ಕಲಬುರಗಿ: ಬೇಡಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಸಮುದಾಯದ ವತಿಯಿಂದಇದೆ ಅ.18 ರಂದು ವಿಧಾನ ಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೈದ್ರಾಬಾದಕರ್ನಾಟಕ ಬೇಡಜಂಗಮ ಸಮಾಜ ಸಂಸ್ಥೆ ಕಲಬುರಗಿ ನಗರಘಟಕದ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಸಾಲಿಮಠ ಹೇಳಿದ್ದಾರೆ.
ರಾಜ್ಯಾದ್ಯಂತ ಸಾವಿರಾರು ಮಠಾಧೀಶರು, ಪಂಚಪೀಠಾಧೀಶರು, ಹರಚರ ಗುರುಗಳು ಮೂರ್ತಿಗಳು ಒಳಗೊಂಡಂತೆ ಲಕ್ಷಕ್ಕೂಅಧಿಕ ಬೇಡಜಂಗಮ ಕುಲಬಾಂಧವರಿಂದ ಬೆಂಗಳೂರಿನ ವಿಧಾನ ಸೌಧಎದುರಿಗೆಆತ್ಮಾರ್ಪಣೆ ಮಾಡಿಕೊಳ್ಳುವ ಕಾರ್ಯಕ್ರಮ ನಡೆಸಲಾಗುವದುಎಂದು ಹೇಳಿದರು.
ಕರ್ನಾಟಕರಾಜ್ಯ ಬೇಡಜಂಗಮರಒಕ್ಕೂಟದರಾಜ್ಯಾಧ್ಯಕ್ಷ ಬಿ.ಡಿ. ಹಿರೇಮಠ್ ನೇತೃತ್ವದಲ್ಲಿ ಬೇಡಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಸಮುದಾಯದ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ನಡೆಯುತ್ತಿದ್ದು, ಈ ಕುರಿತುಚರ್ಚಿಸಲು ಸರಕಾರಇದೆ ಅ.12 ರಂದು ಸಭೆ ಸಹ ಕರೆದಿತ್ತು.ಆದರೆ, ಕೆಲ ಶಾಸಕರ ಹಾಗೂ ಕಾಣದ ಕೈಗಳಿಂದ ಸಭೆರದ್ದು ಮಾಡಲಾಗಿದೆ.ಕೂಡಲೇ ನಮ್ಮ ಸಮುದಾಯಕ್ಕೆ ಸಿಗಬೇಕಾದ ಎಸ್ ಸಿ ಪ್ರಮಾಣಪತ್ರ ವಿತರಿಸುವಿಕೆಯನ್ನು ಸಡಿಲಕೋಳಿಸಿ ಎಂದು ಹೇಳಿದರು.
ಪೂರ್ವ ಭಾವಿ ಸಭೆ: ವಿಧಾನ ಸೌಧ ಚಲೋ ಕಾರ್ಯಕ್ರಮದ ಹಿನ್ನೆಲೆಜಿಲ್ಲೆಯಿಂದ 6 ರಿಂದ 8 ಸಾವಿರಜನರು ಭಾಗವಹಿಸುವ ನಿರೀಕ್ಷೆಇದೆ. ಈ ಕುರಿತು ನಗರದಕನ್ನಡ ಭವನದಲ್ಲಿ ಅ.12 ರಂದು ಸಾಯಂಕಾಲ 5 ಗಂಟೆಗೆ ಪೂರ್ವ ಭಾವಿ ಸಭೆಅಯೋಜಿಸಲಾಗಿದೆ.
ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗವಹಿಸಬೇಕು ಎಂದುಕೋರಿದರು. ಸುದ್ದಿಗೋಷ್ಠಿಯಲ್ಲಿ ನಗರಘಟಕದಅಧ್ಯಕ್ಷ ವೀರಭದ್ರಯ್ಯ ಮಠ, ಎಂ.ಬಿ.ಕಳ್ಳಿಮಠ, ಶಂಭುಲಿಂಗಯ್ಯ ಮಠಪತಿ, ಸಿದ್ದಲಿಂಗಯ್ಯ ಸ್ಥಾವರಮಠ, ರುದ್ರಮುನಿ ಮಠಪತಿ, ಶಿವು ಸ್ವಾಮಿ, ಅಣವೀರಯ್ಯ ಸ್ವಾಮಿ ಪ್ಯಾಟಿಮಠ ಸೇರಿದಂತೆಇತರರಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…