ಕಲಬುರಗಿ: ಪ್ರತಿಯೊಬ್ಬ ವಿಕಲಚೇತನರು ಸರ್ಕಾರದ ಸೌಲಭ್ಯ ಮತ್ತು ಮಾಹಿತಿಯ ಸದುಪಯೋಗ ಪಡೆಯಲು ಇಂತಹ ಮೌಲ್ಯಮಾಪನ ಹಾಗೂ ಜಾಗೃತಿ ಶಿಬಿರಗಳು ಮಾರ್ಗದರ್ಶನ ಮಾಡುತ್ತವೆಂದು ವಿಷಯ ತಜ್ಞರು ಮತ್ತು ಸಾಮಾಜಿಕ ಕಾರ್ಯಕರ್ತರಾದ ಮಸ್ತಾನ್ ಬಿರಾದಾರ ಸಲಹೆ ನೀಡಿದರು.
ಚಿಂಚೋಳ್ಳಿ ಪಟ್ಟಣದ ಹಾರಕೂಡ ದೇವಸ್ಥಾನ ಪ್ರಾಂಗಣದಲ್ಲಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಲಬುರಗಿ ಹಾಗೂ ಆಜಾದ್ ಯುವಕ ಸಂಘ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ವಿಕಲಚೇತನರಿಗೆ ಸಾಧನ ಸಲಕರಣೆಗಾಗಿ ಮೌಲ್ಯಮಾಪನ ಹಾಗೂ ಜಾಗೃತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ವಿಕಲಚೇತನರಿಗೆ ಸರ್ಕಾರ ಹಲವು ಸೌಲಭ್ಯ ನೀಡುತ್ತಿದೆ. ಅದರ ಪ್ರಯೋಜನ ಪಡೆಯುವುದೇ ಈ ಶಿಬಿರದ ಉದ್ದೇಶವಾಗಿದೆ. ಬುದ್ದಿಮಾಂದ್ಯ ಮಕ್ಕಳು ನಿರಾಮಯ ನೋಂದಣಿ ಮಾಡಿಸಿಕೊಂಡು ಚಿಕಿತ್ಸೆಗಾಗಿ ವರ್ಷಕ್ಕೆ ಒಂದು ಲಕ್ಷದವರೆಗೆ ಚಿಕಿತ್ಸೆ ಹಾಗೂ ಔಷಧಿಯ ಖರ್ಚು ಪಡೆಯ ಬಹುದು. ಇಲಾಖೆಯು ಪ್ರತಿ ಯೊಬ್ಬರಿಗೆ ಆಧಾರ ಯೋಜನೆಯಲ್ಲಿ 50 ಸಾವಿರ ಸಬ್ಸಿಡಿ ಸಾಲ ನೀಡುತ್ತದೆ. ಸೌಲಭ್ಯ ಪಡೆಯಲು ಆನ್ ಲೈನ್ ನಲ್ಲಿ ಸರಿಯಾದ ಮಾಹಿತಿ ಯೊಂದಿಗೆ ಅರ್ಜಿ ಸಲ್ಲಿಸಬೇಕು. ಅಂದಾಗ ಮಾತ್ರ ಸರ್ಕಾರದ ಸೇವೆ ಸಕಾಲದಲ್ಲಿ ಪಡೆಯಬಹುದು.
ವಿಕಲಚೇತನ ವ್ಯಕ್ತಿಗಳಿಗಾಗಿ ಸೌಲಭ್ಯಗಳು, ಗುರುತಿನ ಚೀಟಿ, ವೈದ್ಯಕೀಯ ಪ್ರಮಾಣ ಪತ್ರ, ರೈಲ್ವೆ ರಿಯಾಯತಿ ಪ್ರಯಾಣ, ಬಸ್ ಪಾಸ್, ದ್ವಿಚಕ್ರ ವಾಹನ ಸಹಾಯಧನ, ಶಸ್ತ್ರ ಚಿಕಿತ್ಸೆ ಸಹಾಯಧನ, ನಿರಾಮಯ ಆರೋಗ್ಯ ವಿಮೆ, ಬಾಲ ಸಂಜೀವಿನಿ ಆರೋಗ್ಯ ವಿಮೆ, 6 ವರ್ಷದೊಳಗಿನ ವಿಕಲಚೇತನ ಮಕ್ಕಳಿಗೆ ವೈದ್ಯಕೀಯ ಪ್ರಮಾಣ ಪತ್ರ, ವಿಕಲಾಂಗರ ನೆರವಿಗೆ ಹಲವು ಯೋಜನೆಗಳು ಶೇಕಡಾ 40% ಕ್ಕಿಂತ ಹೆಚ್ಚಿನ ಅಂಗವಿಕಲತೆ ಇರುವ ವ್ಯಕ್ತಿಗಳು ಮಾತ್ರ ಈ ಸೌಲಭ್ಯ ಪಡೆಯಲು ಅರ್ಹತೆ ಇರಬೇಕೆಂದು ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.
ಕಾರ್ಯಕ್ರಮ ಅಧಿಕಾರಿ ಗುಲ್ಬರ್ಗಾ ವಲಯ ಸಕ್ಷಮ್ ಪರ್ವ ಕಾರ್ಯಕ್ರಮ ಕಲಬುರಗಿಯ ಅಬ್ದುಲ್ ಶಫೀ ಅಹ್ಮದ್ ಅವರು ಮಾತನಾಡುತ್ತಾ ಸರ್ಕಾರದ ಸೇವೆ ಯಾವ ರೀತಿ ಪಡೆಯಬೇಕು ಅದರ ದಾರಿಯ ಬಗ್ಗೆ ಮಾಹಿತಿ ನೀಡಿ ಸೇವೆ – ಸೌಲಭ್ಯ ಪಡೆಯಲು ಬೇಕಾಗುವ ದಾಖಲೆಯನ್ನು ಸಂಗ್ರಹಿಸಿ ಎಂ ಆರ್ ಡಬ್ಲ್ಯೂ ಗಳು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು. ಮುಖ್ಯ ಅತಿಥಿ ಯಾಗಿ ಆಗಮಿಸಿದ ಜಿಲ್ಲಾ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಸಿದ್ದು ಪಾಟೀಲ್ ಮೊಘಾ, ಜಿಲ್ಲಾ ಡಿ ಆರ್ ಟಿಬಿ ಸಕ್ಷಮ್ ಟಿಸ್ ಸಮಾಲೋಚಕ ಮಂಜುನಾಥ ಕಂಬಾಳಿಮಠ , ಎಂ ಆರ್ ಡಬ್ಲ್ಯು ಚಿಂಚೋಳ್ಳಿ ಶ್ರೀಮಂತ ಮಳಖೆಡ ವೇದಿಕೆ ಮೇಲೆ ಇದ್ದು ಮಾತನಾಡಿದರು.
ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಮಂಜೂರ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಂಘದ ಕಾರ್ಯದರ್ಶಿ ಅಶ್ವಥ್ ಕಟ್ಟಿಮನಿ, ಯು ಆರ್ ಡಬ್ಲ್ಯು ಅರುಣಕುಮಾರ ಮಡಿವಾಳ, ವೀರಶೆಟ್ಟಿ, ವಿನೋದ ನಾಟಿಕರ್ ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…