ಬಿಸಿ ಬಿಸಿ ಸುದ್ದಿ

5, 8 ನೆ ತರಗತಿಗೆ ಪಬ್ಲಿಕ್ ಪರೀಕ್ಷೆ ಪ್ರಸ್ತಾವನೆ ಸರ್ಕಾರ ಕೈ ಬಿಡಬೇಕು: ಅಜಯ್‍ ಕಾಮತ್

ಕಲಬುರಗಿ: ಕರ್ನಾಟಕರಾಜ್ಯ ಸರ್ಕಾರವು 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆಗಳನ್ನು ನಡೆಸುವುದಾಗಿ ಹೇಳಿದೆ. ಶಿಕ್ಷಣ ಗುಣಮಟ್ಟವನ್ನುಕಾಪಾಡುವಉದ್ದೇಶದಿಂದ ಈ ಪರೀಕ್ಷೆ ನಡೆಸಲಾಗುತ್ತಿದೆಎಂದು ಶಿಕ್ಷಣ ಮಂತ್ರಿಗಳು ಹೇಳುತ್ತಿದ್ದಾರೆ.ಗುಣಮಟ್ಟ ಕುಸಿದಿರುವುದರ ಕಾರಣವನ್ನು ಶಿಕ್ಷಕರ ತಲೆ ಮೇಲೆ ಹೊರೆಸಿ ತನ್ನಜವಾಬ್ದಾರಿಯಿಂದ ಸರ್ಕಾರ ಕೈತೆಗೆದುಕೊಳ್ಳುತ್ತಿದೆ ಎಂದುಎಐಡಿಎಸ್‍ಒ ರಾಜ್ಯ ಕಾರ್ಯದರ್ಶಿ ಅಜಯ್‍ ಕಾಮತ್‍ ಆರೋಪಿಸಿದ್ದಾರೆ.

ಆ ವಯೋಮಿತಿಯ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವುದು ವಿದ್ಯಾರ್ಥಿಗಳ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ.ಗುಣಮಟ್ಟ ಕುಸಿದಿರುವುದಕ್ಕೆ ಸರ್ಕಾರದ ನೀತಿಗಳೇ ಕಾರಣ. ಈಗಾಗಲೇ ಪಾಸ್ ಫೇಲ್ ಪದ್ದತಿಯನ್ನುಕೈಬಿಟ್ಟುಕಡ್ಡಾಯಉತ್ತೀರ್ಣ ನೀತಿ (ನೋ ಡಿಟೆನ್ಷನ್ ಪಾಲಿಸಿ)ಯನ್ನು ಜಾರಿಗೊಳಿಸಿರುವುದು ಶಿಕ್ಷಣದ ಗುಣಮಟ್ಟವನ್ನು ಹಾಳುಗೆಡವಿದೆ. ಈ ಅವೈಜ್ಞಾನಿಕ ನೀತಿಯುಜಾರಿಯಾದ ದಿನದಿಂದಲೂಎಐಡಿಎಸ್ಓಇದರ ವಿರುದ್ಧಧ್ವನಿ ಎತ್ತಿದೆ.ಕಾಲದಗತಿಯಲ್ಲಿ ಸಾಬೀತಾಗಿರುವ ಪಾಸ್ ಫೇಲ್ ಪದ್ದತಿಯನ್ನು ಜಾರಿಗೊಳಿಸುವುದನ್ನು ಬಿಟ್ಟು ಸರ್ಕಾರ ಶಿಕ್ಷಕರ ಮೇಲೆ ಗೂಬೆ ಕೂರಿಸುತ್ತಿದೆಎಂದುಅವರು ತಿಳಿಸಿದ್ದಾರೆ.

ಶಾಲೆಗಳಲ್ಲಿ ಸಮರ್ಪಕ ಸಂಖ್ಯೆಯಲ್ಲಿ ಶಿಕ್ಷಕರ ನೇಮಕಾತಿಯಾಗಿಲ್ಲ, ಸರಿಯಾದ ಕಟ್ಟಡಗಳಿಲ್ಲ, ಶೌಚಾಲಯ, ಕುಡಿಯುವ ನೀರು ಸೇರಿದಂತೆಕನಿಷ್ಠ ಸೌಲಭ್ಯಗಳು ಕೂಡಇಲ್ಲ. ರಾಜ್ಯದಲ್ಲಿ 4500 ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಿದ್ದಾರೆ.ಶಿಕ್ಷಕರೇ ಇಲ್ಲದಿರುವ ಶಾಲೆಗಳು ಕೂಡ ಈ ರಾಜ್ಯದಲ್ಲಿವೆ. ಜೊತೆಗೆ, ಇರುವ ಕೆಲವು ಶಿಕ್ಷಕರಿಗೆ ಪಾಠವನ್ನು ಹೊರತುಪಡಿಸಿ ಹಲವು ಬೋಧಕೇತರ ಕೆಲಸಗಳನ್ನು ಸರ್ಕಾರವೇ ವಹಿಸುತ್ತದೆ.ಸಮರ್ಪಕ ಸೌಲಭ್ಯಗಳನ್ನು ಒದಗಿಸಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಪೂರಕ ವಾತಾವರಣವನ್ನು ಸೃಷ್ಟಿಸುವ ತನ್ನಕನಿಷ್ಠ ಜವಾಬ್ದಾರಿಯನ್ನು ನಿಭಾಯಿಸದೆ ಸರ್ಕಾರವು ಪಬ್ಲಿಕ್ ಪರೀಕ್ಷೆಕುರಿತು ಮಾತನಾಡುತ್ತಿದೆ.ಈಗಾಗಲೇ ಸರ್ಕಾರವು ಹೊಸ ಶಿಕ್ಷಣ ನೀತಿಯನ್ನುರಾಜ್ಯದಲ್ಲಿ ಹೇರುತ್ತಿರುವುದರ ವಿರುದ್ಧ ವ್ಯಾಪಕವಾಗಿ ವಿದ್ಯಾರ್ಥಿಗಳು ಶಿಕ್ಷಕರು ಮತ್ತುತಜ್ಞರಿಂದ ವಿರೋಧ ವ್ಯಕ್ತವಾಗುತ್ತಿದೆ.ಈಗ 5 ಮತ್ತು 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆಗಳನ್ನು ನಡೆಸುವುದುಅತ್ಯಂತ ಸ್ಪಷ್ಟವಾಗಿಎನ್‍ಇಪಿ-2020ರ ಹೇರಿಕೆಯಾಗಿದೆಎಂದು ವಿವರಿಸಿದ್ದಾರೆ.

ಈ ರೀತಿಯ ಪರೀಕ್ಷೆಗಳು ಕೋಚಿಂಗ್ ಲಾಬಿಗಳಿಗೆ ಮಣೆ ಹಾಕುವುದμÉ್ಟೀಅಲ್ಲದೆ ಶಿಕ್ಷಣವನ್ನು ಇನ್ನಷ್ಟು ದುಬಾರಿಗೊಳಿಸುತ್ತದೆ. ಸರ್ಕಾರವು ಈ ಕೂಡಲೇ ಪಬ್ಲಿಕ್ ಪರೀಕ್ಷೆಯ ಪ್ರಸ್ತಾವನೆಯನ್ನುಕೈಬಿಡಬೇಕು ಮತ್ತು ಶಿಕ್ಷಣದ ಗುಣಮಟ್ಟವನ್ನುಖಾತ್ರಿಪಡಿಸಲು ಪಾಸ್ ಫೇಲ್ ಪದ್ದತಿಯನ್ನು ಜಾರಿಗೊಳಿಸಬೇಕು ಹಾಗೂ ಶಿಕ್ಷಕರ ನೇಮಕಾತಿ, ಶಾಲಾ ಕಟ್ಟಡ ಸೇರಿದಂತೆಇತರ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿ ಸಾರ್ವಜನಿಕ ಶಿಕ್ಷಣ ಪದ್ಧತಿಯನ್ನು ಬಲಪಡಿಸಬೇಕುಎಂದುಎಐಡಿಎಸ್‍ಓ ಕಲಬುರಗಿಜಿಲ್ಲಾ ಸಮಿತಿಯುಆಗ್ರಹಿಸುತ್ತದೆಎಂದು ಸಂಘಟನೆಯಜಿಲ್ಲಾ ಕಾರ್ಯದರ್ಶೀ ತುಳಜಾರಾಮ ಎನ್.ಕೆ. ತಿಳಿಸಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

5 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

15 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

15 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

15 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago