೇರಿದಂತೆ ತರಕಾರಿಗಳಲ್ಲಿ ಸಹ ರೋಗ ನಿರೋಧಕ ಶಕ್ತಿಗಳು ಹೊಂದಿದ್ದು ಅವುಗಳನ್ನು ಬಳಕೆ ಮಾಡಿಕೊಳ್ಳುವುದರ ಮೂಲಕ ನಿಯಂತ್ರಣ ಸಾಧಿಸಬಹುದು ಎಂದು ತಿಳಿಸಿದರು .

ಸಂಪನ್ಮೂಲ ವ್ಯಕ್ತಿಗಳಾಗಿ ಮಂಜುಳಾ ಭೀಮರಾವ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸಂಬಂಧಗಳಲ್ಲಿ ಬಿರುಕು ಮೂಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ .ಸಣ್ಣಪುಟ್ಟ ವಿಷಯಗಳಿಗೆ ವೈ ಮನಸು ದ್ವೇಷ ನೆಮ್ಮದಿ ಬದುಕುವುದು ಕಷ್ಟಕರವಾಗಿದೆ. ಇವುಗಳಿಂದ ದೂರ ಇರಬೇಕಾದರೆ ಮುಖ್ಯವಾಗಿ ನಾಲಿಗೆ ನಾವು ಆಡುವ ಮಾತುಗಳು ಪ್ರಮುಖವಾಗಿದೆ. ಹೀಗಾಗಿ ತಾಳ್ಮೆ ಸಹನೆ ಇವುಗಳಿಂದ ಮಾತ್ರ ಸಂಬಂಧಗಳನ್ನು ಗಟ್ಟಿಗೊಳಿಸಬಹುದೆಂದು ಅತ್ಯಂತ ಮಾರ್ಮಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾಗಿರಥಿ ಗುನ್ನಾಪುರ, ಜಿಲ್ಲಾ ಮಹಿಳಾ ಮೋರ್ಚಾದ ಜ್ಯೋತಿ ಶರ್ಮಾ, ವೀರಶೈವ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀಬಾಯಿ ರಾವೂರ್, ಶಹಾಬಾದ –ವಾಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ್, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘ ಜಿಲ್ಲಾ ಸಂಯೋಜಕ ಶಿವಶರಣಪ್ಪ ವಸ್ತ್ರದ್, ತಾಲೂಕ ಸಂಯೋಜಕರಾದ ಮಲ್ಲಿಕಾರ್ಜುನ ಇಟಗಿ, ಸುನೀಲಕುಮಾರ ಗುಡೂರ್, ರಮೇಶ ಸಾಹು,ಅಣಿವೀರಪ್ಪ ಬಾಳಿ ಸೇರಿದಂತೆ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ಪ್ರಗತಿ ಕೇಂದ್ರದ ಹಾಗೂ ಕೌಶಲ ಕೇಂದ್ರದ ನಿರ್ವಾಹಿಕಿಯರು ಮಹಿಳೆಯರು ಇದ್ದರು.
ಶರಣು ವಸ್ತ್ರದ್ ಪ್ರಾಸ್ತಾವಿಕ ನುಡಿದರು. ಲತಾ ಸಂಜೀವ್ ನಿರೂಪಿಸಿದರು, ಮಂಜುಳಾ ಜಾಧವ ಸ್ವಾಗತಿಸಿದರು,ಚೆನ್ನಮ್ಮ ಗೋಳಾ(ಕೆ) ವಂದಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

7 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

17 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

17 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

17 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago