ಕಲಬುರಗಿ: ಧಾರ್ಮಿಕ ಕಾರ್ಯಕ್ರಮಗಳು ಭಾವೈಕ್ಯತೆಗೆ, ಉತ್ತಮ ಸಂಸ್ಕಾರಕ್ಕೆ ಸಾಕ್ಷಿ ಹಾಗೂ ನಮ್ಮೆಲ್ಲರ ಪ್ರಗತಿಯ ಪ್ರತಿರೂಪ.
ನಗರದ ಆಳಂದ ರಸ್ತೆಯಲ್ಲಿರುವ ಕೆ.ಹೆಚ್.ಬಿ ಗ್ರೀನ್ ಪಾರ್ಕ್ ಬಡಾವಣೆಯಲ್ಲಿ ನವರಾತ್ರಿಯ ಪ್ರಯುಕ್ತ ಅಂಬಾಭವಾನಿ ಪ್ರತಿಮೆ ಪ್ರತಿಷ್ಠಾಪನೆ ಮಾಡಿ ಪ್ರತಿ ದಿನ ದೇವಿಗೆ ಒಂದೊಂದು ಅವತಾರದಲ್ಲಿರಿಸಿ 9ದಿನ ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಭಾನುವಾರ ಬೆಳಿಗ್ಗೆ ನುರಿತ ತಂಡದಿಂದ ಗೀಗಿ ಪದ, ಭಜನೆಯೊಂದಿಗೆ ವಿಶೇಷ ಪೂಜೆ ನಡೆಯಿತು. ಸಾಯಂಕಾಲ ದೇವಿಯ ಪಲ್ಲಕ್ಕಿ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ಹಬ್ಬದ ಪ್ರಯುಕ್ತ ಮಹಿಳೆಯರು ಹಾಗೂ ಮಕ್ಕಳು ಹೊಸ ಬಟ್ಟೆ ತೊಟ್ಟು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆ ಮುಂಚೂಣಿಯಲ್ಲಿದ್ದ ವಾದ್ಯ ಮೇಳದವರ ವಾದನಕ್ಕೆ ಬಡಾವಣೆಯ ಭಕ್ತಾದಿಗಳು ನೃತ್ಯ ಮಾಡಿ ಗಮನ ಸೆಳೆದರು.
ಈ ಸಂದರ್ಭದಲ್ಲಿ ಬಡಾವಣೆಯ ಅದ್ಯಕ್ಷ ಸಂಜೀವಕುಮಾರ ಶೆಟ್ಟಿ ಮಾತನಾಡಿ ಸಮಾಜದೆಲ್ಲೆಡೆ ಆಧ್ಯಾತ್ಮಿಕ, ಧಾರ್ಮಿಕ, ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ನಡೆಸಿ ಯುವ ಸಮೂಹವನ್ನು ಜಾಗೃತಗೊಳಿಸಬೇಕಿದೆ. ಧಾರ್ಮಿಕ ಕಾರ್ಯಕ್ರಮಗಳು ಸಮಾಜವನ್ನು ಒಗ್ಗೂಡಿಸುವುದರ ಜೋತೆಗೆ ಜನರಿಗೆ ಉತ್ತಮ ಸಂಸ್ಕಾರವನ್ನು ನೀಡುತ್ತವೆ ಎಂದರು. ದೇವಿಯ ಮೆರವಣಿಗೆಯಲ್ಲಿ ಕ್ಷೇಮಾಭಿವೃದ್ಧಿ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಬಡಾವಣೆಯ ಎಲ್ಲಾ ನಿವಾಸಿಗಳು ಭಾಗವಹಿಸಿದ್ದರು.
ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…
ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…
ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್ಐಆರ್…
ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…
ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…
ಕಲಬುರಗಿ: ಇನ್ನರ್ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…