ಕಲಬುರಗಿ: ಹೈದ್ರಾಬಾದ ಕರ್ನಾಟಕ ಇತಿಹಾಸ ರಚನಾ ಸಮಿತಿಯ ಕಾರ್ಯಾಲಯವನ್ನು ಮುಂದಿನ ವಾರದಲ್ಲಿ ಗುಲಬರ್ಗಾ ವಿ.ವಿ. ಆವರಣದಲ್ಲಿ ಆರಂಭಿಸಲಾಗುವುದು ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಮತ್ತು ಹೈದ್ರಾಬಾದ ಕರ್ನಾಟಕ ಇತಿಹಾಸ ರಚನಾ ಸಮಿತಿಯ ಅಧ್ಯಕ್ಷರಾಗಿರುವ ಕೃಷ್ಣ ಬಾಜಪೇಯಿ ಅವರು ಹೇಳಿದರು.
ಮಂಗಳವಾರ ತಮ್ಮ ಕಚೇರಿಯಲ್ಲಿ ಸಮಿತಿ ಸಭೆ ನಡೆಸಿದ ಅವರು ಸಮಿತಿಯ ಸ್ಥಾಪನೆಯ ಉದ್ದೇಶ ಮತ್ತು ಇದೂವರೆಗಿನ ಪ್ರಗತಿ ಕುರಿತು ಮಾಹಿತಿ ಪಡೆದುಕೊಂಡ ನಂತರ ಸಮಿತಿಗೆ ಪ್ರತ್ಯೇಕವಾದ ಕಚೇರಿ ಇಲ್ಲ. ಪ್ರತ್ಯೇಕವಾದ ಕಚೇರಿ ಸ್ಥಾಪಿಸಿ ಮೂಲಸೌಕರ್ಯ ಕಲ್ಪಿಸಬೇಕೆಂಬ ಬೇಡಿಕೆಗೆ ಸ್ಪಂದಿಸಿದ ಅವರು, ಕೆ.ಕೆ.ಆರ್.ಡಿ.ಬಿ. ಅನುದಾನದಿಂದ ಗುಲಬರ್ಗಾ ವಿ.ವಿ. ಆವರಣದಲ್ಲಿ ಸ್ಥಾಪಿಸಲಾಗಿರುವ ಪ್ರಾದೇಶಿಕ ಅಧ್ಯಯನ ಮತ್ತು ಅಭಿವೃದ್ದಿ ಕೇಂದ್ರದಲ್ಲಿಯೆ ಸಮಿತಿ ಕಚೇರಿ ಸ್ಥಾಪಿಸಲಾಗುವುದು. ಇಲ್ಲಿ ಸಮಿತಿ ಸದಸ್ಯರಿಗೆ ಎಲ್ಲಾ ರೀತಿಯ ಮೂಲಸೌಕರ್ಯ ಕಲ್ಪಿಸಲಾಗುವುದು. ಶೀಘ್ರವೇ ತಾವು ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದರು.
ಕಲ್ಯಾಣ ಕರ್ನಾಟಕ ಇತಿಹಾಸ ತುಂಬಾ ಶ್ರೀಮಂತಿಕೆಯಿಂದ ಕೂಡಿದೆ. ಇತಿಹಾಸ ರಸನೆ ಸಂದರ್ಭದಲ್ಲಿ ವಾಸ್ತವಿಕ ಮಾತ್ರ ದಾಖಲಿಸಬೇಕು ಮತ್ತು ಅದು ತಟಸ್ಥವಾಗಿರಬೇಕು. ಇತಿಹಾಸ ರಚನೆಗೆ ಸಂಬಂಧಿಸಿದ ಎಲ್ಲಾ ಭಾಗೀದಾರರ ಸಹಕಾರ ಅವಶ್ಯಕ ಎಂದ ಅವರು ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಈ ವರ್ಷದಲ್ಲಿ ಪ್ರದೇಶದ ಇತಿಹಾಸ ರಚನೆಗೆ ಅಂತಿಮ ರೂಪ ನೀಡಬೇಕು ಎಂಬುದು ನನ್ನ ಬಯಕೆ ಎಂದರು.
ಇತಿಹಾಸ ರಚನೆಯ ಮಾಹಿತಿ ಸಂಗ್ರಹಕ್ಕಾಗಿ ಕಲಬುರಗಿ, ಬೀದರನಲ್ಲಿ ಈಗಾಗಲೇ ಕಾರ್ಯಾಗಾರ ಏರ್ಪಡಿಸಿದ್ದು, ಮುಂದುವರಿದ ಭಾಗವಾಗಿ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗೆ ಸೀಮಿತವಾಗಿ ರಾಯಚೂರಿನಲ್ಲಿ, ಕೊಪ್ಪಳ, ಬಳ್ಳಾರಿ, ವಿಜಯನಗರ ಸೀಮಿತವಾಗಿ ಹೊಸಪೇಟೆಯಲ್ಲಿ ಕಾರ್ಯಗಾರ ಏರ್ಪಡಿಸಲು ಮತ್ತು ಹೈದ್ರಾಬಾದ ಕರ್ನಾಟಕ ಇತಿಹಾಸ ಕುರಿತು ಈಗಾಗಲೆ ದಾಖಲಾಗಿರುವ ವಿವಿಧ ಭಾಷೆಯಲ್ಲಿ ಪ್ರಕಟಗೊಂಡಿರುವ ಪುಸ್ತಕಗಳನ್ನು ಸಮಿತಿಯ ಮಾಹಿತಿಗೆ ಖರೀದಿಸಲು ಹಾಗೂ “ಹೈದ್ರಾಬಾದ ಕರ್ನಾಟಕವನ್ನು” ಕಲ್ಯಾಣ ಕರ್ನಾಟಕವೆಂದು ಸರ್ಕಾರ ಮರುನಾಮಕರಣ ಮಾಡಿದ್ದರಿಂದ ಸಮಿತಿಯ ಹೆಸರನ್ನು “ಕಲ್ಯಾಣ ಕರ್ನಾಟಕ ಇತಿಹಾಸ ರಚನಾ ಸಮಿತಿ” ಎಂದು ಮರುನಾಮಕರಣ ಮಾಡಲು ಸಹ ಸಭೆ ಒಪ್ಪಿಗೆ ಸೂಚಿಸಿತು.
ಉಪ ಸಮಿತಿ ರಚನೆಗೆ ಒಪ್ಪಿಗೆ: ಸಭೆಯ ಚರ್ಚೆಯಲ್ಲಿ ಸದಸ್ಯ ಪೆÇ್ರ.ಬಿ.ಸಿ.ಮಹಾಬಳೇಶ್ವರಪ್ಪ ಮಾತನಾಡಿ, ಇತಿಹಾಸ ಮತು ಸಂಸ್ಕøತಿ, ಅಭಿವೃದ್ಧಿ ಮತು ಸ್ವಾತಂತ್ರ್ಯ ಚಳುವಳಿ ವಿಷಯದ ಕುರಿತು ಸಮಗ್ರ ಅಧ್ಯಯನಕ್ಕೆ ತ್ರಿಸದಸ್ಯರ ಉಪ ಸಮಿತಿ ರಚಿಸಬೇಕೆಂದು ಒತ್ತಾಯಿಸಿದರು. ಇದಕ್ಕೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ ಸಭೆ ಸದರಿ ಉಪ ಸಮಿತಿಗಳು ಆಯಾ ವಿಷಯಗಳ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ತಿಳಿಸಲಾಯಿತು.
ಪ್ರಾದೇಶಿಕ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರಥಮ ಸಭೆ ನಡೆಸಿದ ಕೃಷ್ಣ ಬಾಜಪೇಯಿ ಅವರಿಗೆ ಸಮಿತಿ ಸದಸ್ಯ ಕಾರ್ಯದರ್ಶಿ ಲಕ್ಷ್ಮಣ ದಸ್ತಿ ನೇತೃತ್ವದಲ್ಲಿ ಸದಸ್ಯರು ಆತ್ಮೀಯವಾಗಿ ಹೂಗುಚ್ಛ ನೀಡಿ ಸಭೆಗೆ ಬರಮಾಡಿಕೊಂಡರು.
ತದನಂತರ ಲಕ್ಷಣ ದಸ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 2010ರಲ್ಲಿ ರಚನೆಯಾದ ಸಮಿತಿಯ ಉದ್ದೇಶ ಮತ್ತು ಇದೂವರೆಗಿನ ಪ್ರಗತಿ ಕುರಿತು ಸಭೆಗೆ ವಿವರಿಸಿದ ಅವರು, ಇತಿಹಾಸ ಪುಟದಿಂದ ಬಿಟ್ಟು ಹೋದ 1724-1948 ಅವಧಿಯ ಹೈದ್ರಾಬಾದ ಕರ್ನಾಟಕ ಪ್ರದೇಶದ ಕಲೆ, ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಹೈದ್ರಾಬಾದ ಕರ್ನಾಟಕ ವಿಮೋಚನಾ ಚಳುವಳಿ ಹೀಗೆ ಸಮಗ್ರ ಶ್ರೀಮಂತ ಇತಿಹಾಸ ರಚನೆಯ ಮಹತ್ತರ ಜವಾಬ್ದಾರಿ ಈ ಸಮಿತಿಗೆ ನೀಡಲಾಗಿದೆ.
ಈಗಾಗಲೆ ಕಲಬುರಗಿ ಮತ್ತು ಬೀದರ ಜಿಲ್ಲೆಗಳಲ್ಲಿ ಕಾರ್ಯಾಗಾರ ನಡೆಸಿ, ಇತಿಹಾಸ ತಜ್ಞರಿಂದ ಸುಮಾರು 500 ಪುಟದಷ್ಟು ಮಾಹಿತಿ ಸಂಗ್ರಹಿಸಲಾಗಿದೆ. ರಾಯಚೂರು, ಬಳ್ಳಾರಿ ಜಿಲ್ಲೆಯಲ್ಲಿಯೂ ಕಾರ್ಯಾಗಾರ ಏರ್ಪಡಿಸಬೇಕಿದೆ. ಇದಲ್ಲದೆ ಪ್ರತಿ ತಾಲೂಕಿನಲ್ಲಿಯೂ ವಿಚಾರ ಸಂಕಿರಣ ಮಾಡಿ ಮುಕ್ತವಾಗಿ ಇತಿಹಾಸ ಸಂಗ್ರಹಿಸಬೇಕಿದೆ. ಇನ್ನು ಗುಲಬರ್ಗಾ ವಿ.ವಿ.ಯಲ್ಲಿ ಹೈದ್ರಾಬಾದ ಕರ್ನಾಟಕ ಇತಿಹಾಸ ಅಧ್ಯಯನ ಪೀಠ ಸ್ಥಾಪನೆಗೆ ಈಗಾಗಲೆ ರೂಪುರೇಷೆಯ ವರದಿ ಸರ್ಕಾರಕ್ಕೆ ಸಲ್ಲಿಸಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಮಿತಿ ಸದಸ್ಯರಾದ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ.ದಯಾನಂದ ಅಗಸರ್, ಪ್ರೊ.ಎಸ್.ಎ.ಪಾಲೇಕರ್, ಪೆÇ್ರ.ಜಯಶ್ರೀ ದಂಡೆ, ಡಾ.ರಾಜೇಂದ್ರ ಪ್ರಸಾದ ಎನ್.ಎಲ್., ಡಾ. ಮಹ್ಮದ ಅಲಿ ಮಾಜಿದ್ ಧಾಗಿ, ಡಾ.ಎಂ.ಎ.ವಹಾಬ್ ಅಂದಲಿಬ್ ಅವರು ಸಭೆಯ ಚರ್ಚೆಯಲ್ಲಿ ಭಾಗಿಯಾದರು. ಅಪರ ಪ್ರಾದೇಶಿಕ ಆಯುಕ್ತರಾದ ಇಲಿಯಾಸ್ ಅಹ್ಮದ ಇಸಾಮದಿ, ಪ್ರಮೀಳಾ ಎಂ.ಕೆ. ಸಹ ಇದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…