ಶಹಾಬಾದ:ನಗರದ ಬಸವೇಶ್ವರ ವೃತ್ತದಲ್ಲಿ ಬಹುವರ್ಷಗಳಿಂದ ಸ್ಥಾಪನೆ ಮಾಡಲು ಉದ್ದೇಶಿರುವ ಬಸವಣ್ಣನವರ ಕಂಚಿನ ಪ್ರತಿಮೆ ಶುಕ್ರವಾರ ರಾತ್ರಿ ನಗರಕ್ಕೆ ಆಗಮಿಸಿದ್ದು, ನಗರದ ಎಲ್ಲಾ ಸಮಾಜದ ಬಂಧುಗಳಲ್ಲಿ ಸಂತೋಷ ಇಮ್ಮಡಿಗೊಳಿಸಿದೆ.ನಗರದ ಬಸವೇಶ್ವರ ವೃತ್ತದಲ್ಲಿ ವಾಹನದಲ್ಲಿ ತಂದ 14 ಅಡಿ ಎತ್ತರದ ಪಂಚಲೋಹದ ಅಶ್ವಾರೂಢ ಪ್ರತಿಮೆಯನ್ನು ಕಂಡ ಜನರು ವಿಳಂಬವಾದರೂ ಪ್ರತಿಮೆ ನಗರಕ್ಕೆ ಬಂದಿರುವುದು ಅವರಲ್ಲಿ ಎಲ್ಲಿಲ್ಲದ ಉಲ್ಲಾಸ ಮೂಡಿಸಿದೆ. ವೀರಶೈವ ಲಿಂಗಾಯತ ಸಮಾಜದ ಮುಖಂಡರು ಪ್ರತಿಮೆಗೆ ಸ್ವಾಗತ ಕೋರಿ, ಹೂಮಾಲೆ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ನಗರಸಭೆಯ ಪೌರಾಯುಕ್ತ ಅಶೋಕ ಬಿಲಗುಂದಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿ, ನಗರಸಭೆಯ ಸದಸ್ಯರಾದ ನಾಗರಾಜ ಕರಣಿಕ್, ಸೂರ್ಯಕಾಂತ ಕೋಬಾಳ, ಮುಖಂಡರಾದ ಅಣವೀರ ಇಂಗಿನಶೆಟ್ಟಿ, ಶಿವಕುಮಾರ ಇಂಗಿನಶೆಟ್ಟಿ, ಸಾಹೇಬಗೌಡ ಬೋಗುಂಡಿ, ಮಲ್ಲಿಕಾರ್ಜುನ ಚಂದನಕೇರಿ, ಗಿರಿಮಲ್ಲಪ್ಪ ವಳಸಂಗ, ಶಂಕರ ವಳಸಂಗ,ಕುಪೇಂದ್ರ ತುಪ್ಪದ್, ಎಇಇ ಶರಣು ಪೂಜಾರಿ, ಎಇ ಶಾಂತರೆಡ್ಡಿ ದಂಡಗುಲಕರ, ಶಿವಕುಮಾರ ನಾಟೇಕಾರ ಇತರರು ಇದ್ದರು.
ಹಿನ್ನೆಲೆ : 2015-16 ರಲ್ಲಿ ನಗರಸಭೆ ಅಧ್ಯಕ್ಷ ಗಿರೀಶ ಕಂಬಾನೂರ, ಉಪಾಧ್ಯಕ್ಷೆ ಮಹಾದೇವಿ ನಾಗಣ್ಣ ರಾಂಪೂರೆ ಅವಧಿಯಲ್ಲಿ ನಗರಸಭೆಯ ಎಸ್‍ಎಫ್‍ಸಿ ಯೋಜನೆಯಡಿ 15 ಲಕ್ಷ ರೂ. ಅನುದಾನದಲ್ಲಿ ಬಸವೇಶ್ವರ ಅಶ್ವಾರೂಢ ಪ್ರತಿಮೆ ಬಸವೇಶ್ವರ ವೃತ್ತದ ಸಮೀಪ ನಿರ್ಮಾಣ ಮಾಡಲು ನಗರಸಭೆಯ ಸಾಮನ್ಯ ಸಭೆಯಲ್ಲಿ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದ್ದರು.
ಅದರಂತೆ 2016-17 ರಲ್ಲಿ ಶಾಸಕ ಜಿ.ರಾಮಕೃಷ್ಣ, ಅಂದಿನ ನಗರಸಭೆಯ ಅಧ್ಯಕ್ಷರಾದ ಗೀತಾ ಸಾಹೇಬಗೌಡ ಬೋಗುಂಡಿ, ಉಪಾಧ್ಯಕ್ಷೆ ಲಕ್ಷ್ಮಿಬಾಯಿ ವೆಂಕಟೇಶ ಕುಸಾಳೆ ನೇತೃತ್ವದಲ್ಲಿ ಅಡಿಗಲ್ಲು ಹಾಕಲಾಗಿತ್ತು. ಬಸವೇಶ್ವರ ಮೂರ್ತಿಯ ಅಡಿಗಲ್ಲು ನಿರ್ಮಾಣಕ್ಕೆ ಸುಮಾರು 5 ಲಕ್ಷ ರೂ.ಅನುದಾನದಲ್ಲಿ ಕಾಮಗಾರಿ ಪ್ರಾರಂಭ ಮಾಡಲಾಗಿತ್ತು.ಆಗ ತಾಂತ್ರಿಕದೋಷದಿಂದ ಕಾಮಗಾರಿಯನ್ನು ನಿಲ್ಲಿಸಲಾಯಿತು.ಅಲ್ಲಿಂದ ಸುಮಾರು 7 ವರ್ಷಗಳವರೆಗೆ ಕಾಮಗಾರಿ ಮಾತ್ರ ನೆನೆಗುದಿಗೆ ಬಿದ್ದಿತ್ತು.
ಇದರಿಂದ ನಗರದ ಜನರಲ್ಲಿ ಅಸಮಾಧಾನ ವ್ಯಕ್ತವಾಗಿತ್ತು.ಜನಪ್ರತಿನಿಧಿಗಳು, ಮುಖಂಡರು ಕೇವಲ ದೊಡ್ಡ ಆಶ್ವಾಸನೆ ನೀಡುತ್ತಲೇ ಬರುತ್ತಿದ್ದರು ಹೊರತು ಕಾಮಗಾರಿ ಮಾತ್ರ ಪ್ರಾರಂಭವಾಗಿರಲಿಲ್ಲ. ಅಲ್ಲದೇ ಜನರು ಯಾವಾಗ ಬಸವೇಶ್ವರ ಮೂರ್ತಿ ಯಾವಾಗ ಪ್ರತಿಷ್ಠಾಪನೆಯಾಗುತ್ತದೆ ಎಂದು ಬಕ ಪಕ್ಷಿಯಂತೆ ಕಾಯುತ್ತ ಕುಳಿತಿದ್ದರು.
ಪ್ರಸಕ್ತ ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ, ಉಪಾಧ್ಯಕ್ಷೆ ಸಲೀಮಾಬೇಗಂ ಅವಧಿಯಲ್ಲಾದರೂ ಮಾಡಬೇಕೆಂದು ಜನರ ಆಗ್ರಹವಾಗಿತ್ತು. ಅಲ್ಲದೇ ಅಂದು ಕಾಯ್ದಿರಿಸಿದ ಅನುದಾನದಲ್ಲಿ ಈಗ ಪ್ರತಿಮೆ ಮಾಡಲು ಸಾಧ್ಯವಿಲ್ಲದ ಕಾರಣ ಕಾಮಗಾರಿ ವಿಳಂಬವಾಗಿರುವುದನ್ನು ಅರಿತು, 14 ಅಡಿ ಎತ್ತರದ ಪಂಚಲೋಹದ ಬಸವಣ್ಣನವರ ಅಶ್ವಾರೂಢ ಪ್ರತಿಮೆಗೆ ನಿರ್ಮಾಣ ಮಾಡಲು ನಗರಸಭೆಯ ಸಾಮನ್ಯ ಸಭೆಯಲ್ಲಿ ಶಾಸಕ ಬಸವರಾಜ ಮತ್ತಿಮಡು ಅವರು ಮುತುವರ್ಜಿ ವಹಿಸಿ ಅವರ ಸಮ್ಮುಖದಲ್ಲಿಯೇ ನಗರಸಭೆಯ ಅನುದಾನದಲ್ಲಿ ಹೆಚ್ಚುವರಿಯಾಗಿ ಸುಮಾರು 20 ಲಕ್ಷ ರೂ. ಅನುದಾನ ಕಾಯ್ದಿರಿಸಲಾಯಿತು.
ಮೂರ್ತಿಗೆ ಸುಮಾರು 43 ಲಕ್ಷ ರೂ.,ಅಡಿಗಲ್ಲಿಗೆ ಸುಮಾರು 8 ಲಕ್ಷ ರೂ ಕ್ರೀಯಾಯೋಜನೆ ಮಾಡಲಾಯಿತು. ಸದ್ಯ ಮೂರ್ತಿ ಅಡಿಗಲ್ಲಿನ ಮೇಲೆ ಕೂಡಿಸಿ, ಅನಾವರಣವಾದರೆ ಸಾಕು ಬಹು ದಿನಗಳ ಬೇಡಿಕೆ ಈಡೇರಿಸಿದಂತಾಗುತ್ತದೆ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…