ಕನ್ನಡ ಸಾಹಿತ್ಯಕ್ಕೆ ಕವಿರಾಜ ಮಾರ್ಗ, ಮಿತಾಕ್ಷರ, ದಾಸ, ವಚನ ಹೀಗೆ ಹಲವು ಮೊದಲುಗಳನ್ನು ಕೊಡುಗೆಯಾಗಿ ನೀಡಿದ ಕಲ್ಯಾಣ ಕರ್ನಾಟಕ ನೆಲ ಗಜಲ್ ಹಾಗೂ ಹೈಕು ಕಾವ್ಯ ಪ್ರಕಾರಗಳನ್ನು ಕೂಡ ನೀಡಿರುವುದು ಈ ಭಾಗದ ಸಾಹಿತ್ಯಕ ಮತ್ತು ಸಾಂಸ್ಕøತಿಕ ಶ್ರೀಮಂತಿಕೆಯನ್ನು ತೋರಿಸಿಕೊಡುತ್ತದೆ. -ಕೆ.ಬಿ. ಬ್ಯಾಳಿ, ಹಿರಿಯ ಹೈಕು ಕವಿ, ಕೊಪ್ಪಳ.
ಕಲಬುರಗಿ: ನಮ್ಮ ಸಾಹಿತ್ಯ, ಸಂಸ್ಕತಿ ಒಟ್ಟಿಗೆ ವಿಶ್ವದ ಜೊತೆಗೆ ಕೂಡಿ ಹೊಸತನ ಹುಟ್ಟು ಹಾಕುವುದು ಕಲ್ಯಾಣ ಕರ್ನಾಟಕದ ಮಣ್ಣಿನ ಗುಣ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ದಯಾನಂದ ಅಗಸರ ಅಭಿಪ್ರಾಯ ಪಟ್ಟರು.
ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಕರ್ನಾಟಕ ಹೈಕು ಪರಿಷತ್ ಶನಿವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯದಲ್ಲಿ ಮೊದಲ ಬಾರಿಗೆ 9 ಹೈಕು ಸಂಕಲನಗಳ ಜನಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರನ್ನು ಸೇರಿಸಿಕೊಂಡು ಹೊಸತನದ ಸಾಹಿತ್ಯ ಸೃಷ್ಟಿ ಮಾಡಲು ಹೊರಟಿರುವ ಹೈಕು ತಂಡ ಏನಾದರೂ ಹೊಸತನ ಕೊಡಬೇಕೆಂಬ ಉಮೇದಿನಲ್ಲಿದೆ ಎಂದು ತಿಳಿಸಿದರು.
ಕೃತಿಗಳನ್ನು ಬಿಡುಗಡೆ ಮಾಡಿ ಕೃತಿ ಕುರಿತು ಮಾತನಾಡಿದ ಕೊಪ್ಪಳದ ಹಿರಿಯ ಹೈಕು ಕವಿ ಕೆ.ಬಿ. ಬ್ಯಾಳಿ ಮಾತನಾಡಿ, 9 ಕವಿಗಳು ರಚಿಸಿದ 9 ಕೃತಿಗಳು ವರಕವಿ ಬೇಂದ್ರೆಯವರ ಸಂಖ್ಯಾಶಾಸ್ತ್ರ ವ್ಯಾಮೋಹ ತೋರಿಸಿಕೊಡುವಂತಿದ್ದು, ಹೈಕು ಸಮ್ಮೇಳನದ ಜೊತೆಗೆ ಅಂಕ ಕಾವ್ಯವನ್ನು ಸಹ ನೆನಪಿಸುವಂತಿದೆ ಎಂದು ಹೇಳಿದರು.
ಬಿಡುಗಡೆಗೊಂಡಿರುವ ಇಲ್ಲಿನ ಒಂಭತ್ತು ಕೃತಿಗಳು ಹೈಕು ಕಾವ್ಯದ ನಿಯಮಗಳು ಪಾಲಿಸಿದಂತೆ ಕಂಡು ಬಂದರೂ ಕೆಲವರು ಹೊಸ ಪ್ರಯೋಗಕ್ಕೆ ಸಾಕ್ಷಿಯಾಗಿದ್ದಾರೆ ಎಂದೆನಿಸುತ್ತದೆ. ಹೈಕು ಜಪಾನ್ ದೇಶದ ಸೃಷ್ಟಿಯ ಮಗು. ಆ ಮಗುವನ್ನು ಮೊದಲು ಇಂಗ್ಲಿμï ನವರು, ಆ ಮೇಲೆ ಹಿಂದಿಯವರು, ಇದೀಗ ನಾವು ಕೂಡ ಎತ್ತಿ ಹಾಡಿಸುತ್ತಿದ್ದೇವೆ. ಈ ಮಗು ಇನ್ನಷ್ಟು ಮುದ್ದಾಗಿ ಬೆಳೆಯಲಿ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ರಾಯಚೂರಿನ ಕವಿ ವೀರ ಹನುಮಾನ ಮಾತನಾಡಿ, ಹೊಸತನದ ಹುಡುಕಾಟ ನಮ್ಮ ತುಡಿತವಾಗಬೇಕು. ಆ ನಿಟ್ಟಿನಲ್ಲಿ ಇಂದಿನ ಸಮಾರಂಭ ನಾಂದಿ ಹಾಡಿದೆ. ಈ ಬಗ್ಗೆ ಇನ್ನಷ್ಟು ಚರ್ಚೆ, ವಿಚಾರ ಸಂಕಿರಣ ನಡೆಸಿ ಹೈಕು ಮತ್ತು ತಾಂಕಾ ಸಮ್ಮೇಳನ ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆಯಲ್ಲಿ ವೀರಹನುಮಾನ-ಗುಲ್ಮೋಹರ್, ವೀರಪ್ಪ ನಿಂಗೋಜಿ- ಕರವೀರನ ಹಾಯ್ಕುಗಳು, ಸಿದ್ಧರಾಮ ಹೊನ್ಕಲ್- ಹೊನ್ನಗರಿ, ಮನೋಜ- ಮನೋಜ್ಞ ಹೈಕುಗಳು, ಕೆ. ಸುನಂದಾ-ಭಾವಸ್ಪುರಣ, ಎ.ಎಸ್. ಮಕಾನದಾರ-ಉಸಿರ ಗಂಧ ಸೋಕಿ, ಸಿದ್ಧಲಿಂಗಪ್ಪ ಬೀಳಗಿ- ಸಾವಿರದ ಸಾಲುಗಳು, ಶಿವಲೀಲಾ ಡೆಂಗಿ-ಮಡಿಲ ಮುತ್ತುಗಳು, ಮಹಿಪಾಲರೆಡ್ಡಿ ಮುನ್ನೂರ- ಬೆಳಕು ತಾಕಿದ ಬೆರಳು ಕೃತಿಗಳು ಜನಾರ್ಪಣೆಗೊಂಡವು. ಮಹಿಪಾಲರೆಡ್ಡಿ ಮುನ್ನೂರ ನಿರೂಪಿಸಿದರು. ಶಿವಲೀಲಾ ಡೆಂಗಿ ಸ್ವಾಗತಿಸಿದರು. ಸಿದ್ಧರಾಮ ಹೊನ್ಕಲ್ ಪ್ರಾಸ್ತಾವಿಕ ಮಾತನಾಡಿದರು. ಸುಚಿತ್ರಾ ರತ್ನಾಕರ ಪ್ರಾರ್ಥನಾ ಗೀತೆ ಹಾಡಿದರು. ಸಿದ್ದಲಿಂಗಪ್ಪ ಬೀಳಗಿ ವಂದಿಸಿದರು.
ನಾಗರಾಜ ಜಮುದ್ರಖಾನಿ, ಬಸವರಾಜ ಉಪ್ಪಿನ್, ಮಹಾದೇವ ಪಾಟೀಲ, ಸಂಧ್ಯಾ ಹೊನಗುಂಟಿಕರ, ಡಾ. ವಿಜಯಕುಮಾರ ಪರೂತೆ, ಡಾ. ಮಲ್ಲಿನಾಥ ತಳವಾರ ಇತರರಿದ್ದರು.
ಇಲ್ಲಿ ಲೇಖಕರೇ ಸೆಲೆಬರಿಟಿಗಳು, ಅವರಲ್ಲಿ ಒಬ್ಬರು ನಿರೂಪಿಸಿದರೆ, ಮತ್ತೊಬ್ಬರು ಸ್ವಾಗತಿಸಿದರು. ಮಗದೊಬ್ಬರು ಪ್ರಾಸ್ತಾವಿಕ, ವಂದನಾರ್ಪಣೆ ಹೀಗೆ ಎಲ್ಲವೂ ವೇದಿಕೆಯಲ್ಲಿರುವವರೇ ನಿರ್ವಹಿಸುವುದು ಕಂಡು ಬಂತು. ಶಾಲು ಸನ್ಮಾನದ ಬದಲು ಕಾಟನ್ ಟವೆಲ್, ಪುಸ್ತಕ ಕಾಣಿಕೆ ನೀಡಿದ್ದೂ ಹೊಸತನವೆನಿಸಿತ್ತು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…