ಬಿಸಿ ಬಿಸಿ ಸುದ್ದಿ

ವಿದ್ಯಾರ್ಥಿಗಳು ಮಾನವೀಯ ಮೌಲ್ಯ ಗುಣಗಳನ್ನ ಅಳವಡಿಸಿಕೊಳ್ಳಬೇಕಿದೆ

ಕಲಬುರಗಿ: ನೆಹರು ಯುವ ಕೇಂದ್ರ ಕಲಬುರಗಿ ಹಾಗೂ ಶೆಟ್ಟಿ ತಂತ್ರಜ್ಞಾನ ಸಂಸ್ಥೆ ಕಲಬುರಗಿ ಸಂಯುಕ್ತಾಶ್ರಯದಲ್ಲಿ ಯುವ ಉತ್ಸವ ಯುವ ಸಂವಾದ – ಇಂಡಿಯಾ @೨೦೨೪೭ ಕಾರ್ಯಕ್ರಮವನ್ನು ಶೆಟ್ಟಿ ತಂತ್ರಜ್ಞಾನ ಸಂಸ್ಥೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದಂತಹ ಚೀಣಮಗೇರ ಮಹಾಂತೇಶ್ವರ ಮಠದ ಸ್ವಾಮೀಜಿಗಳಾದ ಶ್ರೀ ಷ.ಬ್ರ ವೀರಮಹಾಂತ ಶಿವಾಚಾರ್ಯ ಸ್ವಾಮೀಜೀಗಳು ಮಾತನಾಡಿ, ಭಾರತ ದೇಶದಲ್ಲಿ ಜನಿಸಿದ ನಾವುಗಳು ಭಾಗ್ಯವಂತರು. ಮನುಷ್ಯರಾದ ನಾವುಗಳು ಮಾನವೀಯ ಗುಣಗಳನ್ನ ಬೆಳೆಸಿಕೊಳ್ಳಬೇಕಿದೆ. ವಿದ್ಯಾರ್ಥಿ ಯುವಜನರು ದುಷ್ಚಟಗಳಿಂದ ದೂರವಿದ್ದು ತಮ್ಮ ಸಾಧನೆಯ ಗುರಿಯತ್ತ ಸಾಗಬೇಕು. ತಂದೆ ತಾಯಿಗಳು ಕಂಡಂತಹ ಕನಸನ್ನ ನನಸು ಮಾಡಬೇಕು. ಓದುವ ಹವ್ಯಾಸಗಳನ್ನ ರೂಡಿಸಿಕೊಂಡು ಸಮಾಜಮುಖಿ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದಂತಹ ಲೋಕಸಭಾ ಸದಸ್ಯರಾದ ಉಮೇಶ ಜಾಧವ ಅವರು ಮಾತನಾಡಿ, ನಮ್ಮ ಭಾರತ ದೇಶವು ಯುವಜನರಿಂದ ಹೆಚ್ಚು ಕೂಡಿರುವುದರಿಂದ, ಯುವಕರು ನಮ್ಮ ದೇಶವನ್ನು ಕಟ್ಟುವಲ್ಲಿ ಶ್ರಮಿಸಬೇಕಿದೆ. ಭಾರತ ಬದಲಾವಣೆಯಾಗುತ್ತಿದೆ, ನಾವು ಬದಲಾವಣೆಯಾಗುತ್ತಿದ್ದೇವೆ. ಭಾರತದಾದ್ಯಂತ ಯುವಕರಿಗೆ ಪ್ರೋತ್ಸಾಹ, ಅವಕಾಶ ಕೋಡಬೇಕು, ದೈಹಿಕವಾಗಿ, ಮಾನಸಿಕವಾಗಿ, ಭೌದ್ದಿಕವಾಗಿ ಸದೃಡರನ್ನಾಗಿ ಮಾಡುವ ಸದುದ್ದೇಶದಿಂದ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆ, ರಾಜ್ಯ ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾಗುವಲ್ಲಿ ನಿಮ್ಮ ಪ್ರಯತ್ನ ಇರಬೇಕು. ಯುವ ಸಮುದಾಯದ ಪ್ರತಿಯೊಬ್ಬರಿಗೂ ಮುಕ್ತ ಅವಕಾಶಗಳನ್ನ ನೀಡಲಾಗಿದೆ. ಅದನ್ನ ಯುವಕರು ಸದುಪಯೋಗ ಪಡೆಸಿಕೊಳ್ಳಬೇಕು. ಈಗ ನಮ್ಮ ಭಾರತ ದೇಶ ೭೫ ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ೧೯೪೭ ರವರೆಗೂ ನಮ್ಮ ಭಾರತ ದೇಶ ಜಗತ್ತಿನಾದ್ಯಂತ ನಂಬರ್‌ ೧ ಆಗಲಿದೆ, ಯುವಕರು ಮೊಬೈಲ್‌ ನಲ್ಲಿ ಹೆಚ್ಚಿನ ಸಮಯ ಕಳೆಯದೇ ತಮ್ಮ ಸಾಧನೆ ಮತ್ತು ಗುರಿಯತ್ತ ಸಾಗಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳಾದ ಹರ್ಷಲ್‌ ತಲಸ್ಕರ್‌ ಅವರು ಮಾತನಾಡಿ, ಯುವಕರಿಗೆ ಮಹಿಳೆಯರಿಗೆ ನಾಯಕತ್ವದ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಹಾಗೂ ಅವರ ಕನಸುಗಳನ್ನ ಸಾಕಾರಗೊಳಿಸುವಲ್ಲಿ ಅನೇಕ ರೀತಿಯ ಚಟುವಟಿಕೆಗಳನ್ನ ಭಾರತದಾದ್ಯಂತ ನೆಹರು ಯುವ ಕೇಂದ್ರದಿಂದ ಹಮ್ಮಿಕೊಳ್ಳಲಾಗುತ್ತಿದೆ. ಇದನ್ನ ಯುವಕ ಯುವತಿಯರು ಸದುಪಯೋಗ ಪಡೆಸಿಕೊಳ್ಳಬೇಕು. ಸ್ವಚ್ಚ ಭಾರತ, ಫಿಟ್‌ ಇಂಡಿಯಾ ಯುವ ಸಂವಾದ ಕಾರ್ಯಕ್ರಮ ಅನೇಕ ರೀತಿಯ ಚಟುವಟಿಕೆಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶೆಟ್ಟಿ ಗ್ರೂಪ್‌ ಸಂಸ್ಥೆಗಳ ನಿರ್ದೇಶಕರಾದ ಶ್ರೀ ಅನಿರುದ್ಧ ಶೆಟ್ಟಿ, ಪಿ.ಎಲ್.ಡಿ ಬ್ಯಾಂಕ್‌ ಚಿಂಚೋಳಿಯ ಮಾಜಿ ನಿರ್ದೇಶಕರಾದ ಆರ್.‌ ಗಣಪತರಾವ , ಕಾನೂನು ಸೇವಾ ಪ್ರಾಧಿಕಾರ, ಅಫಜಲಪೂರದ ಸದಸ್ಯರಾದ ಭೀಮರಾಯ ಇಟಗೊಂಡ,ನೆ ಹರು ಯುವ ಕೇದ್ರದ ಜಿಲ್ಲಾ ಯುವ ಅಧಿಕಾರಿ ಹರ್ಷಲ್‌ ತಲಸ್ಕರ್‌, ಶೆಟ್ಟಿ ತಂತ್ರಜ್ಞಾನ ಸಂಸ್ಥೆ ಕಲಬುರಗಿ ಪ್ರಾಂಶುಪಾಲರಾದ ಡಾ.ಬಸಂತಿ ಘಂಟಿ, ಕಿರಣ ಪಾಟೀಲ್‌, ಉದಯ ಶೆಟ್ಟಿ, ಸಿದ್ರಾಮಪ್ಪ ಮಾಳಾ, ಭೀಮರಾಯ ಇಟಗೊಂಡ, ದೇವರಾಜ ಕನ್ನಡಿಗ, ರಾಜು ಅವರಾದ, ಶಿವಶರಣ ಪರಪ್ಪಗೋಳ, ನೆಹರು ಯುವ ಕೇಂದ್ರದ ರಾಷ್ಟ್ರೀಯ ಯುವ ಕಾರ್ಯಕರ್ತರು, ಶೆಟ್ಟಿ ತಂತ್ರಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಇತರರು ಇದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

6 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

6 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

6 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

23 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago