ಬೆಳಗಾವಿ: ಇಂದಿನ ದಿನಗಳಲ್ಲಿ ವಿದ್ಯಾವಂತರೆ ಭವಿಷ್ಯ ಹೇಳುವವರೆ ಬಳಿ ಕ್ಯೂ ನಲ್ಲಿ ನಿಲ್ಲುತ್ತಿರುವುದು ದುರಂತ ಎಂದು ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ, ಮಾಜಿ ಸಚಿವ, ಶಾಸಕ ಸತೀಶ ಜಾರಕಿಹೊಳಿ ವಿಷಾದ ವ್ಯಕ್ತಪಡಿಸಿದರು.
ಮಾವನ ಬಂಧುತ್ವ ವೇದಿಕೆ, ಬಸವಪರ ಸಂಘಟನೆಗಳ ನೇತೃತ್ವದಲ್ಲಿ ಇಲ್ಲಿನ ಕುಮಾರ ಗಂಧರ್ವ ರಂಗಮಂದಿರಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಬಸವ ಪಂಚಮಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ನಮ್ಮ ಭವಿಷ್ಯ ನಮ್ಮ ಕೈಯಲ್ಲಿಯೇ ಇದೇ ಹೊರತು ಮತ್ಯಾರ ಕೈಯಲ್ಲಿಲ್ಲ. ಡಾಕ್ಟರ್, ಇಂಜಿನೀಯರ್ ಗಳು ತಮ್ಮ ಕೈಯನ್ನು ಭವಿಷ್ಯ ಹೇಳುವವರ ಬಳಿ ಚಾಚುತ್ತಿರುವುದು ವಿಷಾದ, ವಿದ್ಯಾವಂತಾದ ನಾವು ಮೌಢ್ಯವನ್ನು ತಿರಸ್ಕರಿಸಬೇಕು ದೇಶವನ್ನು ಅಭಿವೃದ್ದಿಯತ್ತ ಕೊಂಡೊಯ್ಯಬೇಕು. ಆ ನಿಟ್ಟಿನಲ್ಲಿ ಜಾಗೃತರಾಗ ಬೇಕಿದೆ. “ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತೆ ಮಹಿಳೆಯರು ಎಂದು ಗ್ರಂಥಾಲಯದ ಮುಂದೆ ಸಾಲಿನಲ್ಲಿ ನಿಲ್ಲುತವರೋ ಅಂದೇ ದೇಶ ಸುಧಾರಿಸುತ್ತದೆ”. ಮಹಿಳೆಯರು ಹೆಚ್ಚು ಜಾಗ್ರತರಾಗಬೇಕಿದೆ. ಪ್ರಶ್ನೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕಿದೆ ಎಂದರು.
ಯುವ ಜನತೆ ಇತಿಹಾಸ ಅರಿಯಲಿ ಎನ್ನುವ ಉದ್ದೇಶದಿಂದ ಕಳೆದ ನಾಲ್ಕೈದು ವರ್ಷದಿಂದ ಮಾನವ ಬಂದುತ್ವ ವೇದಿಕೆ ಸಂಘಟನೆ ಹಲವು ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ. ಆದರೆ ಕೆಲವರು ಇದನ್ನು ಧರ್ಮ ವಿರೋಧಿ, ಒಂದು ವರ್ಗದ ಬಗ್ಗೆ ಕೆಟ್ಟ ಪ್ರಚಾರ ಮಾಡಲಾಗುತ್ತಿದೆ ಎಂದು ಬಣ್ಣಿಸಲಾಗುತ್ತಿದೆ. ಯಾರು ಏನೇ ಅಂದರು ನಮ್ಮ ಹೋರಾಟ ನಿಲ್ಲದು. ದೇಶದ ಯುವ ಜನತೆಗೆ ಇತಿಹಾಸ ತಿಳಿಸುವುದೇ ನಮ್ಮ ಕಾರ್ಯಕ್ರಮದ ಉದ್ದೇಶ. ಈ ಹೋರಾಟ ನಿರಂತರ ಇರಲಿದೆ ಎಂದರು.
ಈ ಹಿಂದೆಯೂ ಹಲವು ಶರಣರು ಮೌಢ್ಯದ ವಿರುದ್ದ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಕೆಲವು ಸಲ ಮೌಢ್ಯವೇ ಗೆದ್ದಿರಬಹುದು.ಆದೆ ಹೋರಾಟ ನಿಂತಿಲ್ಲ. ಶೋಷಿತರ, ದಮನಿತರ ಪರ ಹೋರಾಡಿದ ಶರಣರ ಹತ್ಯೆ ಮಾಡಿದವರ ಹಿಂದೆ ದೇಶ ಓಡುತ್ತಿರುವುದು ವಿಷಾದ ಎಂದು ಶಾಸಕ ಸತೀಶ ಆತಂಕ ವ್ಯಕ್ತಪಡಿಸಿದರು.
ಅಂಬೇಡ್ಕರ್ ಅವರು ಈ ದೇಶದಲ್ಲಿ ಹುಟ್ಟದಿದ್ದರೆ ಇಂದು ನಾವ್ಯಾರು ಶಿಕ್ಷಣ ಪಡೆಯುತ್ತಿರಲಿಲ್ಲ. ಆಸ್ತಿ ಮಾಡುತ್ತಿರಲಿಲ್ಲ. ಸಾಮಜದಲ್ಲಿ ತಲೆ ಎತ್ತಿ ನಿಲ್ಲುವಂತಾಗುತ್ತಿರಲಿಲ್ಲ. ಅಂಬೇಡ್ಕರ್ ಅವರು ಬರೀ ದಲಿತರಿಗೆ ಮಾತ್ರ ಸೀಮಿತನಲ್ಲ. ಆತ ಇಡೀ ಜಗತ್ತಿನ ನಾಯಕ. ನಾವು ಮಾಡುವ ಕುಲ ಕಸಬುನಿಂದ ಜಾತಿ ಎಂಬ ಪರಿಕಲ್ಪನೆಯನ್ನು ಹುಟ್ಟಿಕೊಂಡಿದೆ. ಮೌಡ್ಯದ ಹೆಸರಲ್ಲಿ ಮುಗ್ದ ಜನರ ಮೇಲೆ ನಡೆಯುತ್ತಿರುವ ಶೋಷಣೆಯನ್ನು ಬೇರು ಸಮೇತ ಕಿತ್ತು ಹಾಕಬೇಕು ಎಂದು ಕರೆ ನೀಡಿದರು.
ನಾಗರ ಪಂಚಮಿ ಹೆಸರಲ್ಲಿ ಸಾವಿರಾರು ಲೀಟರ್ ಗಳಷ್ಟು ಹಾಲು ಪೋಲು ಮಾಡಲಾಗುತ್ತಿದೆ. ವೈಜ್ಞಾನಿಕವಾಗಿ ಹಾವು ಹಾಲು ಕುಡಿಯುವುದಿಲ್ಲ. ಹಾಲು ಕುಡಿಯುವುದಿಲ್ಲ ಎಂದು ಗೊತ್ತಿದ್ದರು ವ್ಯರ್ಥ ಮಾಡುತ್ತೇವೆ, ಸೇವಿಸಬೇಕಾದ ಆಹಾರವನ್ನು ಚೆಲ್ಲುತ್ತೇವೆ. ಚಲ್ಲಬೇಕಾದ ಆಹಾರವನ್ನು ಸೇವಿಸುತ್ತಿದ್ದೇವೆ. ಕೆಲವು ಆ ಮಟ್ಟಿಗೆ ನಮಲ್ಲಿ ಮೌಢ್ಯವನ್ನು ತುಂಬಿದ್ದಾರೆ. ದೇವರು, ಧರ್ಮ, ಮೌಢ್ಯದ ಹೆಸರಲ್ಲಿ ಮೋಸ ಮಾಡುವ ಪ್ರವೃತ್ತಿ ಇದೆ. ಶೋಷಣೆಗೆ ವ್ಯವಸ್ಥತಿವಾದ ಜಾಲವಿದೆ. ಇದರಿಂದ ನಾವು ಹಂತ ಹಂತವಾಗಿ ಹೊರಬರಬೇಕು. ಜನರಿಗೆ ಉಪಯುಕ್ತವಾಗು ನಿಟ್ಟಿನಲ್ಲಿ ಹಬ್ಬ, ಜಾತ್ರೆಗಳ ಆಚರಿಸಬೇಕು. ಆದರೆ ಇವುಗಳಿಂದ ನಿರಂತರ ಸಾಲದ ಸುಳಿಗೆ ಸಿಲುಕಬಾರದು ಎಂದರು.
ಈ ವಿಶ್ವವಿದ್ಯಾಲಯದಲ್ಲಿ ನಿರಂತರ ಶಾಹು ಮಹಾರಾಜ್, ಪರಿಯಾರ್ ರಾಮಸ್ವಾಮಿ, ಬುದ್ದ, ಬಸವ, ಅಂಬೇಡ್ಕರ್ ಸೇರಿ ಮಹಾನ್ ನಾಯಕರ ಬಗ್ಗೆ ಅಧ್ಯಯನ ನೀಡಲಿದೆ. ಬುದ್ದಿ ಜೀವಿಗಳು, ಸಾಹಿತಿಗಳನ್ನು ಆಹ್ವಾನಿಸಿ ದೇಶದ ಇತಿಹಾಸ ಮರುಕಳಿಸುವಂತೆ ಮಾಡಲಾಗವುದು. ಸುಸಜ್ಜಿತ ಗ್ರಂಥಾಲಯ, ಕಟ್ಟಡದೊಂದಿಗೆ ಇನ್ನು ಕೇವಲ ಮೂರು ವರ್ಷದಲ್ಲಿ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಲಿದೆ. ಭೂಮಿ ಇರುವವರೆಗೆ ನಮ್ಮ ವಿಶ್ವವಿದ್ಯಾಲಯ ಶಾಶ್ವತವಾಗಿ ಇರಲಿದೆ ಎಂದು ಹೇಳಿದರು.
ಸಾಹಿತಿ ವಿಶ್ವಾರಾದ್ಯ ಸತ್ಯಂಪೇಟೆ ಉಪನ್ಯಾಸ ನೀಡಿದರು. ಪ್ರಭುಲಿಂಗ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಬಸವದಳ, ಹಿರಿಯ ಪತ್ರಕರ್ತ ಆರ್. ಎಸ್. ದರ್ಗೆ, ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್ ಮತ್ತಿತರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…