ಕಲಬುರಗಿ: ಇಲ್ಲಿನ ಬಸವ ನಗರದ ನಿವಾಸಿ ಆಟೋ ಚಾಲಕನ ಮಗಳು ಹನ್ನೇರಡು ವರ್ಷದ ಸಂಜನಾ ಶ್ರೀಮಂತ ವಿದ್ಯಾರ್ಥಿನಿಗೆ ಹೃದಯದಲ್ಲಿ ರಂಧ್ರವಿದ್ದು, ತುರ್ತಾಗಿ ಶಸ್ತ್ರಚಿಕಿತ್ಸೆಗೆ ಕೆಕೆಆರ್‍ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ವೈಯಕ್ತಿಕವಾಗಿ ಧನ ಸಹಾಯ ಮಾಡಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಕಿ ಎಂದು ಶುಭ ಕೋರಿದರು.
ಬೆಂಗಳೂರು ಜಯದೇವ ಹೃದ್ರಾಲಯದಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸಬೇಕಿದ್ದು, ಬಡ ಕುಟುಂಬ ಬೆಂಗಳೂರಿಗೆ ಹೋಗೋದು ಕಷ್ಟವಾಗಿದೆ. ಹೀಗಾಗಿ ಸಂಜನಾಳ ತಂದೆ ಶ್ರೀಮಂತ ಮಾವಿನ ಹಾಗೂ ತಾಯಿ ಅನೀತಾ ಮಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂದು ಚಿಂತೆಯಲ್ಲಿ ಮುಳುಗಿದ್ದಾರೆ.ವೈದ್ಯರು ಚಿಕಿತ್ಸೆ ತುರ್ತಾಗಿ ಮಾಡಬೇಕು. ಶಸ್ತ್ರಚಿಕಿತ್ಸೆ ಮಾಡೋದು ಕಷ್ಟದಾಯಕವಾಗಿದೆ. ಪ್ರಯತ್ನ ಮಾಡೋದು ತಮ್ಮಿಚ್ಚೆ ಮುಂದಿನದ್ದು ದೈವಿಚ್ಚೆ ಎಂದಿದ್ದಾರೆ.
ಶಸ್ತ್ರಚಿಕಿತ್ಸೆ ಚಿಕಿತ್ಸೆ ಉಚಿತವಾಗುತ್ತದೆ. ಆದರೆ ಇತರ ಖರ್ಚು ವೆಚ್ಚಗಳು ಬರುತ್ತವೆ. ವಿದ್ಯಾರ್ಥಿನಿ ಸಂಜನಾ ಪ್ರತಿಭಾನ್ವಿತೆ ಹೊಂದಿದ್ದು ಹಾಗೂ ಕುಟುಂಬ ಸಂಕಷ್ಟ ಕಂಡು ವೈಯಕ್ತಿಕ ವಾಗಿ ಸಹಾಯ ಕಲ್ಪಿಸಲಾಗಿದೆ ಎಂದು ಅಪ್ಪುಗೌಡ ಈ ಸಂದರ್ಭದಲ್ಲಿ ತಿಳಿಸಿದರು.
ಸಹಾಯ ಮಾಡಲಿಚ್ಚಿಸುವರು ಅನಿತಾ ತಂದೆ ಪರಶುರಾಮ ಬ್ಯಾಂಕ್ ಖಾತೆ ನಂ 40342631166 ಎಸ್ ಬಿಐ ಹುಸೇನ್ ಗಾರ್ಡನ್ ಶಾಖೆಯ ಖಾತೆಗೆ ಆರ್ಥಿಕ ಸಹಾಯ ಕಲ್ಪಿಸಬಹುದು ಎಂದು ಕುಟುಂಬದ ವರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9663934315 ಸಂಪರ್ಕಿಸಬಹುದಾಗಿದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…