ಬಿಸಿ ಬಿಸಿ ಸುದ್ದಿ

ಟಿಬಿ ಮುಕ್ತ ಅಭಿಯಾನಕ್ಕೆ ಕೈ ಜೋಡಿಸಿಲು ಮುಂದಾಗಿ: ಡಾ.‌ ಚಂದ್ರಕಾಂತ ನರಿಬೋಳಿ

ಕಲಬುರಗಿ: ಸಮುದಾಯದಲ್ಲಿ ಕ್ಷಯರೋಗದಿಂದ (ಟಿಬಿ) ಬಳಲುತ್ತಿರುವ ವ್ಯಕ್ತಿಗಳಿಗೆ ಸಹಕರಿಸಲು ನೀ – ಕ್ಷಯ್ ಮಿತ್ರ ನಮ್ಮೊಂದಿಗೆ ಕೈ ಜೋಡಿಸಲು ಕ್ಷಯ ಮುಕ್ತ ಗ್ರಾಮ / ನಗರ ಮಾಡುವಲ್ಲಿ ದಾನಿಗಳ ಪಾತ್ರ ಬಹಳ ಪ್ರಾಮುಖ್ಯತೆ ಇದೆ ಅದರಂತೆ ಕ್ಷಯರೋಗ ಗುಣಮುಖವಾಗುವಂತಹ ರೋಗವಾಗಿದೆ ಇದರ ಬಗ್ಗೆ ಭಯ ಪಡದೆ ಕ್ಷಯ ಖಚಿತವಾಗಿರುವ ರೋಗಿಯು ಸರಿಯಾದ ರೀತಿಯಲ್ಲಿ ಚಿಕಿತ್ಸೆಯನ್ನು ಪಡೆದು ಗುಣಮುಖವಾದಗ ಕ್ಷಯರೋಗ ಮುಕ್ತ ಕರ್ನಾಟಕ ಮಾಡಲು ಸಾಧ್ಯವಿದೆ ಟಿಬಿ ಮುಕ್ತ 2025 ಅಭಿಯಾನಕ್ಕೆ ನೀ – ಕ್ಷಯ ಮಿತ್ರರರಾಗಲು ಸಂಘ ಸಂಸ್ಥೆಗಳು ಟ್ರಸ್ಟ್ ಗಳು , ಪ್ರಭಾವಿ ವ್ಯಕ್ತಿಗಳು ಕೈ ಜೋಡಿಸಬೇಕೆಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.‌ಚಂದ್ರಕಾಂತ ನರಿಬೋಳಿ ಹೇಳಿದರು.

ನಗರದ ಹಳೆಯ ಜಿಲ್ಲಾ ಆಸ್ಪತ್ರೆ ನೋಡಲ್ ಡಿ ಆರ್ ಟಿಬಿ ಕೇಂದ್ರ ಪ್ರಾಂಗಣದಲ್ಲಿ ಏರ್ಪಡಿಸಿದ್ದ ನೀ – ಕ್ಷಯ್ ಮಿತ್ರ ಕಾರ್ಯಕ್ರಮ, ಕ್ಷಯರೋಗದಿಂದ ಬಳಲುತ್ತಿರುವವರಿಗೆ ಪೌಷ್ಟಿಕಾಹಾರ ಪೌಡರ್ ವಿತರಣಾ ಕಾರ್ಯಕ್ರಮ . ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ ಕಲಬುರಗಿ ಹಾಗೂ ಸಕ್ಷಮ್ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ ಕಲಬುರಗಿ. ಹಾಗೂ ಜ್ಯೋತಿ ಆರ್ಗನಿಕ್ ಮಿಲ್ ವಿಟಾ ಏಜೆನ್ಸಿ ಕಪನೂರ ಕಲಬುರಗಿ ಇವರ. ಸಂಯೋಗದಲ್ಲಿ ಹಮ್ಮಿಕೊಂಡ. 75ನೇ ಆಜಾದಿಕಾ ಅಮೃತ ಮಹೋತ್ಸವ ಕಾರ್ಯಕ್ರಮದಡಿ ನೀ – ಕ್ಷಯ್ ಮಿತ್ರ ಅಭಿಯಾನ ಕಾರ್ಯಕ್ರಮದಲ್ಲಿ ಕ್ಷಯರೋಗ ನಿರ್ಮೂಲನೆ ಮಾಡಲು ಪೌಷ್ಟಿಕಾಹಾರ ನೀಡಲು ಮುಂದೆ ಬಂದಂತಹ ದಾನಿಗಳು ಕೈ ಜೋಡಿಸುವುದರ ಜೊತೆಗೆ ಜನರಿಗೆ ಕ್ಷಯರೋಗ ಕುರಿತು ಜಾಗೃತಿ ಮೂಡಿಸಿದರೆ ಸಾರ್ವಜನಿಕರಿಗೆ ಕ್ಷಯರೋಗದಿಂದ ಬಳಲುತ್ತಿರುವವರು ಉತ್ತಮವಾದ ಜೀವನ ನಡೆಯಲು ಪೌಷ್ಟಿಕ ಆಹಾರ ಸೇವನೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ,

ಕ್ಷಯರೋಗದಿಂದ ಬಳಲುತ್ತಿರುವವರಿಗೆ ಪ್ರತಿ ತಿಂಗಳು ಐದುನೂರು ರೂಪಾಯಿ ನೇರ ಅವರ ಅಕೌಂಟ್ ಜಮಾ ಮಾಡುತ್ತ ಬಂದಿದ್ದೆವೆ ಪೌಷ್ಟಿಕ ಆಹಾರಕಾಗಿ ಈಗ ಸರ್ಕಾರ ಮುಂದೆ ಏನು ಮಾಡಿದೆ ಎಂದರೆ ದುಡ್ಡಿನ ಜೊತೆಗೆ ಯಾರು ಯಾರು ದಾನಿಗಳು ಇದ್ದರೆ ಅವರಿಗೆ ಕ್ಷಯರೋಗದಿಂದ ಬಳಲುತ್ತಿರುವವರಿಗೆ ದತ್ತು ರೂಪದಲ್ಲಿ ತೆಗೆದುಕೊಂಡು ಆರು ತಿಂಗಳು ಒಂಬ್ಬತ್ತು ತಿಂಗಳು ಹಾಗೆ ಹದಿನೆಂಟು ತಿಂಗಳವರಗೆ ಚಿಕಿತ್ಸೆ ನಿಡಬೇಕಾಗುತ್ತದೆ, ಹಾಗಾಗಿ ದಾನಿಗಳು ಪೌಷ್ಟಿಕ ಪೌಡರ್ , ದಿನಸಿ, ಮೊಟ್ಟೆ ಕಾಳುಗಳು ರೂಪದಲ್ಲಿ ನೀಡುವುದರಿಂದ ಕ್ಷಯರೋಗಿ ಬಹು ಬೇಗ ಚೇತರಿಸಿಕೊಳ್ಳಲು ಸಾಧ್ಯ ಎಂದರು ಹಾಗೆ ಅದರಂತೆ ವಿವಿಧ ಕ್ಷೇತ್ರದ ಪ್ರಮುಖ ದಾನಿ ರೂಪದ ವ್ಯಕ್ತಿಗಳು, ಸಂಘ ಸಂಸ್ಥೆಗಳು, ರಾಜಕಾರಣಿಗಳು, ಟ್ರಸ್ಟ್ ಗಳು, ಸ್ವಯಂ ಸೇವಕರು, ಇತರರು ಮುಂದಾಗಬೇಕಾಗಿದೆ ಕ್ಷಯರೋಗಿಗೆ ದತ್ತು ತೆಗೆದುಕೊಳ್ಳುವ ಜವಬ್ದಾರಿ ವಹಿಸಿದ್ದರೆ ಕ್ಷಯರೋಗದ ಎಂಬ ಕೀಳಾರಿಮೆ ಹೊಗಲು ಸಾಧ್ಯ ಕ್ಷಯರೋಗ ನಿರ್ಮೂಲನೆ ಮಾಡಲು

ಕೇಂದ್ರ ಸರ್ಕಾರ ಕೈಗೊಂಡಿರುವ ಮಹತ್ವದ ಕಾರ್ಯಕ್ರಮ ಕ್ಷಯ ಮುಕ್ತ ಭಾರತ / ಕರ್ನಾಟಕ 2025 ರಲ್ಲಿ ಎಂಬ ಘೋಷವಾಕ್ಯದಂತೆ ದಾನಿಗಳು ಕ್ಷಯರೋಗ ನಿರ್ಮೂಲನಗೆ ಪಣತೊಡಬೇಕೆಂದರು ಅದರಂತೆ ಇಲ್ಲಿನ ಸಂತೋಷ ಲಂಗರ್ ದಾನಿಗಳು ಕೂಡ ಮುಂದೆ ಬಂದಿದ್ದು ಬಹಳ ಸಂತೋಷದ ವಿಷಯ ಮಿಲ್ ವಿಟಾ ಹೆಲ್ತ್ ಮಿಕ್ಸ್ ಪೌಡರ್ 50 ಕ್ಷಯರೋಗಿಗೆ ಆರು ತಿಂಗಳು ವರಗೆ ನೀಡಲು ಮುಂದಾಗಿದ್ದರೆ ಜ್ಯೋತಿ ಆರ್ಗನಿಕ್ ಪ್ರಾಡಕ್ಟ್ ಯನ್ನು ಪ್ರಶಂಶಿಸಿ ಹೊಗಳಿದರು.

ಹಾಗೆ ವೇದಿಕೆ ಮೇಲೆ ಇನ್ನೋರ್ವ ಮುಖ್ಯ ಅತಿಥಿಯಾದ ಅಧಿಕ್ಷಕರು ಹಾಗೂ ಜಿಲ್ಲಾ ಶಾಸ್ತ್ರಜ್ಞರು ಜಿಮ್ಸ್ ಆಸ್ಪತ್ರೆಯ ಡಾ. ಅಂಬಾರಾಯ ರುದ್ರವಾಡಿ ಅವರು ಮಾತನಾಡುತ್ತಾ ಆರೋಗ್ಯ ಇಲಾಖೆಯೊಂದಿಗೆ ಸಹಭಾಗಿತ್ವ ಕಾರ್ಯಕ್ರಮದಲ್ಲಿ ಭಾಗವಹಿಸುವದರ ಜೊತೆಗೆ ಕ್ಷಯರೋಗದಿಂದ ಬಳಲುತ್ತಿರುವ ಕ್ಷಯರೋಗಿಗೆ ಪೌಷ್ಟಿಕಾಂಶವುಳ್ಳ ವಿವಿಧ ಆಹಾರ ಮಿಶ್ರಣ ಮಿಲ್ ವಿಟಾ ಪೌಷ್ಟಿಕ ಆಹಾರ ಪೌಡರ್ ಒಬ್ಬ ವ್ಯಕ್ತಿ ಸರಿಯಾಗಿ ಮಾತ್ರೆ ತೆಗೆದುಕೊಳ್ಳುವ ಮುಂಚೆ ಸತ್ವ ಭರಿತ ಪೌಷ್ಟಿಕಾಂಶ ಊಟ ಮಾಡಿದರೆ ಶಕ್ತಿ ಹೆಚ್ಚುತದೆ ಉತ್ತಮ ಜೀವನ ಮತ್ತು ಆರೋಗ್ಯ ಪಡೆಯುವಲ್ಲಿ . ಸಂದೇಹವಿಲ್ಲ ನೀವು ದೇವರಿಗೆ ಹೂವು ತಪ್ಪಿದರು ಪರವಾಗಿಲ್ಲ ಪೂಜೆ ನಿಂತರು ಪರವಾಗಿಲ್ಲ ಔಷಧಿ ನಿಂದ್ರಂಗಿಲ್ಲ ಎಂದು ಹೇಳಿ ಕ್ಷಯರೋಗಾಗಿ ದಾನಿ ರೂಪದಲ್ಲಿ ಕ್ಷಯರೋಗಿಗೆ ನೀಡುತ್ತಿರುವುದು ಒಳ್ಳೆಯ ಸಂಗತಿ ಕ್ಷಯರೋಗಿಗಳು ಭಯ ಪಡೆಯುವ ಅಗತ್ಯವಿಲ್ಲ ಬಹು ಬೇಗನೆ ಕ್ಷಯ ಮುಕ್ತರಾಗಿ ಹೊರಬರಬೇಕು ಎಂದು ಹೇಳಿದರು.

ಅತಿಥಿ ಜಿಲ್ಲಾ ಡಿ ಆರ್ ಟಿಬಿ ಮೇಲ್ವಿಚಾರಕ ಸುರೇಶ ದೊಡ್ಡಮನಿ ಅವರು ಪ್ರಾಸ್ತಾವಿಕ ನುಡಿ ಮಾತನಾಡುತ್ತ ಕ್ಷಯರೋಗ ಗಾಳಿ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುವಂತ ರೋಗವಾಗಿದ್ದು ಪ್ರತಿ ಒಬ್ಬರು ಎಚ್ಚರವಹಿಸಬೇಕು ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳಬೇಕು ಕ್ಷಯರೋಗ ಪರೀಕ್ಷೆ ಮತ್ತು ಚಿಕಿತ್ಸೆ ಸಂಪೂರ್ಣವಾಗಿ ಉಚಿತ ಇರುತ್ತದೆ. ಮತ್ತು ಆರು ತಿಂಗಳ ಚಿಕಿತ್ಸೆಯ ಸಂಧರ್ಭದಲ್ಲಿ ರೋಗಿಗಳಿಗೆ ಪೌಷ್ಟಿಕ ಆಹಾರ ಸಂಬಂಧ ಮಾಸಿಕ ೫೦೦ ರೂ, ಗಳನ್ನು ಕೊಡಲಾಗುತ್ತದೆ ಇದರ ಉಪಯೋಗ ಪ್ರತಿ ರೋಗಿಯು ಪಡೆಯಬೇಕು ಎಂದು ತಿಳಿಸಿದರು.

ವೇದಿಕೆ ಮೇಲೆ ಅಧ್ಯಕ್ಷತೆ ವಹಿಸಿದ್ದ ನೋಡಲ್ ಡಿ ಆರ್ ಟಿಬಿ ವೈದ್ಯಾಧಿಕಾರಿ ಡಾ. ಅವಿನಾಶ್ ಖಸಗೆ ಅಧ್ಯಕ್ಷತೆ ನುಡಿಗಳನಾಡಿದರು.

ವೇದಿಕೆ ಮೇಲೆ ಪ್ರಮುಖರಾದ ಅರ್ ಎಂ ಓ, ಡಾ. ಓಂ ಪ್ರಕಾಶ. ಜಿ ಎ, ಬೀರಪ್ಪ. ಡಿ ಪಿ ಎಸ್, ಅಬ್ದುಲ್ ಜಬ್ಬರ್ . ಜಿಲ್ಲಾ ಡಿ ಅರ್ ಟಿಬಿ ಸಕ್ಷಮ್ ಟಿಐ ಎಸ್ ಎಸ್ ಸಮಾಲೋಚಕ ಮಂಜುನಾಥ ಕಂಬಾಳಿಮಠ. ಡಿ ಆರ್ ಟಿಬಿ ಎಸ್ ಎ. ಸಂತೋಷ ಬಿದ್ರಾಣಿ . ಹಿರಿಯ ಕ್ಷಯರೋಗ ಮೇಲ್ವಿಚಾರಕ ಡಾ. ಶರಣಬಸಪ್ಪ ಸಜ್ಜನ್ , ಶರಣು ಸಿಂಗೆ . ಡಿಆರ್ ಟಿಬಿ ಸಮಾಲೋಚಕಿ ಶಕುಂತಲಾ ದೊಡ್ಡಮನಿ, ಟಿಬಿ ಹೆಚ್ ವಿ , ಬಸವರಾಜ ಪಾಟೀಲ್ ಇದ್ದರು .

ಕ್ಷಯ ರೋಗಿಗಳು, ಮತ್ತು ಕ್ಷಯ ರೋಗಿ ಸಹಾಯಕರು, ಹಾಗೂ ಆಶಾ ಕಾರ್ಯಕರ್ತೆಯರು ಆರೋಗ್ಯ ಸಿಬ್ಬಂದಿಯವರು ಭಾಗವಹಿಸಿದರು. ಎಸ್ ಟಿ ಎಸ್. ಶರಣಬಸಪ್ಪ ಸಜ್ಜನ್ ಸ್ವಾಗತಿಸಿದರು, ಡಿ ಪಿ ಎಸ್. ಸುರೇಶ ದೊಡ್ಡಮನಿ ನಿರೂಪಿಸಿದರು ಎಸ್ ಟಿ ಎಸ್ ಶರಣು ಸಿಂಗೆ ವಂದಿಸಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 hour ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 hour ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 hour ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

18 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

20 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago