ಸುರಪುರ: ಕರ್ನಾಟಕ ಜನ ಸಂಕಲ್ಪ ಯಾತ್ರೆ ಅಂಗವಾಗಿ ನಗರದ ಪತ್ರಿಕಾ ಭವನದಲ್ಲಿ ಕಲಬುರ್ಗಿ ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸೇರಿದಂತೆ ಅನೇಕ ಮುಖಂಡರು ಸುದ್ದಿಗೋಷ್ಠಿ ನಡೆಸಿದರು.
ಮುಖಂಡ ಡಾ:ಸುರೇಶ ಸಜ್ಜನ್ ಮಾತನಾಡಿ,ಇದೇ 19ರ ಬುಧವಾರ ಹುಣಸಗಿಯಲ್ಲಿ ನಡೆಯಲಿರುವ ಜನ ಸಂಕಲ್ಪ ಯಾತ್ರೆಗೆ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ,ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸೇರಿದಂತೆ ಅನೇಕ ಜನ ಮಂತ್ರಿಗಳು ಹಾಗು ಯಾದಗಿರಿ ಮತ್ತು ಕಲಬುರ್ಗಿ ಜಿಲ್ಲೆಯ ಬಿಜೆಪಿ ಶಾಸಕರುಗಳು ಭಾಗವಹಿಸಲಿದ್ದಾರೆ.ನಮ್ಮ ನೆಚ್ಚಿನ ನಾಯಕರಾದ ಶಾಸಕ ರಾಜುಗೌಡ ಅವರು ನೇತೃತ್ವದಲ್ಲಿ ನಡೆಯಲಿರುವ ಜನಸಂಕಪಲ್ಪ ಯಾತ್ರೆಗೆ ಎಲ್ಲರನ್ನು ಆಹ್ವಾನಿಸುವುದಾಗಿ ತಿಳಿಸಿದರು.
ಜನಸಂಕಲ್ಪ ಯಾತ್ರೆಯ ಮೂಲಕ ಬಿಜೆಪಿ ಸರಕಾರ ರಾಜ್ಯದಲ್ಲಿ ಮಾಡಿರುವ ಅನೇಕ ಅಭಿವೃಧ್ಧಿ ಕಾರ್ಯಗಳನ್ನು ತಿಳಿಸಿಕೊಡಲಿದೆ,ಅಲ್ಲದೆ ಶಾಸಕರಾದ ರಾಜುಗೌಡ ಅವರು ಕ್ಷೇತ್ರದ ಅಭಿವೃಧ್ಧಿಗೆ ಮಾಡಿರುವ ಅನೇಕ ಕಾರ್ಯಗಳು ಜೊತೆಗೆ ಅವರು ತಂದಿರುವ ಅನುದಾನ ಮತ್ತು ಶಿಕ್ಷಣ ರಂಗಕ್ಕೆ ಶಾಸಕರು ನೀಡಿರುವ ಕೊಡುಗೆ ಅದರಲ್ಲಿ ವಿಶೇಷವಾಗಿ ಹುಣಸಗಿಯಲ್ಲಿ ನಡೆದ ಐಎಎಸ್,ಐಪಿಎಸ್ ಕುರಿತ ಉಚಿತ ತರಬೇತಿ ಸೇರಿದಂತೆ ಅನೇಕ ಕೊಡುಗೆಗಳು ಹಾಗೂ ಕ್ಷೇತ್ರದ ರೈತರ ಅನುಕೂಲಕ್ಕಾಗಿ ಮಾಡಿರುವ ಕಾರ್ಯಗಳು,ಅದರಲ್ಲೂ ವಿಶೇಷವಾಗಿ ಬೂದಿಹಾಳ ಪೀರಾಪುರ ಏತ ನೀರಾವರಿ,ಬೋನಾಳ ಏತ ನೀರಾವರಿ,ಈಗ ಶೀಘ್ರದಲ್ಲಿಯೇ ಟೆಂಡರ್ ನಡೆಯಲಿರುವ ದೇವತ್ಕಲ್ ಏತ ನೀರಾವರಿ ಕಾಮಗಾರಿಗಳು ಹಾಗೂ ಚುನಾವಣಾ ಪೂರ್ವದಲ್ಲಿ ಸ್ಥಳಿಯವಾಗಿ ಬಿಡುಗಡೆ ಮಾಡಲಾಗಿದ್ದ ಪ್ರಣಾಳಿಕೆಯಲ್ಲಿನ ಘೋಷಣೆ ಮಾಡಿದ ಯೋಜನೆಯಂತೆ ಬಹುತೇಕ ಈಡೇರಿಸಲಾಗಿದೆ,ಅದರಲ್ಲಿ ನಗರಕ್ಕೆ ಕುಡಿಯುವ ನೀರಿನ ಯೋಜನೆಯಂತಹ ಅನೇಕ ಯೋಜನೆಗಳ ಕುರಿತು ತಿಳಿಸಲಾಗುವುದು ಎಂದರು.
ಅಲ್ಲದೆ ನಮ್ಮ ಡಿಸಿಸಿ ಬ್ಯಾಂಕ್ ಮೂಲಕ 14256 ಜನ ಹಳೆ ರೈತರಿಗೆ 52 ಕೋಟಿ 21 ಲಕ್ಷ ರೂಪಾಯಿಗಳ ಶೂನ್ಯ ಬಡ್ಡಿದರ ಸಾಲ ವಿತರಣೆ ಹಾಗೂ 10482 ಜನ ಹೊಸ ರೈತರಿಗೆ 34ಕೋಟಿ 75 ಲಕ್ಷ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಣೆ ಹಾಗೂ ಸ್ತ್ರೀಶಕ್ತಿ ಗುಂಪುಗಳಿಗೂ ಶೂನ್ಯ ಬಡ್ಡಿದರಲ್ಲಿ ಸಾಲ ವಿತರಣೆ ಇವೆಲ್ಲವೂ ಸಾಧ್ಯವಾಗಿದ್ದು ಶಾಸಕ ರಾಜುಗೌಡರ ಮಾರ್ಗದರ್ಶನ ಹಾಗೂ ನಮ್ಮ ಅಧ್ಯಕ್ಷರಾದ ರಾಜಕುಮಾರ ಪಾಟೀಲ್ ತೇಲ್ಕೂರ್ ಅವರ ಸಹಕಾರ ದಿಂದ ಸಾಧ್ಯವಾಗಿದೆ.ಇನ್ನು 2023-24ನೇ ಸಾಲಿನಲ್ಲಿ 10 ಸಾವಿರ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 50 ಕೋಟಿ ಸಾಲ ವಿತರಣೆ ಮಾಡುವ ಗುರಿ ಹೊಂದಲಾಗಿದೆ ಎಂದರು.
ಅಲ್ಲದೆ ಇನ್ನು ಕ್ಷೇತ್ರದ ಶೈಕ್ಷಣಿಕ ರಂಗದ ಅಭಿವೃಧ್ಧಿಗಾಗಿ ಬಿ.ಇಡಿ,ಸೇರಿದಂತೆ ಅನೇಕ ಉನ್ನತ ವ್ಯಾಸಂಗಕ್ಕಾಗಿ ಸ್ನಾತಕೋತ್ತರ ಪದವಿ ಕಾಲೇಜುಗಳ ಮಂಜೂರಾತಿಗಾಗಿ ಮನವಿ ಮಾಡಲಾಗುವುದು ಹಾಗೂ ಯಾದಗಿರಿ ಜಿಲ್ಲೆಗೆ ಡಿಸಿಸಿ ಬ್ಯಾಂಕ್ ಮಂಜೂರು ಮಾಡುವಂತೆ ಕಾರ್ಯಕ್ರಮದಲ್ಲಿ ಮನವಿ ಮಾಡುವ ಜೊತೆಗೆ ಒಂದು ದೇಶ ಒಂದು ಕೃಷಿ ಉಪಕರಣಗಳ ಯೋಜೆನ ಹಾಗೂ ಮುಖ್ಯಮಂತ್ರಿಗಳು ಯಶಸ್ವಿನಿ ಯೋಜನೆ ವiರು ಚಾಲನೆ ನೀಡಿರುವುದರಿಂದ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಉದ್ಯಮಿ ಕಿಶೋರಚಂದ್ ಜೈನ್ ಮಾತನಾಡಿ,ರಾಜ್ಯದಲ್ಲಿನ ಎಸ್.ಸಿ,ಎಸ್.ಟಿ ಸಮುದಾಯದ ಮೀಸಲು ಪ್ರಮಾಣ ಹೆಚ್ಚಳಗೊಳಿಸಿದ್ದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.ಅಲ್ಲದೆ ಕ್ಷೆತ್ರದ ಅಭಿವೃಧ್ಧಿಗೆ ಬೇಕಾದಷ್ಟು ಅನುದಾನ ನೀಡಿದ ಸರಕಾರ ಮತ್ತು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಸುರಪುರ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ,ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಸಜ್ಜನ್,ಹಿಂದುಳಿದ ವರ್ಗಗಳ ಮುಖಂಡ ಗೋಪಣ್ಣ ದೊಡ್ಮನಿ ಇತರರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…