ಅಡಿಗಲ್ಲಿನ ಮೇಲೆ ಬಸವಣ್ಣನವರ ಮೂರ್ತಿ ಕೂಡಿಸುವ ಕಾರ್ಯಕ್ಕೆ ಮತ್ತಿಮಡು ಚಾಲನೆ

  • ಬಸವಣ್ಣನವರ ಪ್ರತಿಮೆಗೆ ಹೂಮಾಲೆ ಹಾಕಿದ ಮತ್ತಿಮಡು /14 ಅಡಿ ಬಸವಣ್ಣನವರ ಅಶ್ವಾರೂಢ ಪ್ರತಿಮೆಗೆ

ಶಹಾಬಾದ:ನಗರದ ಬಸವೇಶ್ವರ ವೃತ್ತದಲ್ಲಿ ಬಂದ 14 ಅಡಿ ಎತ್ತರದ ಪಂಚಲೋಹದ ಅಶ್ವಾರೂಢ ಪ್ರತಿಮೆಯನ್ನು ಅಡಿಗಲ್ಲಿನ ಮೇಲೆ ಕೂಡಿಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಶನಿವಾರ ಶಾಸಕ ಬಸವರಾಜ ಮತ್ತಿಮಡು ಅವರು ಬಸವಣ್ಣನವರ ಪ್ರತಿಮೆಗೆ ಹೂಮಾಲೆ ಹಾಕಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು, ಸಾಮಾಜಿಕ ಕ್ರಾಂತಿಯ ಮೂಲಕ ಸಮಾಜದಲ್ಲಿ ಸಮಾನತೆಗಾಗಿ ಹೋರಾಡಿ ತಮ್ಮ ತತ್ವಾದರ್ಶಗಳ ಮೂಲಕ ಮನೆಮಾತಾದವರು ಅಣ್ಣ ಬಸವಣ್ಣ. 12ನೇ ಶತಮಾನದಲ್ಲಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮುಖೇನ ಕಾಯಕವೇ ಕೈಲಾಸ ಎಂದು ಸಾರಿದರು.

ಜಾತಿರಹಿತ ಸಮಾಜವನ್ನು ನಿರ್ಮಾಣ ಮಾಡುವುದರ ಮೂಲಕ ಎಲ್ಲರನ್ನು ಅಪ್ಪಿಕೊಂಡು ಒಪ್ಪಿಕೊಂಡವರು ಬಸವಣ್ಣನವರು. ಅಂತಹ ಮಹಾನ್ ಪುರುಷರ ಪ್ರತಿಮೆ ನಿರ್ಮಾಣ ನನ್ನ ಅವಧಿಯಲ್ಲಿ ಮಾಡುತ್ತಿರುವುದು ನನಗೆ ಅತೀವ ಸಂತೋಷವಾಗಿದೆ.ಸುಮಾರು ವರ್ಷಗಳಿಂದ ಪ್ರತಿಮೆ ನಿರ್ಮಾಣ ಮಾಡಿಕೊಡಬೇಕೆಂದು ಒತ್ತಾಯ ಎಲ್ಲಾ ಸಮಾಜದ ಬಂಧುಗಳು ಕೇಳುತ್ತಾ ಬಂದಿದ್ದಾರೆ.

ವಿಳಂಬವಾದರೂ ಪ್ರತಿಮೆ ನಗರಕ್ಕೆ ಬಂದಿರುವುದು ಅವರಲ್ಲಿ ಎಲ್ಲಿಲ್ಲದ ಉಲ್ಲಾಸ ಮೂಡಿಸಿದೆ. ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಇದರಿಂದ ಬಸವ ಅನುಯಾಯಿಗಳಿಗೆ ಎಲ್ಲಿಲ್ಲದ ಅಸಮಾಧಾನ ಉಂಟಾಗಿತ್ತು. ಅವರ ಒತ್ತಾಯಕ್ಕೆ ಸ್ಪಂದಿಸಿ 14 ಅಡಿ ಎತ್ತರದ ಪಂಚಲೋಹದ ಬಸವಣ್ಣನವರ ಅಶ್ವಾರೂಢ ಪ್ರತಿಮೆಗೆ ನಿರ್ಮಾಣ ಮಾಡಲು ನಗರಸಭೆಯ ಸಾಮನ್ಯ ಸಭೆಯಲ್ಲಿ ಮುತುವರ್ಜಿ ವಹಿಸಿ ನನ್ನ ಸಮ್ಮುಖದಲ್ಲಿಯೇ ನಗರಸಭೆಯ ಅನುದಾನದಲ್ಲಿ ಹೆಚ್ಚುವರಿಯಾಗಿ ಸುಮಾರು 20 ಲಕ್ಷ ರೂ. ಅನುದಾನ ಕಾಯ್ದಿರಿಸಲು ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ಕಾಯ್ದಿರಿಸಲಾಯಿತು. ಮೂರ್ತಿಗೆ ಸುಮಾರು 43 ಲಕ್ಷ ರೂ.,ಅಡಿಗಲ್ಲಿಗೆ ಸುಮಾರು 8 ಲಕ್ಷ ರೂ ಕ್ರೀಯಾಯೋಜನೆ ಮಾಡಲಾಯಿತು. ಸದ್ಯ ಮೂರ್ತಿ ಅಡಿಗಲ್ಲಿನ ಮೇಲೆ ಕೂಡಿಸಲಾಗಿದ್ದು, ಕೆಲವೇ ದಿನಗಳಲ್ಲಿ ಎಲ್ಲಾ ಕಾರ್ಯಗಳು ಸಂಪೂರ್ಣವಾಗಲಿವೆ. ಪ್ರತಿಮೆ ಅನಾವರಣವಾದರೆ ಸಾಕು ಇಲ್ಲಿನ ಬಹು ದಿನಗಳ ಬೇಡಿಕೆ ಈಡೇರಿಸಿದಂತಾಗುತ್ತದೆ ಎಂದು ಹೇಳಿದರು.

ನಗರಸಭೆಯ ಪೌರಾಯುಕ್ತ ಅಶೋಕ ಬಿಲಗುಂದಿ,ಎಇಇ ಶರಣು ಪೂಜಾರಿ,ಎಇಇ ಮುಜಾಮಿಲ್ ಅಲಂ, ಎಇ ಶಾಂತರೆಡ್ಡಿ ದಂಡಗುಲಕರ್, ಅಣವೀರ ಇಂಗಿನಶೆಟ್ಟಿ, ಶಿವಕುಮಾರ ಇಂಗಿನಶೆಟ್ಟಿ, ಸಾಹೇಬಗೌಡ ಬೋಗುಂಡಿ, ಮಲ್ಲಿಕಾರ್ಜುನ ವಾಲಿ, ಚನ್ನಪ್ಪ ಕುಂಬಾರ, ಶಂಕರ ವಳಸಂಗ, ಸೂರ್ಯಕಾಂತ ಕೋಬಾಳ, ಶಿವುಗೌಡ, ನಾಗರಾಜ ಮೇಲಗಿರಿ, ನಿಂಗಣ್ಣ ಹುಳಗೋಳಕರ್,ಶಿವಕುಮಾರ ನಾಟೇಕಾರ, ಗಿರಿಮಲ್ಲಪ್ಪ ವಳಸಂಗ, ಕುಪೇಂದ್ರ ತುಪ್ಪದ್, ಕನಕಪ್ಪ ದಂಡಗುಲಕರ್, ಭೀಮರಾವ ಸಾಳುಂಕೆ, ಮಹಾದೇವ ಗೊಬ್ಬೂರಕರ್, ಚಂದ್ರಕಾಂತ ಗೊಬ್ಬೂರಕರ್, ಭೀಮಯ್ಯ ಗುತ್ತೆದಾರ, ಬಸವರಾಜ ಗುತ್ತೆದಾರ ಅಪಕಾರಿ,ಶಂಕರ ಕುಸಾಳೆ, ಸಂತೋಷ ಪಾಟೀಲ ಹಳೆಶಹಾಬಾದ,ನಾಗಣ್ಣ ರಾಂಪೂರೆ, ಸತೀಶ ರಾಠಿ,ಬಾಬುರಾವ ಪವಾರ, ಅಶೋಕ ಜಿಂಗಾಡೆ, ಸದಾನಂದ ಕುಂಬಾರ,ಲಿಂಗರಾಜ ಮಲಕೂಡ,ಬಸವರಾಜ ಬಿರಾದಾರ ಇತರರು ಇದ್ದರು.

ಬಸವಣ್ಣನವರ ಮೂರ್ತಿ ಸ್ಥಾಪನೆ ಮಾಡುವುದು ವೀರಶೈವ ಸಮಾಜದ ಅಧ್ಯಕ್ಷರಾಗಿದ್ದ ದಿ.ಸಂತೋಷಕುಮಾರ ಇಂಗಿನಶೆಟ್ಟಿ ಅವರ ಕನಸಾಗಿತ್ತು.ಅವರ ಕನಸನ್ನು ನನಸು ಮಾಡಲು ಸಹಕರಿಸಿದ ನಗರಸಭೆಯ ಪದಾಧಿಕಾರಿ, ಅಧಿಕಾರಿ, ಸರ್ವ ಸದಸ್ಯರಿಗೆ ಹಾಗೂ ಶಹಾಬಾದ ನಾಗರಿಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೆವೆ- ಅಖಿಲ ಭಾರತ ವೀರಶೈವ ಸಮಾಜ ಶಹಾಬಾದ.

emedialine

Recent Posts

ಪತ್ರಕರ್ತ ಮಣೂರರಿಗೆ ಟಿಎಸ್‍ಆರ್ ಪ್ರಶಸ್ತಿ ಪ್ರದಾನ

ಕಲಬುರಗಿ: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ'ದ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ಶ್ರೀಕಾಂತಾಚಾರ್ಯ ಆರ್. ಮಣೂರ ಅವರಿಗೆ ಬುಧವಾರ ಸಂಜೆ ಬೆಂಗಳೂರಿನಲ್ಲಿ…

2 mins ago

ನವರಾತ್ರಿ ಮಹೋತ್ಸವದ ನಿಮಿತ್ತ ದೇವಿ ಪೂಜಾ ಕಾರ್ಯಕ್ರಮ

ಕಲಬುರಗಿ; ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಶ್ರೀ ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಮತ್ತು ಭಾವಸರ್ ಕ್ಷತ್ರಿಯ…

6 mins ago

ಶ್ರೀ ಭವಾನಿ 1ನೇ ದಿನದ ಪುರಾಣ, ಕಳಸ ರೋಹಣ

ಕಲಬುರಗಿ: ನಗರದ ಕುವೆಂಪು ಕಾಲೋನಿ ಹಾಗೂ ಕಲ್ಯಾಣ ನಗರದದಲ್ಲಿ ಶ್ರೀ ಭವಾನಿ 1ನೇ ದಿನದ ಪುರಾಣ ಕಾರ್ಯಕ್ರಮ ಹಾಗೂ ದೇವಿಯ…

11 mins ago

ಸಿದ್ದರಾಮಯ್ಯನವರು ರಾಜೀನಾಮೆ ನೀಡುವ ಅವಶ್ಯಕತೆಯಿಲ್ಲ್ಲ –ಮುದ್ದಾ

ಶಹಾಬಾದ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಕೊಡಬೇಕು ಎಂದು ಹೇಳಲು ಬಿಜೆಪಿಗರಿಗೆ ಯಾವ ನೈತಿಕತೆ ಇಲ್ಲ.ಸಿದ್ದರಾಮಯ್ಯನವರು ರಾಜೀನಾಮೆ ನೀಡುವ…

15 mins ago

ಅಹಿಂಸೆಯ ದಾರಿಯಲ್ಲಿ ನಡೆದಾಗ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯ

ಶಹಾಬಾದ: ಇಡಿ ವಿಶ್ವವವು ಗಾಂಧಿಜೀ ಅವರ ಸತ್ಯ ಮತ್ತು ಅಹಿಂಸೆಯ ದಾರಿಯಲ್ಲಿ ನಡೆದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯವೆಂದು…

20 mins ago

ನಾನು ಆಕಾಂಕ್ಷಿ ಅಧ್ಯಕ್ಷ ಸ್ಥಾನ ಸಿಗುವ ವಿಶ್ವಾಸವಿದೆ; ಕೋರವಿ

ಕಾಳಗಿ: ಈ ಹಿಂದೆ ಕೇಳಿ ಬಂದ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಬದಲಾವಣೆ ಮಾಡಲು ಪಕ್ಷ ಕೈಗೊಂಡ…

2 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420