ಬಿಸಿ ಬಿಸಿ ಸುದ್ದಿ

ಪಿ.ಡಿ.ಎ. ಕಾಲೇಜಿನಲ್ಲಿ “ಆವಿಷ್ಕಾರ ಚಟುವಟೆಕೆ” ವಿಶೇಷ ಉಪನ್ಯಾಸ

ಕಲಬುರಗಿ: ಸಾಮಾಜಕ್ಕೆ ಹಾಗೂ ವಾತಾವರಣಕ್ಕೆ ಅನಲೂಕರವಾಗಿರುವ ಆವಿಷ್ಕಾರಕ್ಕೆ ಒತ್ತು ನೀಡಬೇಕು ಹಾಗೂ ಆ ನಿಟ್ಟಿನಲ್ಲಿ ನಮ್ಮ ಸಂಶೋಧನಾ ಕಾರ್ಯವನ್ನು ಮುನ್ನಡೆಸಬೇಕೆಂದು ಬೆಂಗಳೂರು ಮೂಲದ ಫ್ಲೆಕ್ಸಿಟ್ರಾನ್ ಮುಖ್ಯಸ್ಥರಾದ ಆರ್. ಎಸ್. ಹಿರೇಮಠ ಅವರು ತಿಳಿಸಿದರು ಅವರು ಇಂದು ಇಲ್ಲಿನ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಐಎಸ್‍ಪಿ ಸೆಲ್‍ನ ಅಡಿಯಲ್ಲಿ ಆಯೋಜಿಸಲಾಗಿದ್ದ “ಆವಿಷ್ಕಾರ ಚುಟುವಟಿಕೆಗಳ ಅವಲೋಕನ” ಕುರಿತು ನೀಡಿದ ವಿಶೇಷ ಉನ್ಯಾಸದಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಪಿ.ಡಿ.ಎ. ಐ.ಎಸ್.ಪಿ. ಸೆಲ್ ವಿದ್ಯಾಥಿಗಳಲ್ಲಿ ವಿವಿಧ ಕ್ಷೇತ್ರದ ಸಂಶೋಧನಾ ಮತ್ತು ಆವಿಷ್ಕಾರ ಕುರಿತು ಪ್ರಾಯೋಗಿಕ ತರಬೇತಿ ನೀಡುವಲ್ಲಿ ನಿರತವಾಗಿದ್ದು ಅವರ ಆವಿಷ್ಕಾರಕ್ಕೆ ಬೇಕಾಗುವ ಉಪಕರಣ ಹಾಗೂ ನುರಿತ ಶಿಕ್ಷಕ ತರಬೇತುದಾರರನ್ನು ಒದಗಿಸುವ ಸೌಲಭ್ಯ ಹೊಂದಿದೆ.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು ವಿದ್ಯಾರ್ಥಿಗಳ ವಿವಿಧ ಆವಿಷ್ಕಾರಗಳನ್ನು ಪರಿಶೀಲಿಸಿದರು. ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಮತ್ತು ಮಷಿನ್ ಲರ್ನಿಂಗ್ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ “ಅಂಧರಿಗೆ ಮಾರ್ಗದರ್ಶನ ಮಾಡುವ ಕನ್ನಡಕ”ವು ಉತ್ತಮ ಆವಿಷ್ಕಾರವಾಗಿದ್ದು ಅಂಧರ ಎದುರಿಗೆ ಇರುವ ಅಡೆತಡೆಗಳನ್ನು ಪರಿಶಿಲಿಸಿ ಅವರಿಗೆ ಮನವರಿಕೆ ಮಾಡುವ ವಿಧಾನವನ್ನು ಕಂಪ್ಯೂಟರ್ ‘ಸಿ’ ಪ್ರೊಗ್ರಾಮ್ ಅಳವಡಿಸಿ ತಯ್ಯಾರಿಸಲಾಗಿದೆ. ಅದೇ ರೀತಿ ಸ್ವಯಂ ಚಾಲಿತ ಟೂಲ್ ಗೇಟ್ ಆವಿಷ್ಕರವು ಎಲ್ಲರ ಮೆಚ್ಚುಗೆ ಗಳಿಸಿತು.

ಅದೇ ರೀತಿ ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಮತ್ತು ಮಷಿನ್ ಲರ್ನಿಂಗ್ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳ ವಿವಿಧ ಆವಿಷ್ಕಾರಗನ್ನು ಪ್ರದರ್ಶಿಸಲಾಯಿತು. ಪಿ.ಡಿ.ಎ. ಕಾಲೇಜಿನ ಐ.ಎಸ್.ಪಿ. ಸೆಲ್ ಸಂಶೋದನೆ, ಆವಿಷ್ಕಾರ ಹಾಗೂ ಸ್ಟಾರ್ಟಅಪ್‍ಗಾಗಿ ಮೀಸಲಾಗಿದ್ದು ವಿದ್ಯಾರ್ಥಿಗಳಲ್ಲಿ ಆವಿಷ್ಕಾರ ಪ್ರವತ್ರ್ತಿಯನ್ನು ಬೆಳೆಸಲು ಶ್ರಮಿಸುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಂಕೆಂದು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಸ್. ಆರ್. ಮೀಸೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು,

ಪಿ.ಡಿ.ಎ. ಐ ಎಸ್. ಪಿ. ಸೆಲ್‍ನ ಸಂಚಾಲಕರಾದ ಡಾ. ಶ್ರೀದೇವಿ ಸೋಮಾ ಅವರು ಐ ಎಸ್. ಪಿ. ಸೆಲ್‍ನ ಸಮಗ್ರ ಮಾಹಿತಿ ಒದಗಿಸಿದರು. ಈ ಸಂದರ್ಭದಲ್ಲಿ ಸರಕಾರಿ ಐಟಿಐ ಪ್ರಾಚಾರ್ಯರರಾದ ಪ್ರೊ. ಮುರಳಿ ರತ್ನಗಿರಿಯವರು ಮಾತನಾಡಿ ಸಂಶೋಧನೆಗಾಗಿ ಸರಕಾರದಿಂದ ಅನುದಾನವನ್ನು ಪಡೆದುಕೊಳ್ಳುವ ಮಾಹಿತಿಯವನ್ನು ತಳಿಸಿದರು. ಮಹಾವಿದ್ಯಾಲಯದ ಉಪ-ಪ್ರಾಚಾರ್ಯರಾದ ಡಾ, ಭಾರತಿ ಹರಸೂರ ಅವರ ಸರ್ವರಿಗೂ ಸ್ವಾಗತ ಕೋರಿದರು ಹಾಗೂ ಕಾರ್ಯಕ್ರಮದ ಸಂಚಾಲಕರಾದ ಪವನ್ ರಂಗದಾಳ ವಂದಿಸಿದರು.

ಈ ಸಂದರ್ಭದಲ್ಲಿ ಹೈದ್ರಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಬಸವರಾಜ ಜೆ. ಖಂಡೆರಾವ, ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಸ್. ಆರ್. ಮೀಸೆ, ಉಪ-ಪ್ರಾಚಾರ್ಯ(ಶೈಕ್ಷಣಿಕ) ಡಾ. ಭಾರತಿ ಹರಸೂರ, ಸಂಯೋಜಕರಾದ ಡಾ. ಶ್ರೀದೇವಿ ಸೋಮಾ, ಸಂಚಾಲಕರಾದ ಡಾ. ರಾಕೇಶ ಹುಡೆದ, ಪವನ ರಂಗದಾಳ ಹಾಗೂ ಶಿಕ್ಷರಾದ ಡಾ. ವಿಶ್ವನಾಥ ಬುರಕಪಳ್ಳಿ, ಅಶೋಕ ಪಾಟೀಲ ಹಾಗೂ ಇತರರು ಉಪಸ್ಥಿತರಿದ್ದರು.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

11 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

11 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

13 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

13 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

13 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

14 hours ago