ಹೊಸಪೇಟೆ: ನೂತನ ವಿಜಯನಗರ ಜಿಲ್ಲೆಯಲ್ಲಿ ವಿಜಯನಗರ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅನ್ನು ಸ್ಥಾಪನೆಗೊಳಿಸಿ ಪದಾಧಿಕಾರಿಗಳನ್ನ ನೇಮಕ ಮಾಡಲಾಯಿತು.
ಸದರಿ ಅಸೋಸಿಯೇಷನ್ ಗೆ ಜಿಲ್ಲಾಧ್ಯಕ್ಷರಾಗಿ ಗುಜ್ಜಲ ರಾಮಾಂಜಿನಿ, ಗೌರವಾಧ್ಯಕ್ಷರಾಗಿ ಮಧುಸೂಧನ್ ಕುಲ್ಕರ್ಣಿ, ಹಿರಿಯ ಸಲಹೆಗಾರರಾಗಿ ಮೋಹನ್ ಕುಮಾರ್ ದಾನಪ್ಪ, ಉಪಾಧ್ಯಕ್ಷರಾಗಿ ವೀರಾಂಜನೇಯ, ಕೆ.ಎಸ್. ಸತ್ಯನಾರಾಯಣ ವಕೀಲರು, ಹೊನ್ನೂರ ಅಲಿ, ಕೆ. ನಾಗೇಂದ್ರ, ಪ್ರಧಾನ ಕಾರ್ಯದರ್ಶಿಯಾಗಿ ಜಿ. ಗಣೇಶ್, ಸಂಘಟನಾ ಕಾರ್ಯದರ್ಶಿಯಾಗಿ ಭೋಯ್ಯ ಉಮೇಶ್ ಕುಮಾರ್, ಸಹ ಕಾರ್ಯದರ್ಶಿಯಾಗಿ ಬಿ.ಎಂ. ಮಲ್ಲಿಕಾರ್ಜುನ್, ಜಂಟಿ ಕಾರ್ಯದರ್ಶಿಯಾಗಿ ಅಶೋಕ್ ಕುಮಾರ್, ರಾಘವೇಂದ್ರ, ಖಜಾಂಚಿಯಾಗಿ: ಮಹೇಶ್. ಬಿ.ಸಿ. ಕಾನೂನು ಸಲಹೆಗಾರರು: ಕೆ. ಯೂಸುಫ್ ವಕೀಲರು, ಡಿ. ವೀರನ ಗೌಡ ವಕೀಲರು, ಛೇರ್ಮನ್: ಪರಶುರಾಮ್, ವಿಜಯನಗರ ಜಿಲ್ಲಾ ರೆಫರಿ ಬೋರ್ಡ್ ಛೇರ್ಮನ್: ರಾಮು, ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ: ವಾಲ್ಮೀಕಿ ಅಂಬಣ್ಣ, ಯು.ಕೆ.ಬಸವರಾಜ್, ರಾಘವೇಂದ್ರ ಗುರಿಕಾರ್, ಕೆ. ಮಂಜುನಾಥ್ ರವರುಗಳನ್ನ ಸರ್ವಾನುಮತದಿಂದ ಆಯ್ಕೆ ಮಾಡಿ ನೇಮಕ ಮಾಡಲಾಯಿತು!
ನಂತರ ಮಾತನಾಡಿದ ನೂತನ ಜಿಲ್ಲಾಧ್ಯಕ್ಷ ಗುಜ್ಜಲ ರಾಮಾಂಜಿನಿ ನೂತನ ವಿಜಯನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ನೂರಾರು ಜನ ಕಬಡ್ಡಿ ಆಟಗಾರರಿದ್ದು ಅವರಿಗೆ ಸರಿಯಾದ ವೇದಿಕೆ ಸಿಗದೇ ಜಿಲ್ಲೆಯಲ್ಲಿ ಕಬಡ್ಡಿ ಅವಸಾನದ ಹಂಚಿನಲ್ಲಿದೆ ಹಾಗಾಗಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ತಾಲೂಕುಗಳಲ್ಲಿ ಈಗಾಗಲೇ ಕಾನೂನು ಪ್ರಕಾರ ತಾಲೂಕು ಘಟಕಗಳನ್ನ ರಚಿಸಲಾಗಿದ್ದು ಆಯಾ ತಾಲೂಕು ಮಟ್ಟದಿಂದಲೇ ಕಬಡ್ಡಿ ತರಬೇತಿ ನೀಡಿ ಪ್ರೋತ್ಸಾಯಿಸುವುದಾಗಿ ತಿಳಿಸಿದರು,
ನಂತರ ಮಾತನಾಡಿದ ಹಿರಿಯ ಸಲಹೆಗಾರ ಮೋಹನ್ ಕುಮಾರ್ ದಾನಪ್ಪ ಇತ್ತೀಚಿಗೆ ಯುವಕರು ಪಾಶ್ಚತ್ಯ ಕ್ರೀಡೆಗಳ ಬಗ್ಗೆ ಒಲವು ತೋರಿ ಗ್ರಾಮೀಣ ಕ್ರೀಡೆಗಳ ಬಗ್ಗೆ ಆಸಕ್ತಿಯಿಲ್ಲದೆ ಇರುವುದು ಬೇಸರದ ಸಂಗತಿಯಾಗಿದ್ದು ದೇಶಿಯ ಕಬಡ್ಡಿ ಆಟವನ್ನ ಉತ್ತೇಜಿಸಿ ಸೂಕ್ತ ವೇದಿಕೆಯನ್ನ ಕಲ್ಪಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು,
ನಂತರ ಅಸೋಸಿಯೇಷನ್ ನ ಹಿರಿಯ ಸಲಹೆಗಾರರು ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರಿಗೆ ವಿಜಯನಗರ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಲಾಯಿತು!
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಜೈ ಕನ್ನಡಿಗರ…
ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…