ಬಿಸಿ ಬಿಸಿ ಸುದ್ದಿ

ಸುರಪುರ:ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಧಮ್ಮ ದೀಕ್ಷಾ ಕಾರ್ಯಕ್ರಮ

ಇಂದು ನಡೆದ ಬೌದ್ಧ ಧಮ್ಮ ಸ್ವೀಕಾರ ಸಮಾರಂಭದಲ್ಲಿ 127 ಜನ ಅಂಬೇಡ್ಕರ್ ಅನುಯಾಯಿಗಳ ಕುಟುಂಬಸ್ಥರು ಹಿಂದು ಆಚರಣೆಗಳನ್ನು ಕೈಬಿಟ್ಟು ಬೌದ್ಧ ಧಮ್ಮ ಸ್ವೀಕರಿಸುವ ಮೂಲಕ ಬೌದ್ಧ ಅನುಯಾಯಿಗಳಾಗಿದ್ದಾರೆ. -ವರಜ್ಯೋತಿ ಬಂತೇಜಿ.

ಸುರಪುರ: ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ಹಾಗೂ ಸುರಪುರ ಮತ್ತು ಹುಣಸಗಿ ತಾಲೂಕಿನ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಬೌದ್ಧ ಧಮ್ಮ ದೀಕ್ಷಾ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ:ಬಿ.ಆರ್ ಅಂಬೇಡ್ಕರ್ ಅವರ ಮೊಮ್ಮಗಳು ರಮಾತಾಯಿ ಅಂಬೇಡ್ಕರ್ ಮಾತನಾಡಿ,ಇಂದು ದೇಶದಲ್ಲಿನ ದೀನ ದಲಿತ ಶೋಷಿತರ ಸ್ಥಿತಿ ಚಿಂತಾಜನಕವಾಗಿದೆ.ದೇಶದಲ್ಲಿ ಸತ್ಯವನ್ನು ಮಾತನಾಡಿದರೆ ಅವರನ್ನು ಜೈಲಿಗೆ ಕಳುಹಿಸುವ ಕಾರ್ಯ ನಡೆದಿದೆ.ಒಬ್ಬ ನಿಷ್ಠಾವಂತ ಲೇಖಕನಾಗಿರುವ ನನ್ನ ಪತಿ ಆನಂದ ತೇಲ್ತುಂಬ್ಡೆ ಅವರನ್ನು ಕಳೆದ ಎರಡು ವರ್ಷಗಳಿಂದ ಜೈಲಲ್ಲಿ ಇಡುವ ಮೂಲಕ ಸರಕಾರ ಅಟ್ಟಹಾಸ ಮೆರೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೇವಲ ನನ್ನ ಪತಿ ಮಾತ್ರವಲ್ಲದೆ ಇನ್ನು ಪ್ರಗತಿಪರ ವಿಚಾರವುಳ್ಳ 14 ಜನರನ್ನು ಜೈಲಲ್ಲಿಡಲಾಗಿದೆ.ಇಂತಹ ದುರಾಡಳಿತ ವ್ಯವಸ್ಥೆಯನ್ನು ಡಾ:ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಂದೆ ತಿಳಿದುಕೊಂಡು ನಾನು ಹಿಂದುವಾಗಿದ್ದರು ಹಿಂದುವಾಗಿ ಸಾಯಲಾರೆ ಎಂದು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದಾರೆ.ಅವರ ಅನುಯಾಯಿಗಳಾದ ನೀವುಗಳು ಇಂದು ಬೌಧ್ಧ ಧಮ್ಮವನ್ನು ಸ್ವೀಕರಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಹೋರಾಟಗಾರ ಮಾವಳ್ಳಿ ಶಂಕರ ಸೇರಿದಂತೆ ಅನೇಕ ಮುಖಂಡರು ಮಾತನಾಡಿ,ಇಂದು ದೇಶದಲ್ಲಿನ ದಲಿತರ ಸ್ಥಿತಿ ಚಿಂತಾಜನಕವಾಗಿದೆ.ಇದಕ್ಕೆ ತಾಜಾ ಉದಾಹರಣೆ ಎಂದರೆ ರಮಾತಾಯಿಯವರ ಪತಿ ಆನಂದ ತೇಲ್ತುಂಬ್ಡೆ ಅವರನ್ನು ಜೈಲಲ್ಲಿಟ್ಟಿರುವುದು ಸಾಕ್ಷಿಯಾಗಿದೆ.ಇದು ಮಾತ್ರವಲ್ಲದೆ ದೇವರ ಕೋಲು ಮುಟ್ಟಿದರು ಎನ್ನುವ ಕಾರಣಕ್ಕೆ ದಲಿತರ ಮೇಲೆ ಹಲ್ಲೆ ನಡೆಸಿ 25 ಸಾವಿರ ದಂಡ ಹಾಕಿರುವ,ಮಳೆ ಬಂತು ಎನ್ನುವ ಕಾರಣಕ್ಕೆ ದೇವಸ್ಥಾನದಲ್ಲಿ ಹೋಗಿ ನಿಂತರೆ ಅವರ ಮೇಲೆ ಹಲ್ಲೆ ನಡೆಸಿ 40 ಸಾವಿರ ದಂಡ ಹಾಕಿರುವಂತಹ ಘಟನೆಗಳನ್ನು ನೋಡಿದಾಗ ದೇಶದಲ್ಲಿನ ದಲಿತರ ಸ್ಥಿತಿ  ಹೇಗಿದೆ ಎಂದು ಅರ್ಥವಾಗಿದೆ.ಆದ್ದರಿಂದ ಇಂದು ಧಮ್ಮ ಸ್ವೀಕರಿಸಿರುವ ತಾವೆಲ್ಲರು ರಮಾತಾಯಿಯವರ ಬೆಂಬಲಕ್ಕೆ ನಿಲ್ಲಬೇಕು ಎಂದು ಕರೆ ನೀಡಿದರು.

ಇದಕ್ಕೂ ಮುನ್ನ ರಮಾತಾತಿ ಅಂಬೇಡ್ಕರ್ ಅವರನ್ನು ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಿಂದ ಗೋಲ್ಡನ್ ಕೇವ್ ಬುದ್ಧ ವಿಹಾರದ ವರೆಗೆ ಬೈಕ್ ರ್ಯಾಲಿ ಮೂಲಕ ಕರೆ ತರಲಾಯಿತು.ನಂತರ ನಡೆದ ದೀಕ್ಷಾ ಕಾರ್ಯಕ್ರಮದಲ್ಲಿ ವರಜ್ಯೋತಿ ಬಂತೇಜಿಯವರ ಸಾನಿಧ್ಯದಲ್ಲಿ ತ್ರಿಸರಣ,ಪಂಚಶೀಲ ಪಠಣ ನಡೆಸಿದರು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಕ್ಕು ಸಂಘದ ಬುಕ್ಕುಗಳು ಎಲ್ಲರಿಗೂ ಬೌಧ್ಧ ಧಮ್ಮ ದೀಕ್ಷೆಯನ್ನು ಹಾಗೂ ಭಾರತೀಯ ಬೌಧ್ಧ ಮಹಾಸಭಾದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಭಾಲ್ಕಿ ಧಮ್ಮ ದೀಕ್ಷೆ ಪಡೆಯುವವರಿಗೆ ಡಾ:ಬಿ.ಅಂಬೇಡ್ಕರರು ತಿಳಿಸಿದ 22 ಉಪದೇಶಗಳನ್ನು ಬೋಧಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ರಾಜ್ಯ ಸಂಚಾಲಕರಾದ ಪರಶುರಾಮ ನೀಲನಾಯಕ,ಉದಯಕುಮಾರ ತೆಲ್ಲೂರ್,ಎಣ್ಣೂರ ಶ್ರೀನಿವಾಸ,ಮಲ್ಲಪ್ಪ ಹೊಸಮನಿಕರ್,ಮರೆಪ್ಪ ಹಳ್ಳಿ,ಜಿಲ್ಲಾ ಸಂಘಟನೆಗಳ ಸಂಚಾಲಕರಾದ ಅಶೋಕ ಹೊಸ್ಮನಿ,ಮರೆಪ್ಪ ಚೆಟ್ಟರಕರ್,ಪಿಎಸ್‍ಐ ಕೃಷ್ಣಾ ಸುಬೇದಾರ,ಅಬಕಾರಿ ಉಪ ನಿರೀಕ್ಷಕಿ ಪೂಜಾ ಖರ್ಗೆ,ತಾ.ಪಂ ವ್ಯವಸ್ಥಾಪಕ ವೆಂಕೋಬ ಬಾಕ್ಲಿ ವೇದಿಕೆ ಮೇಲಿದ್ದರು. ಚಿಂತಕ ಬುದ್ಧಘೋಸ ದೇವೆಂದ್ರ ಹೆಗ್ಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು,ನಾಗಣ್ಣ ಕಲ್ಲದೇವನಹಳ್ಳಿ ಸ್ವಾಗತಿಸಿದರು,ರಾಜು ಕುಂಬಾರ ನಿರೂಪಿಸಿದರು,ರಾಹುಲ್ ಹುಲಿಮನಿ ವಂದಿಸಿದರು.ವಿವಿಧ ಮುಖಂಡರು ಹಾಗೂ ಸಾವಿರಾರು ಜನ ಬೌದ್ಧ ಅನುಯಾಯಿಗಳು ಭಾಗವಹಿಸಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

14 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

24 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

24 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

24 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago