ಕಲಬುರಗಿ : ನಗರದ ಜೇವರ್ಗಿ ಕ್ರಾಸ್ ಹತ್ತಿರವಿರುವ ಮಾಲು ಅಪಾಟ್ಮೆರ್ಂಟ್ ನಲ್ಲಿ ಇದೆ 24 ರಂದು ಬೆಳಿಗ್ಗೆ 9 ಗಂಟೆಗೆ ಸಂಯುಕ್ತ ರಾಷ್ಟ್ರ ಸಂಸ್ಥೆಯ (ಯುಎನ್‍ಒ) ಧ್ವಜಾರೋಹಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಮುಖರಾದ ಮುರುಗೇಂದ್ರ ಚಿಂಚೋಳಿಮಠ ತಿಳಿಸಿದರು.
ನಾವು ವಾಸಿಸುವಂತಹ ಈ ಭೂಮಿಯಲ್ಲಿ ಶಾಂತಿ-ನೆಮ್ಮದಿ ಅಭಿವೃದ್ಧಿ ನೆಲೆಸಬೇಕಾದರೆ ಈಗಿರುವ ವ್ಯವಸ್ಥೆಯನ್ನು ಬದಲಿಸಬೇಕಾಗಿದೆ. ಕೆಳಮಟ್ಟದಿಂದ ಹಿಡಿದು ಅಭಿವೃದ್ಧಿಯಾಗಬೇಕಾದರೆ ರಾಜಕಾರಣ ಸುಧಾರಿಸಲು Uಓಔ ಸಂಸ್ಥೆ ಬಲಪಡಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಎರಡನೇ ಮಹಾಯುದ್ಧ ನಡೆದ ಮೇಲೆ ಭೂಮಿಯ ಮೇಲೆ ಇನ್ನೆಂದು ಯುದ್ಧ ನಡೆಯಬಾರದು ಎಂದು 1945 ಅಕ್ಟೊಬರ್ 24 ರಂದು ಯುಎನ್‍ಒ ಸ್ಥಾಪನೆಯಾಯಿತು. ಆದರೂ ಸಹ ಇಲ್ಲಿಯವರೆಗೆ ಅನೇಕ ರೀತಿಯಲ್ಲಿ ಅವಘಡಗಳು ಸಂಭವಿಸಿವೆ. ರಾಷ್ಟ್ರ ರಾಷ್ಟ್ರಗಳ ಮಧ್ಯೆ ನಡೆಯುವ ಸರಹದ್ದಿನ ಸಮಸ್ಯೆ ನೈಸರ್ಗಿಕ ಸಮಸ್ಯೆ ಮತ್ತು ಜನಾಂಗೀಯ ಸಮಸ್ಯೆಗಳು ಮುಖ್ಯವಾಗಿ ಧಾರ್ಮಿಕ ಭಿನ್ನಾಭಿಪ್ರಾಯ ಭಿನ್ನಾಭಿಪ್ರಾಯ ಮಾತುಕತೆಯಿಂದ ಬಗೆಹರಿಸಬಹುದು ಇಲ್ಲವೇ ಅಂತರಾಷ್ಟ್ರೀಯ ನ್ಯಾಯಾಲಯಗಳನ್ನು ಸ್ಥಾಪಿಸಿ ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದರು.
ನಮ್ಮನ್ನಾಳುವ ಜನಪ್ರತಿನಿಧಿಗಳಿಂದ ಇತ್ತೀಚಿಗೆ ರಾಜ್ಯದಲ್ಲಿ ಅಶಾಂತಿ ಕೋಮುಗಲಭೆ ನಿರ್ಮಾಣವಾಗುತ್ತಿದೆ ಅದಕ್ಕಾಗಿ ವಿಶ್ವದಾದ್ಯಂತ ಯುಎನ್‍ಒ ಸ್ಥಾಪನೆಯ ದಿನಾಚರಣೆ ಮಾಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಭುಲಿಂಗ ಮಹಾಗವಕರ್, ಸಂಗಮೇಶ ಗುಬ್ಬೆವಾಡ, ಸಿದ್ರಾಮಪ್ಪ, ಅಶೋಕ್ ಜವಾಜಿ, ಶಿವಶರಣಪ್ಪ ಸೇರಿದಂತೆ ಇತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…