ಕಲಬುರಗಿ: ಕಾವ್ಯವೆಂಬ ಕಡಲ ಒಡಲಿಗೆ ಕವಿಗಳು ನಿಮ್ಮ ಕೊಡುಗೆ ನೀಡಬೇಕೆಂದರೆ ಭೂತದ ಕುರಿತ ಅರಿವಿನಿಂದ ವರ್ತಮಾನ ಭವಿಷತ್ ಕುರಿತ ಚಿಂತನೆ ಇರಬೇಕಾಗುತ್ತದೆ. ಸಾಂಪ್ರದಾಯವೆಂಬ ಸೆಲೆಯನ್ನು ಅಭ್ಯಶಿಸಿ ಪರಿವರ್ತನಾಶೀಲತೆ ಬೆಳೆಸಿಕೊಳ್ಳಬೇಕು. ಕವಿಯಾದವರು ಬದಲಾಗುತ್ತಿರುವ ಹಾಗೂ ಬೆಳೆಯುತ್ತಿರುವ ತಂತ್ರಜ್ಞಾನಕ್ಕೆ ಹೊಂದಿಕೊಂಡು ಅದರೊಂದಿಗೆ ಹೆಜ್ಜೆ ಹಾಕಬೇಕಾಗುತ್ತದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದಲ್ಲಿ ಆಯೋಜಿಸಿದ `ಕಾವ್ಯ ಕಮ್ಮಟ-2022′ ನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾತೃ ಹೃದಯವನ್ನು ಹೊಂದಿದ ಕವಿಗಳು ಸೂಪ್ತ ಪ್ರಜ್ಞೆಯೊಂದಿಗೆ ಜಾಢ್ಯವನ್ನು ಕಳಚಿ ಹೊಸತನ ಹುಡುಕಬೇಕು. ಲೇಖಕರ ಕಾವ್ಯ ವಿಮರ್ಶೆಗೆ ಒಳಗಾಗಬೇಕು. ವಿಮರ್ಶಕ ಮತ್ತು ಕವಿ ಸಾಹಿತ್ಯ ಕ್ಷೇತ್ರದ ಎರಡು ಕಣ್ಣುಗಳು. ಅವರು ಪರಸ್ಪರ ಸಮಾಜವನ್ನು ಪರಿಶೋಧಿಸಬೇಕು. ಬೇಂದ್ರೆ, ಕುವೆಂಪು, ಅಡಿಗ ಮುಂತಾದ ಕವಿಗಳು ಇದಕ್ಕೆ ನಿದರ್ಶನವಾಗಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಇಂದಿನ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕಲ್ಯಾಣ ಸಾಧಿಸುವಂತೆ ಪ್ರೇರಣೆ ಕೊಡುವ ಸಾಹಿತ್ಯ ಇಂದು ಹೊರಹೊಮ್ಮಬೇಕಾಗಿದೆ. ಈ ನಿಟ್ಟಿನಲ್ಲಿ ಹೊಸ ಕವಿಗಳಿಗಾಗಿ ಇಂಥ ಕಾವ್ಯ ಕಮ್ಮಟವನ್ನು ಏರ್ಪಡಿಸುವ ಮೂಲಕ ಕವಿಗಳು ಕಾವ್ಯ ರಚನಾ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಹೇಳಿದರು.
`ಕಾವ್ಯ ಸ್ಪೂರ್ತಿ’ ಕುರಿತು ಮಾತನಾಡಿದ ಹಿರಿಯ ಸಾಹಿತಿ ಭಂಟನೂರ ಗುರುಶಾಂತಯ್ಯ, ಬರೆಯಬೇಕೆಂದಾಗಲೆಲ್ಲ ಕಾವ್ಯ ಬರೆಯಲಾಗದು. ಅದಕ್ಕೆ ಅದರದೇ ಆದ ಸಮಯ ಬರಬೆಕು. ಬರೆಯದೇ ಇರಲಾರೆ ಎಂಬ ಹಮತವನ್ನು ತಲುಪಿದಾಗ ಕಾವ್ಯ ರಚನೆಯಾಗುತ್ತದೆ. ಅಂತಹ ಕವಿಗೆ ಸ್ಪೂರ್ತಿಯ ವಾತಾವರಣ ಬೇಕಾಗುತ್ತೆ. ಪಂಡಿತರ ಸಂಪರ್ಕ, ವಿದ್ಯಾರ್ಜನೆ, ತಿಳುವಳಿಕೆ, ಪರಿಸರ ಜ್ಞಾನ ಮುಂತಾದ ಅಂಶಗಳು ಕವಿಗೆ ಸ್ಪೂರ್ತಿ ನೀಡಬಲ್ಲವು ಎಂದು ವಿವರಿಸಿದರು.
`ಕಾವ್ಯ ಗರಿಮೆ’ ಕುರಿತು ಮಾತನಾಡಿದ ವಾಗ್ಮಿ ಡಾ.ಕೆ.ಗಿರಿಮಲ್ಲ, ಕಾವ್ಯವೂ ಕವಿಗೂ ಹಾಗೂ ಸಹೃದಯನಾದ ಓದುಗನಿಗೂ ಅಪರಿಮಿತ ವಾದ ಆನಂದವನ್ನು ನೀಡುತ್ತದೆ. ಲೋಕಾನುಭವ, ಕೀರ್ತಿ, ತಿಳುವಳಿಕೆ, ಧನಲಾಭ ಇವು ಪ್ರಾಸಂಗಿಕವಾದವುಗಳು. ಕಾವ್ಯದಿಂದ ದೊರೆಯುವ ಆನಂದ ಅಲೌಕಿಕವಾದುದು. ಕವಿಯೂ ತನ್ನ ಸಂಪೂರ್ನ ಜ್ಞಾನ ಲೋಕಾನುಭವ ಧಾರೆ ಎರೆದಿರುವುದರಿಂದ ಕಾವ್ಯ ಓದುಗರ ಜ್ಞಾನ ಪರೀಧಿಯನ್ನು ವಿಸ್ತರಿಸುತ್ತದೆ. ಮನಸ್ಸನ್ನು ಸಂಸ್ಕಾರಗೊಳಿಸಬಲ್ಲದು ಎಂದು ಹೇಳಿದರು.
`ಕಾವ್ಯ ಸ್ವರೂಪ’ ದ ಕುರಿತು ಮಾತನಾಡಿದ ಹಿರಿಯ ಲೇಖಕಿ ಕಾವ್ಯಶ್ರೀ ಮಹಾಗಾಂವಕರ್, ಸಹೃದಯನಿಗೆ ಹಿತವಾದ ಪದಗಳಿಂದ ಆನಂದವನ್ನು ನೀಡುವ ಶಕ್ತಿ ಹೊಂದಿರುವುದು ಕಾವ್ಯ. ಕಾವ್ಯವು ನೇರವಾಗಿ ಹೇಳೋಉವ ಬದಲಾಗಿ ಮನಸ್ಸಿಗೆ ನೋವಾಗದಂತೆ ಮನಸ್ಸನ್ನು ತಿದ್ದುತ್ತದೆ ಎಂದು ಹಲವಾರು ಮೀಮಾಂಸಕರ ಅಭಿಪ್ರಾಯಗಳ ಮೂಲಕ ವಿಷಾಧ ವ್ಯಕ್ತಪಡಿಸಿದರು.
ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ ಮಾತನಾಡಿದರು. ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಯಶ್ವಂತರಾಯ ಅಷ್ಠಗಿ, ಶರಣರಾಜ್ ಛಪ್ಪರಬಂದಿ, ಸಿದ್ಧಲಿಂಗ ಬಾಳಿ, ರಾಜೇಂದ್ರ ಮಾಡಬೂಳ, ಶರಣಬಸವ ಜಂಗಿನಮಠ, ಶರಣಬಸಪ್ಪ ನರೂಣಿ, ಧರ್ಮಣ್ಣಾ ಹೆಚ್.ಧನ್ನಿ, ಶಕುಂತಲಾ ಪಾಟೀಲ, ಶಿಲ್ಪಾ ಜೋಶಿ, ನಾಗೇಂದ್ರಪ್ಪ ಮಾಡ್ಯಾಳೆ, ಸಿ.ಎಸ್.ಆನಂದ, ವಿನೋದ ಜೇನವೇರಿ, ಪ್ರಮುಖರಾದ ನರಸಿಂಗರಾವ ಹೇಮನೂರ, ಭೀಮರಾಯ ಹೇಮನೂರ, ಅನೀಲಕುಮಾರ ಪಾಟೀಲ ತೇಗಲತಿಪ್ಪಿ, ಎಸ್.ಎಂ.ಪಟ್ಟಣಕರ್, ಹೆಚ್.ಎಸ್.ಬರಗಾಲಿ, ವಿಶ್ವನಾಥ ತೊಟ್ನಳ್ಳಿ, ಸಂತೋಷ ಕುಡಳ್ಳಿ, ಸುರೇಶ ದೇಶಪಾಂಡೆ, ನಾಗಪ್ಪ ಸಜ್ಜನ್ ಸೇರಿದಂತೆ ಅನೇಕ ಸಾಹಿತಿಗಳು ಹಾಗೂ ಉದಯೋನ್ಮುಖ ಬರಹಗಾರರು ಭಾಗವಹಿಸಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…