ಕಲಬುರಗಿ: ಬಸವಾದಿ ಶರಣರ ಸಮ ಸಮಾಜದ ಪರಿಕಲ್ಪನೆಯ ಅರಿವು ಮತ್ತು ಆಶಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸದಾಶಯದೊಂದಿಗೆ ನಾಡಿನಾದ್ಯಂತ ನಡೆಯುತ್ತಿರುವ ‘ಮತ್ತೆ ಕಲ್ಯಾಣ’ ಎಂಬ ವಚನ ಚಳವಳಿ ರೂಪದ ಆಂದೋಲನ ಆಗಷ್ಟ್ 29 ರಂದು ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಸಾರಂಗಮಠದ ಜಗದ್ಗುರು ಪೂಜ್ಯ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ದಿವ್ಯ ನೇತೃತ್ವದಲ್ಲಿ ಜರುಗಲಿದೆ.
ಆ ಪ್ರಯುಕ್ತ ರವಿವಾರ ಕಲಬುರಗಿಯ ಸುಲಫಲ ಮಠದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸ್ಚಾಗ ಸಮಿತಿಯೊಂದನ್ನು ರಚನೆಯಾಗಿದ್ದು, ಅಧ್ಯಕ್ಷರಾಗಿ ಶರಣು ಪಪ್ಪಾ, ಗೌರವಾಧ್ಯಕ್ಷರಾಗಿ ಎಂಎಲ್ಸಿ ತಿಪ್ಪಣಪ್ಪ ಕಮಕನೂರ, ಕಾರ್ಯಾಧ್ಯಕ್ಷರಾಗಿ ರವೀಂದ್ರ ಶಾಬಾದಿ, ಆರ್.ಜಿ.ಶಟಗಾರ, ಕೋಶಾಧ್ಯಕ್ಷರಾಗಿ ಬಸವರಾಜ ಧೂಳಾಗುಂಡಿ, ಬಸವರಾಜ ಮೊರಬದ, ಪ್ರಧಾನ ಕಾರ್ಯದರ್ಶಿಯಾಗಿ ಮಹಾಂತೇಶ ಕಲಬುರಗಿ, ಮಹಿಳಾ ಘಟಕದ ಅಧ್ಯಕ್ಷರಾಗಿ ನ್ಯಾಯವಾದಿ ಮಾಲತಿ ರೇಷ್ಮಿ, ಕಾರ್ಯಾಧ್ಯಕ್ಷರಾಗಿ ಜಗದೇವಿ ಚಟ್ಟಿ ಅವರುಗಳು ಆಯ್ಕೆಗೊಂಡ ಹಿನ್ನೆಲೆಯಲ್ಲಿ ಹೂಗುಚ್ಚ ನೀಡಿ ಗೌರವಿಸಲಾಯಿತು.
ಸಾರಂಗಮಠದ ಜಗದ್ಗುರು ಪೂಜ್ಯ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು, ಚವದಾಪುರಿ ಹಿರೇಮಠದ ಪೂಜ್ಯ ಶ್ರೀ ರಾಜಶೇಖರ ಶಿವಾಚಾರ್ಯರು, ಗುರುಬಸವ ಬ್ರಹನ್ಮಠದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು, ಬಸವ ಕೇಂದ್ರದ ಸೋಮಣ್ಣ ನಡಕಟ್ಟಿ, ಮಾಜಿ ಶಾಸಕ ಬಿ.ಆರ್.ಪಾಟೀಲ, ಪ್ರಮುಖರಾದ ಬಸವರಾಜ ತಡಕಲ್, ಪ್ರೊ.ಆರ್.ಕೆ ಹುಡಗಿ, ದೇವೇಗೌಡ ತೆಲ್ಲೂರ, ಮಲ್ಲಪ್ಪ ಹೊಸಮನಿ, ಸಂಘಟಕರಾದ ಸುನೀಲ ಹುಡಗಿ, ವಿಜಯಕುಮಾರ ತೇಗಲತಿಪ್ಪಿ, ಪರಮೇಶ್ವರ ಶಟಕಾರ, ಪತ್ರಕರ್ತ-ಸಾಹಿತಿ ಶಿವರಂಜನ್ ಸತ್ಯಂಪೇಟೆ ಸೇರಿ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…