ಹೈದರಾಬಾದ್ ಕರ್ನಾಟಕ

ಕನ್ನಡ ಕೇವಲ ಭಾಷೆಯಲ್ಲ, ಅದು ಪ್ರತಿ ಕನ್ನಡಿಗನ ಅಸ್ಮಿಯತೆಯ ಪ್ರತಿಕ

ಕಮಲಾಪುರ: ಕನ್ನಡ ಭಾಷೆ ಕೇವಲ ಭಾಷೆಯಲ್ಲ ಅದು ಪ್ರತಿಯೊಬ್ಬ ಕನ್ನಡಿಗ ಅಸ್ಮೀಯತೆಯಾಗಿದೆ, ನಮ್ಮ ಹೆಮ್ಮೆಯ ಪ್ರತಿಕವಾಗಿದೆ, ಇಡೀ ಜಗತ್ತಿಗೆ ವಿಶ್ವ ಮಾನವ ಸಮದೇಶ ಸಾರಿದ ಭಾಷೆ ಮ್ಮ ನಡ ಭಾಷೆಯಾಗಿದೆ, ಅಲ್ಲದೇ ವಾಸ್ತವಿಕತೆ ಮತ್ತು ಸಾಮಾಜಿಕ ನ್ಯಾಯದ ನೆಲೆಗಟ್ಟಿನ ಮೇಲೆ ಸಾಹಿತ್ತಯವನ್ನು ರಚಿಸಿದ ಕೀರ್ತಿ ಕ್ಲಯಾಣ ನಾಡಿನದ್ದಾಗಿದೆ, ಬಸವಾದಿ ಶರಣರು ವಚನಗಳ ಮೂಲಕ ಕನ್ಡ ಭಾಷೆಯನ್ನು ಉಳಿಸಿ ಬೆಳೆಸಿದ ಕೀರ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ ಕರ್ನಾಟಕ ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮ ಯುವ ಜನತೆಯ ಮೇಲಿದೆ ಕಲಬುರಗಿ ಆಕಾಶವಾಣಿ ಕೇಂದ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಸದಾನಂದ ಪೆರ್ಲ ಹೇಳಿದರು.

ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್‍ನಲ್ಲಿರುವ ಹೈನು ವಿಜ್ಞಾನ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಮಲಾಫುರ ತಾಲೂಕು ಘಟಕದ ವತಿಯಿಂದ ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಕನ್ನಡ ಭಾಷೆ ಮತ್ತು ಕನ್ನಡಿಗನ ಸ್ಥಿತಿಗತಿಯ ಕುರಿತು ಅವಲೋಕನ ಮಾಡುವ ಸಂಕಲ್ಪದಿಂದ ಕನ್ನಡ-ಕನ್ನಡಿಗ-ಕರ್ನಾಟಕ ಚಿಂತನಾಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ಸಾಹಿತ್ಯಕ್ಕೆ ಮೊಟ್ಟ ಮೊದಲ ಗ್ರಂಥವನ್ನು ನೀಡಿದ ಕೀರ್ತಿ ಕಲ್ಯಾಣ ನಾಡಿನ ಮಾನ್ಯಖೇಟಕ್ಕೆ ಸಲ್ಲುತ್ತದೆ, ನಾಭಿಯಿಂದ ತೊಡಗಿ, ಕಂಠ,ನಾಲಿಗೆ, ತುಟಿಗಳ ಮೂಲಕ ಹೊರಹೊಮ್ಮುತ್ತದೆ, ಅಂತೆಯೇ ಕನ್ನಡ ಭಾಷೆ ವೈಜ್ಞಾನಿಕ ತಳಹದಿಯ ಮೇಲೆ ನೆಲೆ ನಿಂತ ಭಾಷೆ ಎನ್ನಲಾಗುತ್ತದೆ. ಕನ್ನಡ ನಾಡಿನ ಕನ್ನಡಿಗ ವಿಶ್ವ ಮಾನವನಾಗಬೇಕಿದೆ.

ಹೈನು ವಿಜ್ಞಾನ ಮಹಾವಿದ್ಯಾಲಯದ ಡೀನ್ ಡಾ.ಎಚ್.ಮಂಜುನಾಥ ಅಧ್ಯಕ್ಷತೆ ವಹಿಸಿ ಮಾತನಾಡಿ ನನ್ನ ಮಾತೃ ಭಾಷೆಕನ್ನಡ, ಹೀಗಾಗಿ ನಾನು ಬಹುತೇಕ ಸಮಯ ಕನ್ನಡದಲ್ಲೇ ಮಾತನಾಡುತ್ತೇನೆ, ಅನಿವಾರ್ಯ ಬಂದಾಗಮಾತ್ರ ಬೇರೆ ಭಾಷೆಗಳನ್ನಾಡುತ್ತೇನೆ,ಕಛೇರಿಯಲ್ಲಿ ನಾಮಫಲಕ ಸಹ ಕನ್ನಡ ಜಿಲ್ಲಾ ಹಾಗೂ ಕಮಲಾಪುರ ತಾಲೂಕು ಕಸಾಪ ಘಟಕಗಳು ನಿರಂತರ ಸಾಹಿತ್ಯಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಾಹಿತ್ಯಿಕ ವಾತಾವರಣ ನಿರ್ಮಿಸಲು ಶ್ರಮಿಸುತ್ತಿರುವುದು ಶ್ಲಾಘನೀಯ, ಪರಿಷತ್ತಿ ಕಾರ್ಯಕ್ರಮಗಳಿಗೆ ಮುಂಬರುವ ದಿನಗಳಲ್ಲಿ ಅಗತ್ಯ ಸಹಕಾರ ನಿಡುತ್ತೇನೆ ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರಪಾಟೀಲ ಆಶಯ ನುಡಿಗಳನ್ನು ಆಡಿದರು.

ಈಸಂದರ್ಭದಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಕೋಶಾಧ್ಯಕ್ಷ ಶರಣರಾಜ ಚಪ್ಪರಬಂದಿ, ಪ್ರಗತಿಪರ ರೈತ ಗುರುನಾಥ ಸೊನ್ನದ, ಮಹಾಗಾಂವ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಾಣಿ ಪಾಗಾ, , ಕಸಾಪ ನಿಕಟ ಪೂರ್ವ ತಾಲುಕು ಅಧ್ಯಕ್ಷ ದಾಸಿಮಯ್ಯ ವಡ್ಡನಕೇರಿ, ಚಿಂಚೋಳಿ ಕಸಾಪ ತಾಲೂಕು ಅಧ್ಯಕ್ಷ ಸುರೇಶ ದೇಶಪಾಂಡೆ, ಕೀಲಿ ಸಮಾಜದ ತಾಲೂಕು ಅಧ್ಯಕ್ಷ ಅಂಬಾರಾಯ ಜವಳಗಾ, ಕೋಶಾಧ್ಯಕ್ಷ ನಾಗಣ್ಣ ವಿಶ್ವಕರ್ಮ,, ಸಂಘಟನಾ ಕಾರ್ಯದರ್ಶಿ ಆನಂದ ವಾರಿಕ, ಶಶಿಕುಮಾರ ಸಿ ಎಸ್, ಪ್ರೀಯತಮ ರಡ್ಡಿ, ನಟರಾಜ, ಶಂಕರಲಿಂಗಯ್ಯ, ದೇವರಾಜ ಆರ್, ಪ್ರೀಯಾಂಕಾ ಕಲ್ಯಾಣ ಭಾರತಿ, ಡಾ.ಶೀಮಾ ಆಲೂರ, ಸಂಜಯಕುಮಾರ ನಾಟೀಕರ, ನಾಗೇಶ ಜಮಾದಾರ, ಭಾಗವಹಿಸಲಿದ್ದಾರೆ.

ಕಸಾಪ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ ಪ್ರಾಸ್ತವಿಕವಾಗಿ ಮಾತನಾಡಿದರು. ಕಸಾಪ ತಾಲೂಕು ಗೌರವ ಕಾರ್ಯದರ್ಶಿ ರವೀಂದ್ರ ಬಿಕೆ ನಿರೂಪಿಸಿದರುÀ ಮಹಿಳಾ ಕಾರ್ಯದರ್ಶಿ ಕಸ್ತೂರಿಬಾಯಿ ರಾಜೇಶ್ವರ ಸ್ವಾಗತಿಸಿದರು, , ಸಂಘಟನಾ ಕಾರ್ಯದರ್ಶಿ ಆನಂದ ವಾರಿಕ್ ವಂದಿಸಿದರು.

ಕರ್ನಾಟಕ ರಾಜ್ಯದಲ್ಲಿ ಕನ್ನಡ ಉಳಿಸಿ ಎಂದು ಹೇಳುವ ಸಂದಭ್ ಬಂದೊರಗಿರುವುದು ಅತಿ ದುರ್ದೈವದ ಸಂಗತಿಯಾಗಿದೆ, 107 ವರ್ಷಗಳಿಂದ ರಾಜ್ಯದಲ್ಲಿ ಕನ್ನಡ ಉಳಿಸಿ ಬೆಳೆಸಲು ಶ್ರಮಿಸುತ್ತಿರುವ ಏಕೈಕ ಸಂಸ್ಥೆ ಎಂದರೆ ಅದು ಕನ್ನಡ ಸಾಹಿತ್ಯ ಪರಿಷತ್ತು, ಅಂದು ರಾಜ-ಮಹಾರಾಜರ ಕಾಲದ ಆಳ್ವಿಕೆಯಲ್ಲಿ ನಮ್ಮ ಕನ್ನಡ ನಾಡು ಕಲೆ, ಸಾಹಿತ್ಯ, ಸಂಸ್ಕøತಿ ಸೇರಿದಂತೆ ಎಲ್ಲಾ ಕ್ಷೇತ್ರಗಳನ್ನು ಅತ್ಯಂತ ಶ್ರೀಮಂತವಾಗಿತ್ತು, ಆ ತಗವೈಭವ ಮರು ಕಳಿಸಬೇಕಾಗಿದೆ.- ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಜಿಲ್ಲಾಧ್ಯಕ್ಷರು, ಕಸಾಪ ಕಲಬುರಗಿ.

ಸಾಹಿತ್ಯ ಕ್ಷೇತ್ರದತ್ತ ಯುವ ಸಮುದಾಯ ಸೇರಿದಂತೆ ಹೆಚ್ಚೆಚ್ಚು ಜನರು ಕನ್ನಡ ಸಾಹಿತ್ಯದತ್ತ ಒಲವು ತೋರಬೇಕು, ಕೆಂಬಾಳೆ ಖ್ಯಾತಿಯ ಕಮಲಾಫುರದಲ್ಲಿ ನಿತ್ಯ ನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಲ್ಳುವುದರ ಮೂಲ ಸಾಂಸ್ಕøತಿಕ ವಲಯನ್ನು ನಿರ್ಮಿಸುತ್ತೇವೆ. – ಸುರೇಶ ಲೇಂಗಟಿ ಅಧ್ಯಕ್ಷರು, ಕಸಾಪ ಕಮಲಾಪುರ.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

1 hour ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

2 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

2 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

2 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

3 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

3 hours ago