ಶಹಾಬಾದ: ಎಲ್ಲಾ ಸಂಘಗಳಿಗೂ ಮಾದರಿಯಾದ ಹಾಗೂ ಪಾರದರ್ಶಕತೆಯನ್ನು ಕಾಪಾಡುವ ಶಿಕ್ಷಣ ಸಂಘಟನೆಯ ಏಕೈಕ ಸಂಸ್ಥೆ ಎಂದರೆ ಸ್ಕೂಪ್ಸ್ ಎಂದು ಸ್ಕೂಪ್ಸ್ ಸಂಸ್ಥಾಪಕ ಗುರುಪಾದ ಕೋಗನೂರ ಹೇಳಿದರು.
ಅವರು ಶನಿವಾರ ನಗರದ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘ (ಸ್ಕೂಪ್ಸ್) ತಾಲೂಕಾ ಘಟಕ ವತಿಯಿಂದ ಆಯೋಜಿಸಲಾದ ಅಭಿನಂದನಾ ಹಾಗೂ ಶ್ವೇತ ಪತ್ರ ಬಿಡುಗಡೆ ಸಮಾರಂಭದ ಪಾಲ್ಗೊಂಡು ಮಾತನಾಡಿದರು.
ಜಿಲ್ಲೆಯಲ್ಲಿ 22 ಶಿಕ್ಷಕರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ನಮ್ಮ ಸ್ಕೂಪ್ಸ್ ಸಂಘ ಯಾವ ಸಂಘದ ವಿರುದ್ಧವೂ ಮತ್ತು ಪರ್ಯಾಯವೂ ಅಲ್ಲ. ಇದೊಂದು ಶೈಕ್ಷಣ ಹಾಗೂ ಹೋರಾಟದ ಸಂಘವಾಗಿದೆ. ಈಗಾಗಲೇ ಶಿಕ್ಷಕರ ದಿನಾಚರಣೆ ನಿಮಿತ್ತ ಎಲೆ ಮರೆಯ ಕಾಯಿಯಂತಿರುವ ಉತ್ತಮ ಶಿಕ್ಷಕರಿಗೆ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸುವುದರ ಮೂಲಕ ಅವರಿಗೆ ಗೌರವ ಸಲ್ಲಿಸಲಾಗಿದೆ.ಆ ಕಾರ್ಯಕ್ರಮದ ಖರ್ಚು ವೆಚ್ಚಗಳನ್ನು ಎಲ್ಲರ ಮುಂದೆ ಇಡುವ ಮೂಲಕ ಸ್ಕೂಪ್ಸ್ ಸಂಘದ ಪಾರದರ್ಶಕತೆಯನ್ನು ಕಾಪಾಡುವ ಏಕೈಕ ಸಂಸ್ಥೆಯಾಗಿದೆ ಎಂದು ಹೇಳಿದರು.
ಸ.ಕ.ಉ.ಪ್ರ.ಸಂಘದ ಜಿಲ್ಲಾಧ್ಯಕ್ಷೆ ಸಾವಿತ್ರಿ ಪಾಟೀಲ ಮಾತನಾಡಿ, ಕೆಜಿಯಿಂದ ಪಿಜಿಯವರೆಗಿನ ಎಲ್ಲಾ ಉಪಾಧ್ಯಯರನ್ನು ಒಳಗೊಂಡ ಸಂಘವೆಂದರೆ ಸ್ಕೂಪ್ಸ್. ಶಿಕ್ಷಣ, ಶಿಸ್ತು, ಸಂಘಟನೆ,ಸೇವೆ ಹಾಗೂ ಸನ್ಮಾನ ಎಂಬ ಉದ್ದೇಶವನ್ನು ಹೊತ್ತು ನಮ್ಮ ಸಂಸ್ಥೆ ಮುನ್ನಡೆಯುತ್ತಿದೆ. ರಾಜ್ಯದಲ್ಲಿಯೇ ಮೊಟ್ಟ ಮೊದಲನೆದಾಗಿ ತಾಲೂಕಾ ಘಟಕವನ್ನು ರಚನೆಯಾಗಿದ್ದು ಹಾಗೂ ಉದ್ಘಾಟನೆಯಾಗಿದ್ದು ಶಹಾಬಾದನಲ್ಲಿ.ಇದನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲಾಗುತ್ತಿದೆ.ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿದ ಸಂಘ ನಮ್ಮದಾಗಿದೆ ಎಂದರು.
ಆದರ್ಶ ಉಪಾಧ್ಯಾಯ ಪ್ರಶಸ್ತಿ ಪುರಸ್ಕøತ ಬಿಲ್ಲವ ಮಾತನಾಡಿ, ಪೂರ್ವ ಪ್ರಾಥಮಿಕ ಶಾಲೆಯಿಂದ ಹಿಡಿದು ವಿಶ್ವವಿದ್ಯಾಲಯದ ಶಿಕ್ಷಕರನ್ನು ಒಟ್ಟುಗೂಡಿಸುವ ವಿಶಿಷ್ಟ ಸಂಸ್ಥೆ ಸ್ಕೂಪ್ಸ್ ಆಗಿದೆ. ಎಲ್ಲಾ ಕ್ಷೇತ್ರದ ಜನರನ್ನು ಸನ್ಮಾನಿಸಿ ಪ್ರೋತ್ಸಾಹಿಸುವ ಕೆಲಸ ಸಂಘ ಮಾಡುತ್ತಿದೆ. ಕಲಬುರಗಿ ಕೇಂದ್ರ ಸ್ಥಾನದಲ್ಲಿ ಸ್ಥಾಪನೆಯಾಗಿರುವ ಈ ಸಂಸ್ಥೆ ಶಿಕ್ಷಕರಿಗೆ ಉತ್ತೇಜನ ನೀಡಲಿ ಎಂದು ಆಶಿಸಿದರು.
ರಾಸ.ಕ.ಉ.ಪ್ರ.ಸಂಘದ ರಾಜ್ಯ ಸಲಹೆಗಾರ ಬಾಬುರಾವ ಕುಲಕರ್ಣಿ ಮಾತನಾಡಿದರು. ಸ.ಕ.ಉ.ಪ್ರ.ಸಂಘದ ತಾಲೂಕಾಧ್ಯಕ್ಷೆ ವಿಜಯಲಕ್ಷ್ಮಿ.ಎಂ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಉಪಾಧ್ಯಕ್ಷ ಹಣಮಂತರಾಯ ಬಿರಾದಾರ, ಪ್ರ.ಕಾರ್ಯದರ್ಶಿ ಅಮ್ಜದ್ ಮುಲ್ಲಾಳ,ಕ.ಸಾ.ಫು.ಶಿ.ಸಂಘದ ಅಧ್ಯಕ್ಷೆ ಕಲಾವತಿ.ಎನ್.ನೆಲೋಗಿ, ಸ.ಕ.ಉ.ಪ್ರ.ಸಂಘದ ರಾಜ್ಯ ಸಹಕಾರ್ಯದರ್ಶಿ ವೆಂಕಟರೆಡ್ಡಿ, ನಿಂಗಮ್ಮ, ಉಪಾಧ್ಯಕ್ಷೆ ಅಂಬಿಕಾ ಹಂಗರಗಿ ,ಕಾಶಿನಾಥ ತಂಬಾಕೆ, ವಿಮಲಾ ಪಾಟೀಲ ಇತರರು ಇದ್ದರು.
ಇದೇ ಸಂದರ್ಭದಲ್ಲಿ ನಗರದ ಎಸ್.ಎಸ್.ಮರಗೋಳ ಕಾಲೇಜಿ ಪ್ರಾಂಶುಪಾಲ ಕೆ.ಬಿ.ಬಿಲ್ಲವ ಹಾಗೂ ಪೇಠಸಿರೂರ ಪ್ರಾಥಮಿಕ ಶಾಲೆಯ ಶಿಕ್ಷಕ ರವಿಕುಮಾರ ಅವರನ್ನು ಆದರ್ಶ ಉಪಾಧ್ಯಾಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…