ವಿಶಾಲವಾದ ತಳಹದಿಯ ಮೇಲೆ ಕಟ್ಟಿರುವ ಬಾಂಸೆಫ್ ಭಾರತದ ಮೂಲನಿವಾಸಿಗಳ ಬಗ್ಗೆ ನಿಜವಾದ ಕಾಳಜಿ ಹೊಂದಿದ್ದು, ಪ್ರಯಿತಾಲ್ಲೂಕು ಮಟ್ಟದಲ್ಲಿಇದರ ಶಾಖೆಗಳನ್ನು ಆರಮಭಿಸುವ ಮೂಲಕ ನಮ್ಮಇತಿಹಾಸ ನಾವೇ ಬರೆದುಕೊಳ್ಳುವುದು ಹಾಗೂ ನಮ್ಮ ಭವಿತವ್ಯ ನಾವೇ ಕಟ್ಟಿಕೊಳ್ಳುವುದು ಅನಿವಾರ್ಯವಾಗಿದೆ. -ಪ್ರೊ.ಅರವಿಂದ ಮಾಲಗತ್ತಿ, ಬೆಂಗಳೂರು.
ಕಲಬುರಗಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಮುದಾಯದವರಿಗೆ ಡಾ. ಅಂಬೇಡ್ಕರ್‍ತತ್ವಚಿಂತನೆ ನಮ್ಮದು ಎಂಬ ಮನೋಭಾವ ಬಂದಾಗ ಮಾತ್ರ ಸಮುದಾಯಗಳ ಉನ್ನತೀಕರಣ ಸಾಧ್ಯಎಂದು ಹಿರಿಯ ಸಾಹಿತಿ ಹಾಗೂ ಸಾಮಾಜಿಕ ಚಿಂತಕ ಪ್ರೊ. ಅರವಿಂದ ಮಾಲಗತ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದಕನ್ನಡ ಭವನದಲ್ಲಿಬಾಂಸೆಫ್ ಹಾಗೂ ಯುನಿಟಿಆಫ್ ಮೂಲ ನಿವಾಸಿ ಸಂಘವು ಭಾನುವಾರ ಆಯೋಜಿಸಿದ್ದ 15ನೇ ಕರ್ನಾಟಕರಾಜ್ಯಅಧಿವೇಶನ ಉದ್ಘಾಟಿಸಿ ಮಾತನಾಡಿದಅವರು, ಮನುವಾದದಲ್ಲಿ ಹಿಂದುಗಳಿಗೆ ರಕ್ಷಣೆಇಲ್ಲ. ನಮ್ಮದೇಆದಇತಿಹಾಸ ಕಟ್ಟಿಕೊಳ್ಳುವುದು ಅಗತ್ಯವಿದೆಎಂದುಅಂಬೇಡ್ಕರ್ ಪ್ರತಿಪಾದಿಸಿದರು. ಅವರ ಆಲೋಚನಾ ಕ್ರಮಅನುಸರಿಸುವುದುಅಗತ್ಯವಿದೆಎಂದು ತಿಳಿಸಿದರು.
ಬಾಂಸೆಫ್ ಹಾಗೂ ಯುನಿಟಿಆಫ್ ಮೂಲನಿವಾಸಿ ಸಿ.ಇ.ಸಿ.ಸದಸ್ಯ ಸುಭಾಷ ಶೀಲವಂತ ಮಾತನಾಡಿ, 75ನೇ ವರ್ಷದ ಸ್ವಾತಂತ್ರ್ಯದಅಮೃತ ಮಹೋತ್ಸವಆಚರಿಸುತ್ತಿದ್ದೇವೆ. ಆದರೆ ಇಂದಿಗೂ ದಲಿತ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದ ಮಹಿಳೆಯರ ಮೇಲೆ ಅತ್ಯಾಚಾರ, ಅನ್ಯಾಯ, ದೌರ್ಜನ್ಯ ನಡೆಯುತ್ತಿರುವುದು ಬಹಳ ದುರಂತದ ಸಂಗತಿ.ಭವಿತವ್ಯದದೃಷ್ಟಿಯಿಂದ ನಾವು ಸಾಧಿಸಿದ್ದು ಏನೂ ಇಲ್ಲ. ಗುಲಾಮಗಿರಿ ಮನೋಭಾವನೆಯಿಂದಹೊರ ಬರಬೇಕುಎಂದು ತಿಳಿಸಿದರು.
ಡಾ. ಅಂಬೇಡ್ಕರ್‍ಅವರಿಗೆ ಕೇವಲ ದಲಿತರ ಮೇಲಷ್ಟೇ ಕಾಳಜಿ ಇರಲಿಲ್ಲ. ಅವರಿಗೆ ಹಿಂದುಳಿದ ಸಮುದಾಯಗಳ ಮೇಲೂ ಅಗಾಧ ಪ್ರೀತಿ, ಕಾಳಜಿ ಇತ್ತು.ಅಂತೆಯೇಅವರು, ಹಿಂದುಳಿದ ಸಮುದಾಯದವರುಆಡಳಿತದ ಆಯಕಟ್ಟಿನ ಮೇಲೆ ಕುಳಿತು ತಮ್ಮ ಸಮುದಾಯದ ಬಗ್ಗೆ ಯೋಜನೆ ರೂಪಿಸಿ ಜಾರಿಗೆತರಲುಒತ್ತಡ ಹೇರಬೇಕುಎಂದು ಹೇಳಿದ್ದರು ಎಂದು ವಿವರಿಸಿದರು.
ಸೊನ್ನ ವಿರಕ್ತ ಮಠದಡ.ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಬಾಂಸೆಫ್ ಹಾಗೂ ಯುನಿಟಿಆಫ್ ಮೂಲನಿವಾಸಿರಾಷ್ಟ್ರೀಯ ಪ್ರಚಾರಕಎನ್.ಬಿ. ಕುರನೆಅಧ್ಯಕ್ಷತೆ ವಹಿಸಿದ್ದರು.ತಿಮ್ಮಯ್ಯ ಪುರ್ಲೆ, ಡಾ.ಚಂದ್ರಶೇಖರದೊಡ್ಡಮನಿ, ಬಾಬುರಾವಚಿಮಕೋಡೆ, ಡಾ.ಸುನಿಲಕುಮಾರ ವಂಟಿ, ನರಸಪ್ಪರಂಗೋಲಿ, ರಂಜಿತ್ ಮಾಳಗೆ, ಬಿಸಲಪ್ಪಕಟ್ಟಿಮನಿ, ಜೆ.ಮಲ್ಲಪ್ಪಇತರರು ವೇದಿಕೆಯಲ್ಲಿದ್ದರು.
ಡಾ. ವಿಠ್ಠಲ್ ವಗ್ಗನ್, ಅಂಬಣ್ಣಜೀವಣಗಿ, ಮಾರುತಿಗಂಜಗಿರಿ, ರಮೇಶ ಲೋಹಾರ, ವಿನೋದಜನವೆರಿ, ಖಲಿಳ್ ಕೇದಾರಿ ಸೇರಿದಂತೆ ನೂರಾರುಜನ ಭಾಗವಹಿಸಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…